ಮಡಿಕೇರಿ, ಅ. ೨೯: ಕೊಡಗಿನವರಾದ ಖ್ಯಾತ ಬ್ಯಾಡ್ಮಿಂಟನ್ ಪಟುಗಳಾದ ಮಾಳೆಯಂಡ ಅಶೋಕ್ ಹಾಗೂ ಅರುಣ್ ಪೂವಯ್ಯ ಅವರುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನ ಮಾಡಿ ಗೌರವಿಸಿದರು. ೪೫ ವರ್ಷಗಳ ಕಾಲ ಬ್ಯಾಡ್ಮಿಂಟನ್ ಕ್ರೀಡಾ ಕ್ಷೇತ್ರದಲ್ಲಿ ಇವರಿಬ್ಬರು ರಾಜ್ಯ ಹಾಗೂ ರಾಷ್ಟಿçÃಯ ಮಟ್ಟದಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಿ ಅವರುಗಳನ್ನು ಗೌರವಿಸಲಾಯಿತು.
ಮೂಲತಃ ನೆಲಜಿ ಗ್ರಾಮದವರಾದ ಸಹೋದರರು ಪ್ರಸ್ತುತ ಬ್ಯಾಡ್ಮಿಂಟನ್ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 
						