ಕೂಡಿಗೆ, ಅ. ೨೯: ಹೆಚ್ಚಿನ ಪ್ರಮಾಣದ ಧ್ವನಿ ವರ್ಧಕಗಳನ್ನು ಬಳಸಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದ ಪ್ರವಾಸಿ ಬಸ್‌ಗಳನ್ನು ಪತ್ತೆಹಚ್ಚಿ ಪೊಲೀಸರು ದಂಡ ವಿಧಿಸಿದ್ದಾರೆ.
ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಹಿಂತಿರುಗುವ ಸಂದರ್ಭದಲ್ಲಿ ವಿವಿಧ ಪ್ರವಾಸಿಗರ ವಾಹನಗಳಿಂದ ವಿಪರೀತ ಶಬ್ದ ಮಾಲಿನ್ಯವಾಗತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆ ಪರಿಶೀಲಿಸಿದ ಸಂದರ್ಭ ಕೇರಳದ ಪ್ರವಾಸಿ ೪ಏಳನೇ ಪುಟಕ್ಕೆ ಕುಶಾಲನಗರದ ಸುತ್ತ ಮುತ್ತಲಿನ ಪ್ರವಾಸಿ ತಾಣಗಳ ವೀಕ್ಷಣೆ ಮಾಡಿ ನಗರದ ಮುಖ್ಯ ರಸ್ತೆಯಲ್ಲಿ ಹೋಗುವ ಸಂದರ್ಭದಲ್ಲಿ ಹೆಚ್ಚು ಶಬ್ದ ಮಾಲಿನ್ಯ ಮಾಡಿದ ವಾಹನಗಳನ್ನು ಕುಶಾಲನಗರ ಸಂಚಾರಿ ಪೊಲೀಸ್ ಅಧಿಕಾರಿ ವರ್ಗದವರು ಪತ್ತೆಹಚ್ಚಿ ಚಾಲಕರಿಗೆ ಸ್ಥಳದಲ್ಲಿ ದಂಡ ವಿಧಿಸಿದರು.