ಗೋಣಿಕೊಪ್ಪಲು, ಅ. ೨೯: ಸಮರ್ಪಕ ಮಾಹಿತಿ ನೀಡದೆ ನಿರ್ಲಕ್ಷö್ಯ ತಾಳಿರುವ ಅಧಿಕಾರಿಗಳ ವಿರುದ್ಧ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕಿಡಿಕಾರಿದರು.

ಪೊನ್ನಂಪೇಟೆ ಸಾಮರ್ಥ್ಯಸೌಧದ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ೨೦೨೬-೨೭ ನೇ ಸಾಲಿನ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ಸಮಿತಿ ಸಭೆಯಲ್ಲಿ ಅಧಿಕಾರಿಗಳು ಪೂರ್ವ ತಯಾರಿ ಇಲ್ಲದೆ ಸಭೆಗೆ ಆಗಮಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುವಂತೆ ಖಡಕ್ ಸೂಚನೆ ನೀಡಿದರು.

ತಾಲೂಕು ಮಟ್ಟದ ಅಧಿಕಾರಿಗಳು ತರಾತುರಿಯಲ್ಲಿ ನೀಡಿದ ಅಂಕಿ ಅಂಶಗಳು ಒಂದಕ್ಕೊAದು ಸಂಬAಧ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮುಂದೆ ನಡೆಯುವ ಸಭೆಗೆ ಸಮರ್ಪಕವಾದ ಅಂಕಿ ಅಂಶಗಳ ಪಟ್ಟಿಯನ್ನು ಸಭೆಯ ಮುಂದಿಡಬೇಕು. ಇದೇ ಮೊದಲ ಬಾರಿಗೆ ನಡೆದ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ಸಭೆಗೆ ಪೂರ್ವ ತಯಾರಿ ಇಲ್ಲದೆ ಬಂದಿರುವುದು ಸರಿಯಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಕೂಡ ಅಧಿಕಾರಿಗಳ ಕಾರ್ಯವೈಖರಿಗೆ ಗರಂ ಆದರು. ಶಾಸಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಲ್ಲಿ ಅಧಿಕಾರಿಗಳು ವಿಫಲರಾದರು. ಜಿಲ್ಲಾ ಮಟ್ಟದ ಸಭೆಗೆ ಸರಿಯಾದ ರೀತಿಯಲ್ಲಿ ಕರಡು ಪ್ರತಿಯನ್ನು ಸಲ್ಲಿಸಲು ಪೊನ್ನಣ್ಣ ಸೂಚನೆ ನೀಡಿದರು. ಪೊನ್ನಂಪೇಟೆ ತಾಲೂಕಿಗೆ ರೂ. ೧೫ ಕೋಟಿ, ವೀರಾಜಪೇಟೆ ತಾಲೂಕಿಗೆ ರೂ. ೧೭ ಕೋಟಿ ಹಾಗೂ ಮಡಿಕೇರಿ ತಾಲೂಕಿಗೆ ರೂ. ೩೭ ಕೋಟಿಯ ಕರಡು ಕ್ರಿಯಾ ಯೋಜನೆಗೆ ಅನುಮೋದನೆಯನ್ನು ಶಾಸಕರು ನೀಡಿದರು. ಪ್ರತಿ ಪಂಚಾಯಿತಿಯಲ್ಲಿ ಅಭಿವೃದ್ಧಿ ಯೋಜನೆಗೆ ಪರಿಶಿಷ್ಟ ಜಾತಿ, ಹಾಗೂ ಪಂಗಡ ಅಭಿವೃದ್ಧಿಗೆ ಶೇಕಡಾವಾರು ಅನುದಾನವನ್ನು ಮೀಸಲಿಡಲು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಂಎಲ್‌ಸಿಗೆ ಸ್ವಾಗತ ಮರೆತ ಅಧಿಕಾರಿ!

ಸಭೆಗೆ ಪೂರ್ವ ತಯಾರಿಯೊಂದಿಗೆ ಆಗಮಿಸಬೇಕಾಗಿದ್ದ ಅಧಿಕಾರಿ ಗಳು, ಯಾವುದೇ ತಯಾರಿ ಇಲ್ಲದೆ ಆಗಮಿಸಿದ್ದು ಸಭೆಯಲ್ಲಿ ಕಂಡುಬAತು. ಆರಂಭದಲ್ಲಿ ಸಭೆಗೆ ಗಣ್ಯರನ್ನು ಸ್ವಾಗತ ಮಾಡಬೇಕಾದ ಸಂದರ್ಭದಲ್ಲಿ ವಿಧಾನ ಪರಿಷತ್ತು ಸದಸ್ಯರಿಗೆ ಸ್ವಾಗತ ಮಾಡುವುದನ್ನೇ ಮರೆತರು. ಇದನ್ನು ಗಮನಿಸಿದ ತಾ.ಪಂ.ಇಒ ಅಪ್ಪಣ್ಣ ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ತಪ್ಪನ್ನು ತಿದ್ದುವ ಪ್ರಯತ್ನ ಮಾಡಿದರು. ಆದರೆ ಗಾಬರಿಗೊಂಡ ಅಧಿಕಾರಿ ಸುಜಾ ಕುಶಾಲಪ್ಪನವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಸ್ವಾಗತ ಕೋರುತ್ತೇನೆ ಎಂದು ತಮ್ಮ ಸ್ವಾಗತ ಭಾಷಣದಲ್ಲಿ ಹೇಳಿದರು. ಇದರಿಂದಾಗಿ ವೇದಿಕೆಯಲ್ಲಿದ್ದ ಗಣ್ಯರು ಕಸಿವಿಸಿಗೊಂಡರು. ಅಧಿಕಾರಿಯ ಕರ್ತವ್ಯ ಲೋಪದ ಬಗ್ಗೆ ಅಪಸ್ವರ ವ್ಯಕ್ತವಾಯಿತು.

ನಂತರ ಸಭೆ ಆರಂಭಿಸಿದ ಶಾಸಕ ಪೊನ್ನಣ್ಣನವರು ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರಿಗೆ ವ್ಯೆಯುಕ್ತವಾಗಿ ಸ್ವಾಗತ ಕೋರಿ ಸಭೆ ಮುನ್ನಡೆಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ, ಸಮಿತಿ ಉಪಾಧ್ಯಕ್ಷ ಬಾಲಚಂದ್ರ ನಾಯರ್, ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಬೋಪಣ್ಣ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಹಾಲುಗುಂದ ಗ್ರಾ.ಪಂ.ಅಧ್ಯಕ್ಷ ಪಂದಿಕAಡ ದಿನೇಶ್ ಕುಶ, ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಣ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಖರ್, ವಿವಿಧ ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.