ಐಸಿಸಿ ವನಿತೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ, ಟೀಂ ಇಂಡಿಯಾಗೆ ಮಹತ್ವದ ದಿನ. ಅಕ್ಟೋಬರ್ ೩೦ರಂದು ನವೀ ಮುಂಬಯಿ ಡಾ. ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯವ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟೆçÃಲಿಯಾ, ಟೀಂ ಇಂಡಿಯಾಗೆ ಎದುರಾಳಿ.

೨೦೧೭ರ ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ಅಜೇಯವಾಗಿ ಉಳಿದಿದ ಆಸ್ಟೆçÃಲಿಯಾ ತಂಡವನ್ನು, ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವನಿತೆಯರು ಮಣಿಸಿದ್ದರು. ಇಲ್ಲಿಯೂ ಇತಿಹಾಸ ಮರುಕಳಿಸುವುದೇ? ಟೀಂ ಇಂಡಿಯಾ ಆಸ್ಟೆçÃಲಿಯಾ ವಿರುದ್ಧ ಗೆಲುವು ಸಾಧಿಸುವುದೇ? ಎಂಬ ಕುತೂಹಲ ಮನೆ ಮಾಡಿದೆ. ೨೦೧೭ರಲ್ಲಿ ಟೀಂ ಇಂಡಿಯಾ ವಿರುದ್ಧ ಸೋಲು ಕಂಡಿದ್ದ ಆಸ್ಟೆçÃಲಿಯಾ, ನಂತರ ತಾನಾಡಿದ ಏಕದಿನ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಒಂದು ಪಂದ್ಯದಲ್ಲಿಯೂ ಸೋಲು ಕಾಣದೆ, ಗೆಲುವಿನ ಸರಣಿ ಮುಂದುವರಿಸಿದೆ.

ಟೀA ಇಂಡಿಯಾ ವನಿತೆಯರು ಒಮ್ಮೆಯೂ ಐಸಿಸಿ ಏಕದಿನ ವಿಶ್ವ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡಿಲ್ಲ. `ಈ ಸಲ ಕಪ್ ತಮ್ಮದೇ’ ಎಂಬುದು ಭಾರತದ ಕ್ರಿಕೆಟ್ ಅಭಿಮಾನಿಗಳ ಮನದುಂಬಿದ ಹಾರೈಕೆ.

ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ತಾನಾಡಿದ ೭ ಪಂದ್ಯಗಳಲ್ಲೂ ಆಸ್ಟೆçÃಲಿಯಾ ಮುಗ್ಗರಿಸದೆ ಗೆಲುವಿನ ಸರಣಿ ಮುಂದುವರಿಸಿದೆ. ಆದರೆ ಶ್ರೀಲಂಕಾ, ಪಾಕಿಸ್ತಾನ ತಂಡಗಳನ್ನು ಸುಲಭವಾಗಿ ಮಣಿಸಿದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ, ಆಸ್ಟೆçÃಲಿಯಾ ಮತ್ತು ಇಂಗ್ಲೆAಡ್ ತಂಡಗಳ ಎದುರು ಸೋಲನುಭವಿಸಿದೆ. ಕೊನೆಗೆ ನ್ಯೂಜಿಲ್ಯಾಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿ, ಗೆಲುವು ದಕ್ಕಿಸಿಕೊಂಡು ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ. ಮಳೆ ಅಡ್ಡಿಯಾಗಿದ್ದರಿಂದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಫಲಿತಾಂಶ ಲಭ್ಯವಾಗಲಿಲ್ಲ.

ಗುರುವಾರ ನವೀ ಮುಂಬಯಿನಲ್ಲಿ ಮಳೆ ಪಂದ್ಯಕ್ಕೆ ಅಡ್ಡಿಪಡಿಸುವ ಭೀತಿ ಇದೆ. ಅಂದು ಪಂದ್ಯ ಅಪೂರ್ಣವಾದರೆ, ಶುಕ್ರವಾರ ಈ ಪಂದ್ಯಕ್ಕೆ ಮೀಸಲು ದಿನ. ಅಂದೂ ಫಲಿತಾಂಶ ಹೊರಹೊಮ್ಮದಿದ್ದರೆ, ಅಂಕಪಟ್ಟಯಲ್ಲಿ ಅಗ್ರಸ್ಥಾನ ಪಡೆದಿರುವ ಹಾಲಿ ಚಾಂಪಿಯನ್ ಆಸ್ಟೆçÃಲಿಯಾ ಫೈನಲ್ ಪ್ರವೇಶಸಲಿದೆ. ಆದ್ದರಿಂದ ಭಾರತ ಫೈನಲ್ ಪ್ರವೇಶಿಸಲು ಸಮಿಫೈನಲ್‌ನಲ್ಲಿ ಆಸ್ಟೆçÃಲಿಯಾವನ್ನು ಮಣಿಸಲೇಬೇಕಾದ ಅನಿವಾರ್ಯತೆ ಇದೆ.

ಆಸ್ಟೆçÃಲಿಯಾ ತಂಡಕ್ಕೆ ನಾಯಕಿ ಅಲೀಸಾ ಹೀಲಿ, ಆ್ಯಶ್ ಗಾರ್ಡನರ್, ಫೋಬ್ ಲಿಚಿಫೀಲ್ಡ್, ಬೆತ್ ಮೂನಿ, ಎಲ್ಲಿಸಾ ಪೆರಿ ಬ್ಯಾಟಿಂಗ್‌ನಲ್ಲಿ ಉತ್ತಮ ಲಯದಲ್ಲಿದ್ದರೆ, ಬೌಲಿಂಗ್‌ನಲ್ಲಿ ಅನ್ನಾಬೆಲ್ ಸದರ್‌ಲ್ಯಾಂಡ್, ಅಲಿಸಾ ಕಿಂಗ್, ಸೋಫಿ ಮೋಲಿನಾಕ್ಸ್ ಉತ್ತಮ ಪ್ರದರ್ಶನ ನೀಡಿದ್ದಾರೆ.

ಟೀಂ ಇಂಡಿಯಾ ಉಪನಾಯಕಿ ಸ್ಮೃತಿ ಮಂದಾನ ಒಂದು ಶತಕ, ಎರಡು ಅರ್ಧ ಶತಕಗಳೊಂದಿಗೆ ಈ ಟೂರ್ನಿಯಲ್ಲಿ ಒಟ್ಟು ೩೬೫ ರನ್‌ಗಳಿಸಿ ಉತ್ತಮ ಲಯದಲ್ಲಿದ್ದಾರೆ. ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿರುವ ಆರಂಭಿಕ ಆಟಗಾರ್ತಿ ಪ್ರತೀಕಾ ರಾವೆಲ್ ಗಾಯಗೊಂಡಿದ್ದು, ಒಂದೂವರೆ ವರ್ಷದಿಂದ ತಂಡದಿAದ ಹೊರಗುಳಿದಿರುವ ಶಫಾಲಿ ವರ್ಮಾ ತಂಡಕ್ಕೆ ಮರಳಿದ್ದಾರೆ.

ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ರಿಚಾ ಘೋಷ್ ಬ್ಯಾಟಿಂಗ್‌ನಲ್ಲಿ ಉತ್ತಮ ಫಾಮ್‌ನಲ್ಲಿದ್ದಾರೆ. ದೀಪ್ತಿ ಶರ್ಮಾ, ಶ್ರೀ ಚರಣಿ, ಕ್ರಾಂತಿ ಗೌಡ್ ಬೌಲಿಂಗ್‌ನಲ್ಲಿ ತಂಡಕ್ಕೆ ಶಕ್ತಿ ತುಂಬಿದ್ದಾರೆ. ಎರಡು ಬಾರಿ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪ್ರವೇಶಿಸಿರುವ ಟೀಂ ಇಂಡಿಯಾ ವನಿತೆಯರು ಆಸ್ಟೆçÃಲಿಯಾ ವಿರುದ್ಧ ಗೆಲುವು ಸಾಧಿಸಿ, ನವೆಂಬರ್ ೨ ರಂದು ನಡೆಯುವ ಫೈನಲ್ ಪ್ರವೇಶಿಸಲಿ ಎಂಬುದೇ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ.

- ಕಲ್ಲುಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ, ಮೊ. ೯೮೪೫೪೯೯೧೧೨