ಮಡಿಕೇರಿ, ಅ. ೨೯ : ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ತಾತ್ಕಾಲಿಕ ಶೆಡ್‌ಗಳು ಹಾಗೂ ಯಾವದೇ ಅನುಮತಿ ಇಲ್ಲದೆ ನಿರ್ಮಾಣಗೊಂಡಿರುವ ಮನೆ, ಕಟ್ಟಡಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮಡಿಕೇರಿ ನಗರಸಭಾ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಸಂಬAಧ ಮುಂದಿನ ೧೦ ದಿನಗಳೊಳಗಡೆ ವಿಶೇಷ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಯಿತು.
ನಗರಸಭಾಧ್ಯಕ್ಷೆ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭಾ ಸದಸ್ಯ ಬಿ,ವೈ.ರಾಜೇಶ್ ವಿಷಯ ಪ್ರಸ್ತಾಪಿಸಿ ನಗರದ ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ಗಾನ ಎಂಬವರ ಹೆಸರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಸಂಬAಧ ಮತ್ತೋರ್ವ ವ್ಯಕ್ತಿಯ ಹೆಸರಿಗೆ ಜಾಗ ಬಿಟ್ಟು ಕೊಟ್ಟಿದ್ದು, ಆ ಜಾಗದಲ್ಲಿ ಅನಧಿಕೃ ತವಾಗಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡ ಲಾಗಿದೆ. ಅಲ್ಲದೆ, ಮೂರು ಮಳಿಗೆ ಗಳಿಗೆ ಮಾತ್ರ ಅನುಮತಿ ಪಡೆದುಕೊಂಡು ೧೨ ಮಳಿಗೆಗಳನ್ನು ನಿರ್ಮಿಸಲಾಗಿದೆ. ಅಲ್ಲಿ ವ್ಯಾಪಾರ ಮಾಡಲು ಯಾವದೇ ಅನುಮತಿ, ಪರವಾನಗಿ ಕೂಡ ಪಡೆದುಕೊಂಡಿಲ್ಲ. ಜಾಗ ಹಸ್ತಾಂತರ ಪ್ರಕ್ರಿಯೆ ಕೂಡ ನಿಯಮಾನುಸಾರ ಇರುವದಿಲ್ಲ. ಈ ಬಗ್ಗೆ ನಗರಸಭೆ ಕಾನೂನು ಸಲಹೆ ಗಾರರು ಪರಿ ಶೀಲಿಸಿ ಎಲ್ಲವೂ ನಿಯಮಬಾಹಿರ, ಕಾನೂನು ಉಲ್ಲಂ ಘನೆಯಾಗಿದೆ ಯೆಂದು ವರದಿ ನೀಡಿದ್ದಾರೆ. ಈ ವರದಿ ಆಧಾರದಲ್ಲಿ ನಗರ ಸಭಾ ಆಯುಕ್ತರು ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸುವಂತೆ ಸಂಬAಧಿಸಿದವರಿಗೆ ಮೂರು ಬಾರಿ ನೋಟೀಸ್ ಕೂಡ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಗೊಂದಲವೇರ್ಪಟ್ಟಿದೆ. ಇದುವರೆಗೂ ಕ್ರಮ ಕೈಗೊಳ್ಳದೆ ಇರುವ ಬಗ್ಗೆ ಸ್ಪಷ್ಟ ಉತ್ತರ ಬೇಕಿದೆ ಎಂದು ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ಸದಸ್ಯ ಅಮೀನ್ ಮೊಹಿಸಿನ್; ತಾತ್ಕಾಲಿಕ ಶೆಡ್‌ಗಳಿಗೆ ಅವಕಾಶ ನೀಡಬಾರದೆಂದು ಹಿಂದಿನಿAದಲೇ ವಿರೋಧಗಳು ಕೇಳಿ ಬರುತ್ತಿವೆ. ಈ ಶೆಡ್‌ಗಳಿಗೆ ಅನುಮತಿ ಇಲ್ಲ, ವ್ಯಾಪಾರ ಪರವಾನಗಿ ಕೂಡ ಇಲ್ಲದೆ ಇರುವದು ಗೊಂದಲ ಸೃಷ್ಟಿ ಮಾಡಿದೆ. ಮಾಲೀಕರಾದ ಗಾನ ಎಂಬವರು ಕೂಡ ಜಾಗದ ಒಪ್ಪಂದದಲ್ಲಿ ತಪ್ಪಾಗಿರುವ ಬಗ್ಗೆ ಬರೆದುಕೊಟ್ಟಿದ್ದಾರೆ. ಈ ವಿಚಾರಕ್ಕೆ ಸಂಬAಧಿಸಿದAತೆ ಸ್ಪಷ್ಟನೆ ಬೇಕಿದೆ ಎಂದು ಆಗ್ರಹಿಸಿದರು. ಸದಸ್ಯ ಬಶೀರ್ ಮಾತನಾಡಿ; ಈ ಹಿಂದೆ ಅನಿತಾ ಪೂವಯ್ಯ ಅವರು ೪ಏಳನೇ ಪುಟಕ್ಕೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸುವ ಸಂಬAಧ ಒಂದಕ್ಕಿAತ ಮೂರು ಪಟ್ಟು ತೆರಿಗೆ ವಿಧಿಸಿ ಅನುಮತಿ ನೀಡುವಂತೆ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಬಗ್ಗೆ ಕಾನೂನು ಪ್ರಕಾರವೇ ತೀರ್ಮಾನ ಆಗಬೇಕಿದೆ ಎಂದು ಸಲಹೆ ಮಾಡಿದರು.
ಮಧ್ಯ ಪ್ರವೇಶಿಸಿದ ಸದಸ್ಯ ಅರುಣ್ ಶೆಟ್ಟಿ ಮಾತನಾಡಿ; ಕಾವೇರಿ ಹಾಲ್ ಬಳಿಯಿಂದ ಹಿಲ್ ರಸ್ತೆ ಕಡೆಗೆ ಸಾಗುವ ರಸ್ತೆ ಬದಿಗಳಲ್ಲಿ ಮೂರು, ನಾಲ್ಕು ಶೆಡ್‌ಗಳ ನಿರ್ಮಾಣವಾಗಿವೆ. ಇವುಗಳಿಗೆ ಅನುಮತಿ ಇದೆಯಾ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಸದಸ್ಯ ಉಮೇಶ್ ಸುಬ್ರಮಣಿ; ಶೆಡ್‌ಗಳು ನಿಯಮಬಾಹಿರವಾಗಿದ್ದರೆ ಅದರ ಮಾಲೀಕರಿಗೆ ನೋಟೀಸ್ ನೀಡಿ ಪರಿಶೀಲನೆ ಮಾಡಿ, ಅವರಿಂದಲೇ ಕಾನೂನು ಸಲಹೆ ಕೇಳಬಹುದು. ಜಾಗದ ಒಪ್ಪಂದದ ಬಗ್ಗೆ ಸಮಸ್ಯೆ ಇದ್ದರೆ ವಿಚಾರಣೆ ಮಾಡಲಿ. ಈ ಶೆಡ್‌ಗಳಿಂದ ನಗರಸಭೆಗೆ ಅಥವಾ ಸಾರ್ವಜನಿಕರಿಗೆ ಏನಾದರೂ ತೊಂದರೆ ಇದೆಯಾ ಎಂದು ಪ್ರಶ್ನಿಸಿದರಲ್ಲದೆ, ಕನ್ನಂಡಬಾಣೆಯಲ್ಲಿ ಒಂದು ಮನೆಗೆ ಯಾವದೇ ಅನುಮತಿ ಇಲ್ಲದೆ ನಿರ್ಮಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆಯೂ ತನಿಖೆಯಾಗಲಿ ಎಂದು ಆಗ್ರಹಿಸಿದರು.ಸದಸ್ಯೆ ಅನಿತಾ ಪೂವಯ್ಯ ಮಾತನಾಡಿ; ನಗರ ವ್ಯಾಪ್ತಿಯಲ್ಲಿ ಹಲವು ಮನೆ, ಕಟ್ಟಡಗಳಿಗೆ ಫಾರಂ ನಂ.೩ ಇಲ್ಲದೆಯೇ ವಿದ್ಯುತ್ ಸಂಪರ್ಕ ನೀಡಲಾಗಿದೆ. ಈ ಬಗ್ಗೆಯೂ ಕ್ರಮ ಆಗಬೇಕಿದೆ ಎಂದು ಒತ್ತಾಯಿಸಿದರು. ಕಾನ್ವೆಂಟ್ ಜಂಕ್ಷನ್‌ನಲ್ಲಿ ಅಂಗಡಿಗಳನ್ನು ತೆರವುಗೋಳಿಸಲಾಗಿದೆ. ಅದೇ ರೀತಿ ಎಲ್ಲರಿಗೂ ನ್ಯಾಯ ಸಿಗುಂತಾಗಲಿ ಎಂದರು.
ಪರಿಶೀಲನೆ ಮಾಡಿ ನಿರ್ಧಾರ
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಉಪಾಧ್ಯಕ್ಷ ಮಹೇಶ್ ಜೈನಿ; ಇದೊಂದು ಗಂಭೀರ ವಿಚಾರವಾಗಿದೆ. ಈ ಬಗ್ಗೆ ಪರಿಶೀಲನೆ ಮಾಡಿ ನಿರ್ಧಾರ ಮಾಡೋಣ. ಎಲ್ಲ ವಿಚಾರಗಳ ಬಗ್ಗೆ ಚರ್ಚಿಸೋಣ ಎಂದು ಸಲಹೆ ಮಾಡಿದರು. ಇದಕ್ಕೊಪ್ಪದ ಸದಸ್ಯ ರಾಜೇಶ್; ಕಳೆದ ಮೂರು ವರ್ಷಗಳಿಂದ ಚರ್ಚೆಗಳಾಗುತ್ತಿವೆ. ವ್ಯಾಪಾರ ಪರವಾನಗಿ ಇಲ್ಲದೆ ವ್ಯಾಪಾರ ಮಾಡಲು ಅವಕಾಶ ಇದೆಯಾ.? ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಮಹೇಶ್; ಕಾನೂನು ಪ್ರಕಾರ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಈ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವದು. ನಿಮ್ಮ ಕಾಳಜಿ ಮೆಚ್ಚುವಂತದ್ದೇ, ಎಲ್ಲ ಮಳಿಗೆಗಳ ಮೇಲೆ ಕ್ರಮ ಕೈಗೊಳ್ಳಲಾಗುವದೆಂದು ಹೇಳಿದರು.
ನಿಮ್ಮ ಕಾರ್ಯಕರ್ತರಿಗೆ ಬೆಂಬಲ..!
ಇದಕ್ಕೆ ಪ್ರತಿಕ್ರಿಯಿಸಿದ ರಾಜೇಶ್; ನೀವುಗಳು ನಿಮ್ಮ ಪಕ್ಷದ ಕಾರ್ಯಕರ್ತರ ಬೆಂಬಲವಾಗಿ ಇದ್ದೀರ, ಉತ್ತಮ ಅಧಿಕಾರಿದಲ್ಲಿದ್ದುಕೊಂಡು ಒಳ ಒಪ್ಪಂದ, ಒಳ ವ್ಯವಹಾರ ಮಾಡುವದು ಸರಿಯಲ್ಲ. ಆಯುಕ್ತರು ಕೂಡ ಉತ್ತರ ಕೊಡಬೇಕು. ಕಾನೂನು ಪ್ರಕಾರ ಮಾಹಿತಿ ನೀಡಿ. ಎಲ್ಲ ಮಳಿಗೆಗಳ ಮೇಲೆ ಕ್ರಮ ಕೈಗೊಳ್ಳಿ, ಇದೀಗ ಪರವಾನಗಿ ಇಲ್ಲದೇ ಇರುವ ಈ ಮಳಿಗೆಗಳನ್ನು ತೆರವುಗೊಳಿಸಿ ಎಂದು ಪಟ್ಟು ಹಿಡಿದರು.
ಆಯುಕ್ತರು ಐದು ಬಾರಿ ನೋಟೀಸ್ ನೀಡಿದ್ದರೂ ಆ ನೋಟೀಸ್‌ಗೆ ಬೆಲೆ ಇಲ್ಲದಂತಾಗಿದೆ. ನೀವು ಮುಲಾಜಿಗೆ ಕೆಲಸ ಮಾಡುತ್ತಿದ್ದೀರ, ಯಾವದೇ ರಾಜಕೀಯ ಮಾಡದೆ ಮಳಿಗೆಗಳನ್ನು ತೆರವುಗೊಳಿಸಬೇಕೆಂದು ದಾಖಲೆಗಳ ಸಹಿತ ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ನಾಮ ನಿದೇರ್ಶಿತ ಸದಸ್ಯರುಗಳಾದ ಜುಲೆಕಾಬಿ, ಯಾಕೂಬ್, ಮುದ್ದುರಾಜು, ಸದಾ ಮುದ್ದಪ್ಪ ಅವರುಗಳು ರಾಜೇಶ್ ಅವರು ದಾಖಲೆ ಸಹಿತ ಒತ್ತಾಯಿಸುತ್ತಿದ್ದಾರೆ., ಕೂಡಲೇ ತೆರವುಗೊಳಿಸಿ ಎಂದು ಆಗ್ರಹಿಸಿದರು.
ಗೊಂದಲದ ಗೂಡು..!
ಈ ಸಂದರ್ಭದಲ್ಲಿ ಪರಸ್ಪರ ಚರ್ಚೆಗಳು ಆರಂಭಗೊAಡು ಒಂದು ಹಂತದಲ್ಲಿ ಸಭೆ ಗೊಂದಲದ ಗೂಡಾಗಿ ಪರಿಣಮಿಸಿತು. ಅಧ್ಯಕ್ಷರು, ಉಪಾಧ್ಯಕ್ಷರಾದಿಯಾಗಿ ಕಾಂಗ್ರೆಸ್ ಸದಸ್ಯರುಗಳ ನಡುವಣ ಮಾತುಗಳು ತಾರಕಕ್ಕೇರಿದವು. ಪರಸ್ಪರ ನಿಂದನೆಗಳು ಕೇಳಿಬಂದವು. ಸಭಾಂಗಣದ ಎದುರಿಗೆ ಬಂದ ರಾಜೇಶ್ ದಾಖಲೆಗಳನ್ನು ತೋರಿಸುತ್ತಾ ಕ್ರಮಕ್ಕೆ ಮುಂದಾಗುವAತೆ ಒತ್ತಾಯಿಸಿದರು. ಎಲ್ಲರೂ ಅರಚಾಡತೊಡಗಿದರು.
ಮತ್ತೊಂದು ದಾಖಲೆಯ ಆಗಮನ..!
ಅಷ್ಟರಲ್ಲಿ ಉಪಾಧ್ಯಕ್ಷ ಮಹೇಶ್ ಜೈನಿ ೨೦೧೫ರಲ್ಲಿ ಕನ್ನಂಡಬಾಣೆಯಲ್ಲಿ ಮನೆಯೊಂದಕ್ಕೆ ಯಾವದೇ ಅನುಮತಿ ಇಲ್ಲದೆ ವಿದ್ಯುತ್, ಇನ್ನಿತರ ಸೌಲಭ್ಯ ಕಲ್ಪಿಸಿರುವ ದಾಖಲೆಗಳನ್ನು ಸಿಬ್ಬಂದಿಗಳಿAದ ತರಿಸಿಕೊಂಡರು. ಆ ನಂತರ ಅದರ ಬಗ್ಗೆ ಚರ್ಚೆಯಾಗತೊಡಗಿತು, ಕೊಡಗು ಅಭಿವೃದ್ಧಿ ಸಮಿತಿ ಎಂದುಕೊAಡು ಸಾಮಾಜಿಕ ಜಾಲತಾಣಗಳಲ್ಲಿ ಇತರ ವಿಚಾರಗಳನ್ನು ಹಂಚಿಕೊಳ್ಳುತ್ತಿರುವ ಪ್ರಮುಖ ವ್ಯಕ್ತಿಯೇ ಈ ರೀತಿ ಅನಧಿಕೃತವಾಗಿ ಸೌಲಭ್ಯ ಹೊಂದಿಕೊAಡಿರುವದಾಗಿ ಸದಸ್ಯ ಅರುಣ್ ಶೆಟ್ಟಿ ಆರೋಪ ಮಾಡಿದರು.
ಸಭೆಗೆ ಅವಕಾಶ ಮಾಡಿಕೊಡಿ..!
ಗೊಂದಲದ ಗೂಡಿನಂತಾಗಿದ್ದ ಸಭೆಯ ನಡುವೆ ಹಿರಿಯ ಸದಸ್ಯ ಕೆ.ಎಸ್.ರಮೇಶ್ ಮಧ್ಯ ಪ್ರವೇಶಿಸಿ ಈ ಪ್ರಕರಣದ ಬಗ್ಗೆ ಆಡಳಿತ ಮಂಡಳಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಿದೆ. ರಾಜೇಶ್ ಅವರ ವಿಚಾರಗಳು ಕಾನೂನು ರೀತಿಯಲ್ಲಿ ಸರಿಯಾಗಿದ್ದು, ಕ್ರಮಕ್ಕೆ ಅವಕಾಶವಿದೆ. ಈ ನಿಟ್ಟಿನಲ್ಲಿ ತುರ್ತು ಸಭೆ ಕರೆದು ತೀರ್ಮಾನ ಕೈಗೊಳ್ಳಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಇದಕ್ಕೊಪ್ಪದ ರಾಜೇಶ್ ಕೂಡಲೇ ತೆರವುಗೊಳಿಸುವಂತೆ ಮತ್ತೆ ಪಟ್ಟುಹಿಡಿದಾಗ ಮಧ್ಯ ಪ್ರವೇಶಿಸಿದ ಸದಸ್ಯರುಗಳಾದ ಅಮೀನ್ ಮೊಹಿಸಿನ್ ಹಾಗೂ ಮನ್ಸೂರ್ ಅವರುಗಳು ಶೆಡ್ ತೆರವುಗೊಳಿಸುವ ವಿಚಾರಕ್ಕೆ ಸಂಬAಧಿಸಿದAತೆ ಮಾತ್ರ ಸಭೆ ಕರೆದು ತೀರ್ಮಾನ ಕೈಗೊಳ್ಳುವಂತೆ ಸಲಹೆ ಮಾಡಿದರು.
ಹತ್ತು ದಿನಗಳೊಳಗಡೆ ಸಭೆ
ಈ ಎಲ್ಲ ಚರ್ಚೆಗಳ ಬಳಿಕ ಅಧ್ಯಕ್ಷೆ ಕಲಾವತಿ ಅವರು ನಿಯಮ ಉಲ್ಲಂಘನೆ ಮಾಡಿರುವ ಎಲ್ಲ ಶೆಡ್ ಹಾಗೂ ಮಳಿಗೆಗಳ ಬಗ್ಗೆ ಪರಿಶೀಲನೆ ಮಾಡಿ ಮುಂದಿನ ಹತ್ತು ದಿನಗಳೊಳಗಡೆ ವಿಶೇಷ ಸಭೆ ಕರೆದು ತೀರ್ಮಾನ ಕೈಗೊಳ್ಳುವದಾಗಿ ಘೋಷಿಸಿದರು.