ಸೋಮವಾರಪೇಟೆ, ಅ. ೨೯: ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಾಳು ಮೆಣಸು ಕಳ್ಳತನದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರತ್ಯೇಕ ಪ್ರಕರಣಗಳಲ್ಲಿ ಸೋಮವಾರಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ರೂ. ೨.೪ ಲಕ್ಷ ಮೌಲ್ಯದ ೩೬೦ ಕೆ.ಜಿ. ಕಾಳು ಮೆಣಸು ಮತ್ತು ಕೃತ್ಯಕ್ಕೆ ಬಳಸಿದ್ದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕಾಳುಮೆಣಸು ಕಳವು ಮಾಡಿದ ಆರೋಪಿಗಳಾದ ಸೋಮವಾರಪೇಟೆ ಪಟ್ಟಣದ ವೆಂಕಟೇಶ್ವರ ಬ್ಲಾಕ್ ನಿವಾಸಿ ಸುಮಂತ್, ಕಿಬೆಟ್ಟ ಗ್ರಾಮದ ಕೀರ್ತಿ, ಕೊಣನೂರು ಗ್ರಾಮದ ಮಣಿಕಂಠ, ಕೆ. ಆರ್. ಪೇಟೆಯ ಸಚಿನ್ ಅವರುಗಳನ್ನು ಕಾರ್ಯಾಚರಣೆಯ ಮೂಲಕ ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಮಡಿಕೇರಿ ಜೈಲಿಗೆ ಕಳುಹಿಸಿದ್ದಾರೆ.