ಪೊನ್ನಂಪೇಟೆ, ಅ. ೨೯: ಪದವಿಪೂರ್ವ ಶಿಕ್ಷಣ ಇಲಾಖೆ, ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜು, ಕಾಪ್ಸ್ ಪದವಿ ಪೂರ್ವ ಕಾಲೇಜು ಹಾಗೂ ಕೊಡಗು ಬಾಕ್ಸಿಂಗ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಕಾವೇರಿ ಕಾಲೇಜಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಬಾಕ್ಸಿಂಗ್ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟದಲ್ಲಿ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಾದ ದಿಲ್ ಶಾ ಪಿ.ಎಲ್., ಪೂಣಚ್ಚ ಎಂ.ಸಿ., ಜಸ್ವಂತ್ ಎಲ್., ವಿಮಲ್ ವಿ., ಅಕುಲ್, ಭೀಮಯ್ಯ, ಪೊನ್ನಂಪೇಟೆ ಹಳ್ಳಿಗಟ್ಟು ಸಿ.ಐ.ಪಿ.ಯು. ಕಾಲೇಜಿನ ಪೊನ್ನಮ್ಮ, ಎ.ಎಸ್., ಅದಿತ್ ಸೋಮಯ್ಯ, ಸರ್ವದೈವತಾ ಪಿ.ಯು. ಕಾಲೇಜಿನ ಕುಶಾಲ್ ಜಿ.ಎನ್. ಹಾಗೂ ವಿದ್ಯಾನಿಕೇತನ ಪಿ.ಯು. ಕಾಲೇಜಿನ ಗಣಿಕ ಎ.ಜಿ. ಚಿನ್ನದ ಪದಕ ಪಡೆದುಕೊಳ್ಳುವ ಮೂಲಕ ನವೆಂಬರ್ ೨೮ ಮತ್ತು ೨೯ ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಾಕ್ಸಿಂಗ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ವಿಜೇತ ವಿದ್ಯಾರ್ಥಿಗಳಿಗೆ ಕೊಡಗು ಬಾಕ್ಸಿಂಗ್ ಅಕಾಡೆಮಿ ಅಧ್ಯಕ್ಷ ಕರ್ನಲ್ ಚೆಪ್ಪುಡಿರ ಮುತ್ತಣ್ಣ, ತರಬೇತುದಾರರಾದ ದೇಯಂಡ ಮೇದಪ್ಪ, ಶರತ್ ನಾಯ್ಡು, ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ.ಟಿ. ಸಂತೋಷ್, ಸೋಮಯ್ಯ, ಮಿಲನ್ ಹಾಗೂ ಸುಶೀಲ್ ಪದಕ ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಿದರು.ಬಾಕ್ಸಿಂಗ್‌ನಲ್ಲಿ ರಾಜ್ಯಮಟ್ಟಕ್ಕೆ ಆಯೆ

ಪೊನ್ನಂಪೇಟೆ, ಅ. ೨೯: ಪದವಿಪೂರ್ವ ಶಿಕ್ಷಣ ಇಲಾಖೆ, ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜು, ಕಾಪ್ಸ್ ಪದವಿ ಪೂರ್ವ ಕಾಲೇಜು ಹಾಗೂ ಕೊಡಗು ಬಾಕ್ಸಿಂಗ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಕಾವೇರಿ ಕಾಲೇಜಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಬಾಕ್ಸಿಂಗ್ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟದಲ್ಲಿ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಾದ ದಿಲ್ ಶಾ ಪಿ.ಎಲ್., ಪೂಣಚ್ಚ ಎಂ.ಸಿ., ಜಸ್ವಂತ್ ಎಲ್., ವಿಮಲ್ ವಿ., ಅಕುಲ್, ಭೀಮಯ್ಯ, ಪೊನ್ನಂಪೇಟೆ ಹಳ್ಳಿಗಟ್ಟು ಸಿ.ಐ.ಪಿ.ಯು. ಕಾಲೇಜಿನ ಪೊನ್ನಮ್ಮ, ಎ.ಎಸ್., ಅದಿತ್ ಸೋಮಯ್ಯ, ಸರ್ವದೈವತಾ ಪಿ.ಯು. ಕಾಲೇಜಿನ ಕುಶಾಲ್ ಜಿ.ಎನ್. ಹಾಗೂ ವಿದ್ಯಾನಿಕೇತನ ಪಿ.ಯು. ಕಾಲೇಜಿನ ಗಣಿಕ ಎ.ಜಿ. ಚಿನ್ನದ ಪದಕ ಪಡೆದುಕೊಳ್ಳುವ ಮೂಲಕ ನವೆಂಬರ್ ೨೮ ಮತ್ತು ೨೯ ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಾಕ್ಸಿಂಗ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ವಿಜೇತ ವಿದ್ಯಾರ್ಥಿಗಳಿಗೆ ಕೊಡಗು ಬಾಕ್ಸಿಂಗ್ ಅಕಾಡೆಮಿ ಅಧ್ಯಕ್ಷ ಕರ್ನಲ್ ಚೆಪ್ಪುಡಿರ ಮುತ್ತಣ್ಣ, ತರಬೇತುದಾರರಾದ ದೇಯಂಡ ಮೇದಪ್ಪ, ಶರತ್ ನಾಯ್ಡು, ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ.ಟಿ. ಸಂತೋಷ್, ಸೋಮಯ್ಯ, ಮಿಲನ್ ಹಾಗೂ ಸುಶೀಲ್ ಪದಕ ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಿದರು.