ಮಡಿಕೇರಿ, ಅ. ೨೯: ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಶಾಸಕರ ನಿಧಿ ಹಾಗೂ ಮಡಿಕೇರಿ ಲಯನ್ಸ್ ಸಂಸ್ಥೆ ನೆರವಿನಿಂದ ಮಡಿಕೇರಿಯ ಚೈನ್‌ಗೇಟ್ ಬಳಿ ನಿರ್ಮಿಸಿರುವ ನೂತನ ಬಸ್ ತಂಗುದಾಣ ಹಾಗೂ ಬಾಟಲಿ ಡ್ರಾಪ್ ಉದ್ಘಾಟನೆಗೊಂಡವು.
ಶಾಸಕರಾದ ಡಾ. ಮಂತರ್ ಗೌಡ, ಲಯನ್ಸ್ ಗವರ್ನರ್ ಕುಡುಪಿ ಅರವಿಂದ ಶೆಣೈ, ಲಯನ್ಸ್ ಅಧ್ಯಕ್ಷ ಮದನ್ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ವೈ. ರಾಜೇಶ್, ನಗರಸಭಾ ಪೌರಾಯುಕ್ತ ಆರ್ ರಮೇಶ್, ರೊಟೇರಿಯನ್ ಎಚ್.ಟಿ. ಅನಿಲ್, ನಗರಸಭಾ ಸದಸ್ಯ ಕೆ.ಎಸ್. ರಮೇಶ್, ಮಾಜಿ ಸದಸ್ಯ ಚುಮ್ಮಿ ದೇವಯ್ಯ, ಕೊಡಗು ಅಭಿವೃದ್ಧಿ ಸಮಿತಿಯ ಪ್ರಮುಖ ಪ್ರಸನ್ನ ಭಟ್, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಗಿರೀಶ್, ಪ್ರಮುಖರಾದ ಅಂಬೆಕಲ್ ಕುಶಾಲಪ್ಪ, ಬೇಬಿ ಮ್ಯಾಥ್ಯು ಹಾಗೂ ಇತರರು ಈ ಸಂದರ್ಭ ಹಾಜರಿದ್ದರು.