ಪೊನ್ನಂಪೇಟೆ, ಅ. ೨೮: ಪೊನ್ನಂಪೇಟೆ ತಾಲೂಕು ಹೈಸೊಡ್ಲೂರು ಹಾಗೂ ಬೇಗೂರು ಗ್ರಾಮಗಳ ಜಲಜೀವನ್ ಕಾಮಗಾರಿ ಕಳಪೆ ಎಂದು ಗ್ರಾಮ ಸ್ಥರು ಆರೋಪಿಸಿದ್ದು, ಸಂಸದ ಯದುವೀರ್ ಭೇಟಿ ನೀಡಿ ಪರಿ ಶೀಲನೆ ನಡೆಸಿದರು.

ಸಂಸದ ಯದುವೀರ್ ಒಡೆಯರ್ ಅವರು ಹೈಸೊಡ್ಲೂರು ಹಾಗೂ ಬೇಗೂರು ಗ್ರಾಮಗಳ ಜಲಜೀವನ್ ಮಿಷನ್ ಕಾಮಗಾರಿ ಪರಿಶೀಲಿಸಿ, ಜಿಲ್ಲಾ ಪಂಚಾಯತ್ ಸಿಇಓ ಅವ ರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಹೈಸೊಡ್ಲೂರು ಗ್ರಾಮದಲ್ಲಿ ೧೨೩ ಮನೆಗಳನ್ನು ಯೋಜನೆ ಅಡಿಯಲ್ಲಿ ಗುರುತಿಸಿ ೮೩ ಮನೆಗಳಿಗೆ ಮಾತ್ರ ಸಂಪರ್ಕಿಸುವ ಕೆಲಸ ಆಗಿದೆ. ಕಳಪೆ ಕಾಮಗಾರಿ ಹಾಗೂ ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿರುವ ಗುತ್ತಿದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭ ಮಾತನಾಡಿದ ಸಂಸದ ಯದುವೀರ್ ಒಡೆಯರ್ ಅವರು ಅಧಿಕಾರಿಗಳು ಈ ಭಾಗದ ಪಂಚಾಯಿತಿ ಆಡಳಿತ ಮಂಡಳಿಯೊAದಿಗೆ ಕೈಜೋಡಿಸಿ ಮಾಹಿತಿ ಹಂಚಿಕೊAಡು ಕೆಲಸ ಮಾಡಬೇಕು ಹಾಗೂ ಹತ್ತು ದಿನಗಳ ಕಾಲಾವಕಾಶದಲ್ಲಿ ಲೋಪಗಳನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದಿಶಾ ಸಮಿತಿ ಸದಸ್ಯ ಚೆಪ್ಪುಡಿರ ರಾಕೇಶ್ ಅವರು ಮಾತನಾಡಿ, ಹೈಸೊಡ್ಲೂರು ಗ್ರಾಮದಲ್ಲಿ ಜಲಜೀವನ್ ಕಾಮಗಾರಿ ಪ್ರಗತಿ ಪರಿಶೀಲನೆ ಸಂದರ್ಭ ಜಲ-ಜೀವನ್ ಮಿಷನ್ ಎಇ ಹಾಗೂ ಗುತ್ತಿಗೆದಾರನ ಗೈರು ವಿಚಾರವನ್ನು ತೀವ್ರವಾಗಿ ಖಂಡಿಸಿದರು. ಹಿರಿಯ ಅಧಿಕಾರಿಗಳು ಭೇಟಿ ತಪ್ಪಿಸಿಕೊಂಡು ಕಿರಿಯ ಅಧಿಕಾರಿಗಳನ್ನು ಸಂಸದರ ಪರಿಶೀಲನೆ ಸಂದರ್ಭ ಕಳುಹಿಸಿ ಸರಿಯಾದ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ದಿಶಾ ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡುವುದಿಲ್ಲ. ಸ್ಥಳ ಪರಿಶೀಲನೆಗೂ ಅಧಿಕಾರಿಗಳು ಬರುತ್ತಿಲ್ಲ ಎಂದು ಆರೋಪಿಸಿದರು. ದಿಶಾ ಸಮಿತಿ ಸದಸ್ಯೆ ಕುಪ್ಪಣಮಾಡ ಕಾವೇರಮ್ಮ ಹಾಗೂ ಗ್ರಾಮಸ್ಥರು ಹಾಜರಿದ್ದರು.