ವೀರಾಜಪೇಟೆ, ಅ. ೨೫: ಕರ್ನಾಟಕ ರಾಜ್ಯ ಸರಕಾರದ ಎಸ್.ಎಫ್.ಸಿ ಅನುದಾನದಲ್ಲಿ, ವೀರಾಜಪೇಟೆ ಪುರಸಭಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ವಿಶೇಷ ಮುತುವರ್ಜಿಯಿಂದ ಆಯ್ದ ವಾರ್ಡ್ಗಳಿಗೆ ಮಂಜೂರಾದ ರೂ. ೨೦ ಕೋಟಿಗಳ ವಿಶೇಷ ಅನುದಾನಗಳ ಕಾಮಗಾರಿಗಳಿಗೆ ಪುರಸಭೆ ವ್ಯಾಪ್ತಿಯ ನಿಸರ್ಗ ಬಡಾವಣೆಯಲ್ಲಿ ಶಾಸಕ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪುರಸಭಾ ವ್ಯಾಪ್ತಿಯ ಪ್ರಜೆಗಳಿಗೆ ಅನುಕೂಲವಾಗಲಿ ಎಂದು ಈ ಭಾಗದ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಹಲವು ವಿಶೇಷ ಅನುದಾನಗಳನ್ನು ಒದಗಿಸಿದ್ದು, ಇದೀಗ ಎಸ್‌ಎಫ್‌ಸಿ ಅನುದಾನದ ಮೂಲಕ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.ಸಾಮಾಜಿಕ ಜಾಲತಾಣದಲ್ಲಿ ರಸ್ತೆಗುಂಡಿಯ ಬಗ್ಗೆ ಬಿಜೆಪಿ ಇನ್ನಿಲ್ಲದಂತೆ ಅಪಪ್ರಚಾರ ಮಾಡುತ್ತಿದೆ. ಆದರೆ ಅವರ ಬಳಿ ಮಳೆಯಲ್ಲಿ ಕಾಮಗಾರಿ ನಡೆಸುವ ಯಂತ್ರ ಅಥವಾ ತಂತ್ರಜ್ಞಾನ ಇದ್ದರೆ ದಯವಿಟ್ಟು ನಮಗೆ ನೀಡಲಿ ನಾವು ರಸ್ತೆ ಕಾಮಗಾರಿಯನ್ನು ಮಳೆಯಲ್ಲಿ ನಡೆಸುತ್ತೇವೆ ಎಂದು ಪೊನ್ನಣ್ಣ ಕುಟುಕಿದರು.
ರಸ್ತೆ ಕುರಿತು ಬಿಜೆಪಿ ಪÀದೇ ಪದೇ ಪ್ರಸ್ತಾಪಿಸುತ್ತಿದೆ. ನನಗೂ ರಸ್ತೆ ಸ್ಥಿತಿ ಬಗ್ಗೆ ಅರಿವಿದೆ. ಆದರೆ ಅವರು ತಮ್ಮ ಕೆಲಸ ಏನು ಎಂದು ಮೊದಲು ತೋರಿಸಲಿ. ಸುಮ್ಮನೆ ಸುಳ್ಳು ಪ್ರಚಾರ ಮಾಡುವುದನ್ನು ನಿಲ್ಲಿಸಲಿ. ಯಾರು ಕೆಲಸ ಮಾಡುತ್ತಿದ್ದಾರೆ ಎಂದು ಜನರೇ ತೀರ್ಮಾನಿಸಲಿ. ಈಗಾಗಲೆ ರಸ್ತೆ ಕಾಮಗಾರಿಗೆ ೧೪೦ ಕೋಟಿ ರೂಗಳ ಟೆಂಡರ್ ಆಗಿದ್ದು ಮಳೆ ನಿಲ್ಲುವುದನ್ನು ನಾವು ಕಾಯುತ್ತಿದ್ದೇವೆ. ಜೊತೆಗೆ ೨೬ ಕೋಟಿ ರೂ ಗ್ರಾಮೀಣ ರಸ್ತೆಗೆ ಕ್ರೀಯಾ ಯೋಜನೆ ರೂಪಿಸಲಾಗಿದ್ದು ಶೀಘ್ರ ಕಾಮಗಾರಿ ಆರಂಭಿಸಲಾಗುತ್ತದೆ.
ಸಿದ್ದಾಪುರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಹೆಚ್ಚಿನ ಮಳೆಯ ಕಾರಣ ಕೆಸರುಮಯವಾಗಿದೆ. ಅದಕ್ಕೆ ಪ್ರತಿಭಟನೆ, ಬಂದ್ ಎನ್ನುವ ಹಾದಿ ತಪ್ಪಿಸುವ ಕೆಲಸ ಬೇಡ. ರಸ್ತೆ ಕೆಟ್ಟು ಹಾಳಗಿರುವುದಕ್ಕೆ ಬಿಜೆಪಿಯೇ ಕಾರಣ. ಎರಡು ವರ್ಷದ ಹಿಂದೆ ಸೂಕ್ತ ರಸ್ತೆ ಕೆಲಸ ಮಾಡಿದಿದ್ದರೆ ಈಗಾಗುತ್ತಿರಲಿಲ್ಲ. ವೀರಾಜಪೇಟೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ಼ ಅನುದಾನದಡಿ ಕಾಮಗಾರಿ ಅಲ್ಲದೆ ಅಯ್ಯಪ್ಪ ಬೆಟ್ಟದಿಂದ ಮೀನುಪೇಟೆವರೆಗೆ ದುಸ್ಥಿತಿಯಲ್ಲಿರುವ ನಗರದ ರಸ್ತೆ ಅಭಿವೃದ್ದಿಗೆ ೫.೬೦ ಕೋಟಿ ರೂ ಒದಗಿಸಲಾಗಿದ್ದು ಜನ ಅಗಲೀಕರಣಕ್ಕೆ ಸಹಕರಿಸಿದರೆ ಅಗಲೀಕರಣ ನಡೆಸಲಾಗುತ್ತದೆ. ಉಳಿದಂತೆ ಮೂರ್ನಾಡು ರಸ್ತೆ ಪಂಜರುಪೇಟೆ ಮುಖ್ಯ ರಸ್ತೆಗಳು ಅಭಿವೃದ್ಧಿ ಆಗಲಿವೆ ಎಂದು ಪೊನ್ನಣ್ಣ ಹೇಳಿದರು.
ಈ ಸಂದರ್ಭ ಪುರಸಭೆಯ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಹಾ ತಬ್ಸಂ, ಮುಖ್ಯಾಧಿಕಾರಿ ಪಟ್ಟಚರುವಂಡ ನಾಚಪ್ಪ, ಅಭಿಯಂತರ ಹೇಮ್ ಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಪುರಸಭೆ ಸದಸ್ಯರಾದ ಎಸ್.ಎಚ್. ಮತೀನ್, ಮಹಮ್ಮದ್ ರಾಫಿ, ಅಗಸ್ಟಿನ್‌ಬೆನ್ನಿ, ಪ್ರಥ್ವಿನಾಥ್, ದಿನೇಶ್ ನಂಬಿಯಾರ್ ಅತಿಫ್ ಮನ್ನಾ, ಶಾಹುಲ್ ಹಮೀದ್, ಸಿ.ಬಿ. ರವಿ, ರಜನಿಕಾಂತ್ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಆರ್.ಕೆ ಸಲಾಂ, ಜೋಕಿಮ್, ನರೇಂದ್ರ ಕಾಮತ್, ಚೆಕು, ಕುಂಡಚ್ಚಿರ ಮಂಜು ದೇವಯ್ಯ, ಹರೀಶ್, ಮಂಜುನಾಥ್, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಕ್ಷಿತ್ ಚಂಗಪ್ಪ, ಶಬೀರ್, ಕಾಳಮಂಡ ಜಗತ್, ನಯನ, ಕಾಣತಂಡ ಜಗದೀಶ್, ಡಿ.ಸಿ. ದ್ರುವ, ಸುಮಂತ್, ಅಯ್ಯಪ್ಪ, ಜಾಫರ್, ಫಾತಿಮಾ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಜಲೀಲ್, ಪೂರ್ಣಿಮಾ, ಪಕ್ಷದ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.