ಮಡಿಕೇರಿ, ಅ. ೨೫: ಗ್ರಾಹಕರಿಗೆ ಯಶಸ್ವಿ, ಘನತೆ ಹಾಗೂ ವಿಶ್ವಾಸದಿಂದ ತನ್ನ ಅಮೂಲ್ಯವಾದ ಸೇವೆ ಸಲ್ಲಿಸಿದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿ.ಎಸ್.ಎನ್.ಎಲ್.) ಪ್ರಸ್ತುತ ಇಪ್ಪತ್ತೆöÊದು ವಸಂತಗಳನ್ನು ಪೂರೈಸಿ ಬೆಳ್ಳಿಹಬ್ಬವನ್ನು ಸಂಭ್ರಮಿಸುವುದರೊAದಿಗೆ ಸವಿನೆನಪಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಕಳೆದ ೨೫ ವರ್ಷಗಳಿಂದ ಗಣನೀಯ, ವಿಶ್ವಾಸರ್ಹತೆಯ ಸೇವೆ ಸಲ್ಲಿಸುವಲ್ಲಿ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿ.ಎಸ್.ಎನ್.ಎಲ್.) ಸಂಸ್ಥೆಯು ಅಕ್ಟೋಬರ್ ತಿಂಗಳು ಪೂರ್ತಿ ತನ್ನ ಬೆಳ್ಳಿ ಹಬ್ಬವನ್ನು ಪ್ರತಿಯೊಂದು ಬಿ.ಎಸ್.ಎನ್.ಎಲ್. ಸಂಸ್ಥೆಗಳಲ್ಲಿ ಆಚರಿಸುವ ಇರಾದೆಯನ್ನು ಕೈಗೊಂಡಿದೆ.
ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿ.ಎಸ್.ಎನ್.ಎಲ್.) ಸಂಸ್ಥೆ ಎಂಬುದಾಗಿ ೨೦೦೦ ರಲ್ಲಿ ಬದಲಾವಣೆಗೊಂಡಿದೆ. ಇದಕ್ಕೂ ಮೊದಲು ದೂರ ಸಂಪರ್ಕ ಇಲಾಖೆ ಎಂದು ಆರಂಭಗೊAಡು ತನ್ನ ಸ್ಥಿರ ದೂರವಾಣಿ ಮೂಲಕ ಗ್ರಾಹಕರುಗಳಿಗೆ ಉತ್ತಮ ಸೇವೆ ಸಲ್ಲಿಸುತ್ತಿತ್ತು.
ಬಿ.ಎಸ್.ಎನ್.ಎಲ್. ಸಂಸ್ಥೆಯು ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಕರ್ನಾಟಕ ವೃತ್ತದಾದ್ಯಂತ ರೋಡ್ ಶೋಗಳನ್ನು, ವಾಕಥಾನ್ಗಳು ಮತ್ತು ಇತರ ಗ್ರಾಹಕ ಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗಾಗಲೇ ಸಂಸ್ಥೆಯು ದೇಶ ವ್ಯಾಪ್ತಿಯಾಗಿ ಸ್ವದೇಶಿ ೪ಜಿ ನೆಟ್ವರ್ಕ್ನ್ನು ವಿಧ್ಯುಕ್ತವಾಗಿ ಲೋಕಾರ್ಪಣೆ ಮಾಡುವ ಮೂಲಕ ನೆಟ್ವರ್ಕ್ ಜಾಲದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಆಗಿನ ಕಾಲದಲ್ಲಿ ಲ್ಯಾಂಡ್ ಲೈನ್ (ಸ್ಥಿರ ದೂರವಾಣಿ) ಎಂದೇ ಪ್ರಸಿದ್ಧವಾಗಿತ್ತು. ಇದರೊಂದಿಗೆ ಟೆಲಿಗ್ರಾಮ್, ಫ್ಯಾಕ್ಸ್, ಚಾಲ್ತಿಯಲ್ಲಿದ್ದು, ಗ್ರಾಹಕರಿಗೆ ಯಶಸ್ವಿ ಸೇವೆಗಳನ್ನು ನೀಡುತ್ತ ಬಂದಿರುವುದನ್ನು ಮರೆಯುವಂತಿಲ್ಲ. ಬಿ.ಎಸ್.ಎನ್.ಎಲ್. ಉದ್ಯೋಗಿಗಳು ತಮ್ಮ ಕರ್ತವ್ಯದ ಅವಧಿಯಲ್ಲಿ ಸುರಕ್ಷತೆಯಿಂದ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ನೆಟ್ವರ್ಕ್ಗಳನ್ನು ಗ್ರಾಹಕರುಗಳಿಗೆ ತಲುಪಿಸುವಾಗ ಸಂಸ್ಥೆಯ ಗೌರವ, ಘನತೆ ಹಾಗೂ ವಿಶ್ವಾಸವನ್ನು ಹೆಚ್ಚಿಸುತ್ತಿರುವುದು ಸ್ವಾಗತಾರ್ಹ.
ವರ್ಷಗಳು ಕಳೆದಂತೆ ಈ ಲ್ಯಾಂಡ್ ಲೈನ್ ದೂರವಾಣಿಗಳ ಸಂಪರ್ಕಗಳು ಗ್ರಾಹಕರುಗಳಿಂದ ಬಹುದೂರ ಹೋಗಿ ಮಾಯವಾಗುತ್ತಿವೆ. ಆದರೂ, ಈಗಲೂ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಚಾಲ್ತಿಯಲ್ಲಿದ್ದು, ಕುಂಟುತ್ತ ದಿನ ಕಳೆಯುತ್ತಿದೆ. ಕೆಲವು ಸರಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಸ್.ಟಿ.ಡಿ., ಐ.ಎಸ್.ಡಿ. ಎಂಬ ಸಂಪರ್ಕ ಜಾಲವನ್ನು ಆರಂಭಿಸಿ ಆಗಲೂ ನಿರೀಕ್ಷೆಗೂ ಮೀರಿದ ಸೇವೆಯನ್ನು ಗ್ರಾಹಕರುಗಳಿಗೆ ನೀಡುತ್ತಾ ಬಂದಿದೆ. ಆಗ ದೇಶ-ವಿದೇಶಗಳಿಗೆ ಟ್ರಂಕಾಲ್ ಮೂಲಕ ಸಂಪರ್ಕಗಳನ್ನು ಗ್ರಾಹಕರುಗಳಿಗೆ ಕಲ್ಪಿಸಿಕೊಡಲಾಗುತ್ತಿತ್ತು. ಇದೀಗ ಆ ವ್ಯವಸ್ಥೆ ಅಸ್ತಂಗತಗೊAಡಿವೆ. ಇದೀಗ ಖಾಸಗಿ ವಿವಿಧ ಕಂಪೆನಿಗಳ ಮೊಬೈಲ್ ಕ್ರಾಂತಿಯAತಹ ಸೇವೆಗಳು ಬಂದುದರಿAದ ಲ್ಯಾಂಡ್ಲೈನ್ ದೂರವಾಣಿಗಳ ಸಂಪರ್ಕಗಳು, ಎಸ್.ಟಿ.ಡಿ., ಐ.ಎಸ್.ಡಿ. ಎಂಬ ಸಂಪರ್ಕ ಜಾಲ, ಟೆಲಿಗ್ರಾಮ್, ಫ್ಯಾಕ್ಸ್ ಸಂಪರ್ಕಗಳು, ದೇಶ-ವಿದೇಶಗಳಿಗೆ ಟ್ರಂಕಾಲ್ ಮೂಲಕ ಕಲ್ಪಿಸುವ ಸಂಪರ್ಕಗಳು ನೇಪತ್ಯಕ್ಕೆ ಸಂದಿವೆ.
ಮೊಬೈಲ್ಗಳ ಸೇವೆ ಬಂದು ವಿಶ್ವದ ಯಾವ ಮೂಲೆಗಳಲ್ಲಿ ಇದ್ದರೂ ಮೊಬೈಲ್ಗಳಲ್ಲಿ ವಾಟ್ಸಾö್ಯಪ್ ಮೂಲಕ ನೇರವಾಗಿ ಸಂಪಕಿÀðಸಿ ಮಾತುಕತೆ ನಡೆಸಬಹುದಾಗಿದೆ. ಅಲ್ಲದೆ, ವಾಯ್ಸ್ ಮೈಲ್, ಫೋಟೋ ಕಳುಹಿಸಬಹುದು, ದಾಖಲೆಗಳನ್ನು ಕೂಡ ಕಳುಹಿಸಬಹುದು. ಯುಟ್ಯೂಬ್, ಫೇಸ್ಬುಕ್, ಇನ್ಸ್ಟಾçಗ್ರಾಂ. ಚಲನ ಚಿತ್ರಗಳು ಇತ್ಯಾದಿಗಳನ್ನು ನೋಡಬಹುದು.
ಮಳೆ, ಗಾಳಿಯಿಂದಾಗಿ ತಂತಿಗಳ ಹಾಗೂ ಕಂಬಗಳ ಮೇಲೆ ಮರ ಬಿದ್ದು ಲ್ಯಾಂಡ್ಲೈನ್ಗಳ ಸಂಪರ್ಕಗಳು ಕಡಿತಗೊಳ್ಳುತ್ತಿತ್ತೇ ವಿನಹ ಈಗಿನ ಮೊಬೈಲ್ಗಳಂತೆ ನೆಟ್ವರ್ಕ್ ಸಮಸ್ಯೆಗಳು ಇರಲಿಲ್ಲ. ಹೀಗೆ ಗ್ರಾಹಕರುಗಳಿಗೆ ದೂರಸಂಪರ್ಕ ಇಲಾಖೆಯು ನೀಡಿದ ಸೇವೆ ಉತ್ತಮ ಬಾಂಧವ್ಯವನ್ನು ಹೊಂದಿತ್ತು.
ಅಂತಹ ಉತ್ತಮ ಸೇವೆಯನ್ನು ಈಗಲೂ ಗ್ರಾಮೀಣ ಮತ್ತು ಪಟ್ಟಣಗಳ ಗ್ರಾಹಕರುಗಳು ಸ್ಮರಿಸುತ್ತಿದ್ದಾರೆ. ಈಗ ವಿವಿಧ ಕಂಪೆನಿಗಳ ಮೊಬೈಲ್ಗಳ ಹಾವಳಿಗಳು ಮತ್ತು ಇವುಗಳೊಂದಿಗೆ ಎಲ್ಲ ರೀತಿಯ ನೆಟ್ವರ್ಕ್ಗಳ ಸಮಸ್ಯೆಗಳು ಇನ್ನಿಲ್ಲದಂತೆ ಕ್ಷಣ ಕ್ಷಣಕ್ಕೂ ಕಾಡುತ್ತಿವೆ. ಇದು ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಇರುವುದು ಮೊಬೈಲ್ ಗ್ರಾಹಕರುಗಳ ಅನುಭವಕ್ಕೆ ಬಂದಿರುತ್ತದೆ.
- ಎಂ. ಶ್ರೀಧರ್ ಹೂವಲ್ಲಿ