ಮಡಿಕೇರಿ, ಅ. ೨೫: ಮಡಿಕೇರಿಯ ಹೊರವಲಯದ ಗಾಳಿಬೀಡಿನಲ್ಲಿರುವ ಹೆರಿಟೇಜ್ ರೆಸಾರ್ಟ್ನ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿರುವ ಖದೀಮರು ಅದರಲ್ಲಿನ ಸಂಪರ್ಕ ಸಂಖ್ಯೆ ಬದಲಿಸಿ ಗ್ರಾಹಕರನ್ನು ಮಾರು ಮಾಡಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದು, ಈ ಬಗ್ಗೆ ರೆಸಾರ್ಟ್ನ ಪ್ರಮುಖರಾದ ದಿಲೀಪ್ ಅವರು ಮಡಿಕೇರಿ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರೆಸಾರ್ಟ್ನ ಅಧಿಕೃತ ವೆಬ್ ಸೈಟ್ hಣಣಠಿs://heಡಿiಣಚಿgeಡಿesoಡಿಣ.ಛಿom ಅನ್ನು ತಾ.೧೭ ರಂದು ಅಪರಿಚಿತರು ಹ್ಯಾಕ್ ಮಾಡಿದ್ದಾರೆ. ನಂತರ ಇದರಲ್ಲಿನ ಸಂಪರ್ಕ ಸಂಖ್ಯೆಯನ್ನು ಬದಲಿಸಿದ ಖದೀಮರು ತಮ್ಮದೇ ಆದ ಸಂಖ್ಯೆ ೮೮೫೨೯೨೭೬೬೯ ಅನ್ನು ವೆಬ್ ಸೈಟ್‌ನಲ್ಲಿ ಪ್ರದರ್ಶಿಸಿದ್ದಾರೆ.

ರೆಸಾರ್ಟ್ನಲ್ಲಿ ಕೊಠಡಿ ಕಾಯ್ದಿರಿಸಲು ಹಲವಾರು ಗ್ರಾಹಕರು ಅಧಿಕೃತ ವೆಬ್ ಸೈಟ್‌ಗೆ ತೆರಳಿ ಈ ನಂಬರ್ ಅನ್ನು ಸಂಪರ್ಕಿಸಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ತಮ್ಮ ಬ್ಯಾಂಕ್ ಖಾತೆಯಲ್ಲಿ ಮುಂಗಡ ಹಣ ಪಾವತಿಸಿ ಕೊಠಡಿ ಕಾಯ್ದಿರಿಸುವಂತೆ ಸೂಚಿಸಿದ್ದಾರೆ. ಗ್ರಾಹಕರು ತಮ್ಮ ಕೊಠಡಿ ಬುಕ್ ಆಗಿದೆ ಎಂದು ತಿಳಿದು ರೆಸಾರ್ಟ್ಗೆ ಬಂದ ಬಳಿಕವಷ್ಟೆ ತಾವು ಮೋಸ ಹೋಗಿರುವ ಬಗ್ಗೆ ಅರಿತಿದ್ದಾರೆ. ಈ ರೀತಿ ಹಲವಾರು ಗ್ರಾಹಕರಿಂದ ರೂ.೮ ರಿಂದ ೧೦ ಲಕ್ಷದವರೆಗೂ ರೆಸಾರ್ಟ್ ಹೆಸರಿನಲ್ಲಿ ಹಣ ಪಡೆದಿರುವ ಬಗ್ಗೆ ತಿಳಿದು ಬಂದಿದೆ.