ಕೂಡಿಗೆ, ಅ. ೨೫: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಸರ್ಕಲ್ ಸಮೀಪದ ಹಾರಂಗಿ ಮುಖ್ಯ ರಸ್ತೆಯಲ್ಲಿ ಜೀಪ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರನ ಎರಡೂ ಕಾಲುಗಳು ಮುರಿಯಲ್ಪಟ್ಟ ಘಟನೆ ನಡೆದಿದೆ.

ಸುಂದರನಗರದ ನಾಗರಾಜು(೫೫) ಮೃತವ್ಯಕ್ತಿ. ಅಪಘಾತ ಸಂಭವಿಸಿ ಡಿಕ್ಕಿಯಾದ ಸಂದರ್ಭ ನಾಗರಾಜು ಅವರನ್ನು ಕುಶಾಲನಗರದ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ನಾಗರಾಜು ಮೃತಪಟ್ಟಿದ್ದಾರೆ. ಮೃತರು ಪತ್ನಿ ಮೂವರು ಮಕ್ಕಳನ್ನು ಅಗಲಿದ್ದಾರೆ. ಜೀಪು ಚಾಲಕ ತುಷಾರ್ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.