ಗೋಣಿಕೊಪ್ಪ ವರದಿ, ಅ. ೨೩: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಲೀಗ್ ಹಾಕಿ ಪಂದ್ಯಾಟದಲ್ಲಿ ೧೧ ತಂಡಗಳು ಗೆದ್ದು ಮುನ್ನಡೆ ಸಾಧಿಸಿವೆ. ಬೊಟ್ಟಿಯತ್ನಾಡ್ ತಂಡಕ್ಕೆ ಕಾಕೋಟ್ ಸ್ಟೆçöÊಕರ್ಸ್ ವಿರುದ್ಧ ೬-೦ ಗೋಲುಗಳ ಗೆಲುವು ಸಿಕ್ಕಿತು. ಸುದೇಶ್, ಬೋಪಣ್ಣ, ರಾಯಲ್ ಅಯ್ಯಣ್ಣ, ಸೋಮಣ್ಣ, ಎಂ.ಪಿ. ಸೋಮಣ್ಣ, ಗಯಾನ್ ತಲಾ ಒಂದೊAದು ಗೋಲು ಬಾರಿಸಿದರು.

ಕೋಣನಕಟ್ಟೆ ಇಲೆವೆನ್ ತಂಡಕ್ಕೆ ಬಿಬಿಸಿ ಗೋಣಿಕೊಪ್ಪ ವಿರುದ್ಧ ೭-೦ ಗೋಲುಗಳ ಗೆಲುವು ದೊರೆಯಿತು. ನರೇನ್ ಕಾರ್ಯಪ್ಪ ೨, ಯಶ್ವಿನ್ ಗಣಪತಿ, ನಾಚಪ್ಪ, ಪಿ. ಎ. ಸೋಮಣ್ಣ, ಮೋಹನ್ ಮುತ್ತಣ್ಣ, ಮಂಜುನಾಥ್ ತಲಾ ಒಂದೊAದು ಗೋಲು ಹೊಡೆದರು. ಕೋಣನಕಟ್ಟೆ ತಂಡವು ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡವನ್ನು ೫-೦ ಗೋಲುಗಳಿಂದ ಸೋಲಿಸಿತು. ದೀಪಕ್ ಮೊಣ್ಣಪ್ಪ ೨, ಮೋಹನ್ ಮುತ್ತಣ್ಣ, ಮಂಜುನಾಥ್, ಕೆ. ಯು. ನಾಚಪ್ಪ ತಲಾ ಒಂದೊAದು ಗೋಲು ದಾಖಲಿಸಿದರು.

ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ತಂಡವು ವೀರಾಜಪೇಟೆ ಕೊಡವ ಸಮಾಜ (ಬಿ) ತಂಡವನ್ನು ೩-೧ ಗೋಲುಗಳಿಂದ ಮಣಿಸಿತು. ಅಮ್ಮತ್ತಿ ಪರ ಆಶಿಕ್ ಉತ್ತಪ್ಪ, ರಾಘವೇಂದ್ರ, ಅಕ್ಷಿತ್, ವಿರಾಜಪೇಟೆ ಪರ ಬೆಳ್ಯಪ್ಪ ಒಂದು ಗೋಲು ಹೊಡೆದರು. ಮಲ್ಮ ಎ ತಂಡಕ್ಕೆ ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ವಿರುದ್ದ ೩-೨ ಗೋಲುಗಳ ಗೆಲುವು ಲಭಿಸಿತು. ಮಲ್ಮ ಪರ ಅಯ್ಯಪ್ಪ ೨, ಪ್ರೀತಂ, ಕೂಡಿಗೆ ಪರ ಲಿಖಿತ್, ಯಶ್ವಿನ್ ನಾಚಪ್ಪ ತಲಾ ಒಂದೊAದು ಗೋಲು ಹೊಡೆದರು.

ಕೂರ್ಗ್ ಚಾಲೆಂಜರ್ಸ್ ತಂಡವು ಪನ್ನಂಗಾಲ ಪ್ಯಾಂರ‍್ಸ್ ವಿರುದ್ಧ ೨-೦ ಗೋಲುಗಳಿಂದ ಜಯಿಸಿತು. ಬೋಪಣ್ಣ ೨ ಗೋಲು ಹೊಡೆದರು.

ಬೊಳಿಯೂರ್ ಸ್ಪೋರ್ಟ್ಸ್ ಕ್ಲಬ್ (ಬಿ) ತಂಡವು ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ೬-೦ ಗೋಲುಗಳಿಂದ ಮಣಿಸಿತು. ಬೊಳಿಯೂರ್ ಪರ ಮಾಚಯ್ಯ ೩ ಗೋಲು, ಬೆಳ್ಯಪ್ಪ, ಮುಕೇಶ್ ಮೊಣ್ಣಪ್ಪ, ಲವ ತಲಾ ಒಂದೊAದು ಗೋಲು ಹೊಡೆದರು. ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಕ್ಯಾಲ್ಸ್ ತಂಡವು ಕುತ್ತ್ನಾಡ್ ಸ್ಟೆçöÊಕರ್ಸ್ ತಂಡವನ್ನು ೩-೦ ಗೋಲುಗಳ ಅಂತರದಲ್ಲಿ ಮಣಿಸಿತು. ಕ್ಯಾಲ್ಸ್ ಆಟಗಾರರಾದ ಬೆಳ್ಯಪ್ಪ ೨, ಲಿತನ್ ಪಟೇಲ್ ೧ ಗೋಲು ಬಾರಿಸಿದರು. ಕಕ್ಕಬ್ಬೆ ಮಲ್ಮ (ಬಿ) ತಂಡಕ್ಕೆ ಬೊಳಿಯೂರ್ (ಎ) ವಿರುದ್ಧ ೫-೦ ಗೋಲುಗಳ ಜಯ ಸಿಕ್ಕಿತು. ಮಲ್ಮ ಪರವಾಗಿ ಅಯ್ಯಪ್ಪ ಹಾಗೂ ಅಪ್ಪಯ್ಯ ತಲಾ ೨ ಗೋಲು, ಮಿಲನ್ ೧ ಗೋಲು ದಾಖಲಿಸಿದರು.

ಬೊಟ್ಟಿಯತ್ನಾಡ್ ಕುಂದ ತಂಡವು ನಾಪೋಕ್ಲು ಶಿವಾಜಿ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿತು. ಕುಂದ ಪರ ಬೋಪಣ್ಣ, ಮೊಹಮ್ಮದ್ ಉಮೈಜ್ ಒಂದೊAದು ಗೋಲು ಹೊಡೆದರು. ಮಲ್ಮ ಬಿ ಮತ್ತು ಹಾತೂರು ವನಭದ್ರಕಾಳಿ ಸಂಘ ನಡುವಿನ ಪಂದ್ಯ ೩-೩ ಗೋಲುಗಳ ಡ್ರಾದಲ್ಲಿ ಅಂತ್ಯವಾಯಿತು. ಮಲ್ಮ ಪರ ಅಪ್ಪಯ್ಯ, ಗೌತಂ, ಹಾತೂರು ಪರ ಸುಹಾನ್, ಸೋಮೇಯಂಡ ಅಪ್ಪಯ್ಯ ಒಂದೊAದು ಗೋಲು ಹೊಡೆದರು.