ಸೋಮವಾರಪೇಟೆ, ಅ. ೨೩: ನಿನ್ನೆ ಸಂಜೆಯಿAದ ರಾತ್ರಿಯವರೆಗೆ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಆಲೂರು-ಸಿದ್ದಾಪುರದಲ್ಲಿ ವಾಸದ ಮನೆಯ ಪಾರ್ಶ್ವ ಕುಸಿದುಬಿದ್ದಿದೆ. ಇದರೊಂದಿಗೆ ತಗ್ಗುಪ್ರದೇಶಗಳಿಗೆ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಸಂಜೆಯಿAದ ರಾತ್ರಿಯವರೆಗೂ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಭಾರೀ ಮಳೆ ಸುರಿದಿದ್ದು, ದೀಪಾವಳಿ ಹಬ್ಬದ ಸಂಭ್ರಮಕ್ಕೂ ತೊಡಕು ಉಂಟು ಮಾಡಿತ್ತು. ಇದರೊಂದಿಗೆ ಆಲೂರು-ಸಿದ್ದಾಪುರ ಗ್ರಾಮದ ಸುರೇಶ್ ಸೋಮಯ್ಯ ಅವರಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿದು ಹಾನಿ ಸಂಭವಿಸಿದೆ.
ಪಟ್ಟಣದ ಕಕ್ಕೆಹೊಳೆ ಜಂಕ್ಷನ್‌ನಲ್ಲಿ ನೂತನವಾಗಿ ಸೇತುವೆ ನಿರ್ಮಿಸಿದ್ದರೂ ಮಳೆ ನೀರಿನ ಸರಾಗ ಹರಿವಿಗೆ ಚರಂಡಿ ವ್ಯವಸ್ಥೆಯಿಲ್ಲದೇ ಇರುವುದರಿಂದ ಕೊಳಚೆ ನೀರು ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳು, ಹೊಟೇಲ್‌ಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.
ಸತೀಶ್ ಎಂಬವರಿಗೆ ಸೇರಿದ ಹೊಟೇಲ್ ಒಳಭಾಗಕ್ಕೆ ಭಾರೀ ಪ್ರಮಾಣದ ಕೊಳಚೆ ನೀರು, ತ್ಯಾಜ್ಯ ನುಗ್ಗಿದ್ದು, ಎಲೆಕ್ಟಾçನಿಕ್ ಉಪಕರಣಗಳು ಹಾನಿಯಾಗಿವೆ. ಈ ಸ್ಥಳದಲ್ಲಿ ನೂತನವಾಗಿ ಸೇತುವೆ ನಿರ್ಮಿಸಿದ್ದರೂ ರಸ್ತೆ ಬದಿಯಲ್ಲಿ ಚರಂಡಿ ಇಲ್ಲದೇ ಇರುವುದರಿಂದ ಭಾರೀ ಸಮಸ್ಯೆಯಾಗಿದೆ. ಆಂಜನೇಯ ದೇವಾಲಯ, ಲೋಕೋಪಯೋಗಿ ಇಲಾಖಾ ಕಚೇರಿ ಪ್ರದೇಶ, ಮಡಿಕೇರಿ ರಸ್ತೆಯ ಕನ್ನಡಾಂಬೆ ವೃತ್ತ ಸೇರಿದಂತೆ ಕ್ಲಬ್‌ರಸ್ತೆ, ಕೊಡವ ಸಮಾಜ ರಸ್ತೆಗಳ ಮೂಲಕ ಕೊಳಚೆ ನೀರು ಕಕ್ಕೆಹೊಳೆ ಜಂಕ್ಷನ್‌ಗೆ ಹರಿಯುತ್ತಿದ್ದು, ಸಮರ್ಪಕ ಚರಂಡಿ ಇಲ್ಲದೇ ಇರುವುದರಿಂದ ತ್ಯಾಜ್ಯದ ನೀರು ಅಂಗಡಿ, ಮನೆಗಳಿಗೆ ನುಗ್ಗುತ್ತಿದೆ ಎಂದು ಸತೀಶ್ ತಿಳಿಸಿದ್ದಾರೆ.ಲೋಕೋಪಯೋಗಿ ಇಲಾಖೆಯ ಅಭಿಯಂತರರು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆ ನಿವಾರಣೆಗೆ ಕ್ರಮ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನು ನಿನ್ನೆ ರಾತ್ರಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿಯಾಯಿತು. ಸಂಜೆ ವೇಳೆಯಲ್ಲಿ ಪಟ್ಟಣದಲ್ಲಿ ಜನರ ಓಡಾಟ ಹೆಚ್ಚಿದ್ದು, ಪಟಾಕಿ ಅಂಗಡಿಗಳ ಮಾಲೀಕರು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದರು. ಆದರೆ ದಿಢೀರ್ ಸುರಿದ ಭಾರೀ ಮಳೆಯಿಂದ ವ್ಯಾಪಾರ ನೆಲಕಚ್ಚಿತು.
ಸಂಜೆಯಿAದ ರಾತ್ರಿ ೧೦.೩೦ ರವರೆಗೂ ಧಾರಾಕಾರ ಮಳೆಯಾಯಿತು. ಈಗಾಗಲೇ ಗುಂಡಿ ಬಿದ್ದಿದ್ದ ರಸ್ತೆಗಳು ಮತ್ತಷ್ಟು ಹದಗೆಟ್ಟವು. ನೀರಿನ ಹರಿವಿಗೆ ಚರಂಡಿಯಲ್ಲಿದ್ದ ಕಲ್ಲು, ಮಣ್ಣು, ಪ್ಲಾಸ್ಟಿಕ್ ತ್ಯಾಜ್ಯಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾದವು. ಕಕ್ಕೆಹೊಳೆ, ವಿವೇಕಾನಂದ ಸರ್ಕಲ್, ಕನ್ನಡಾಂಬೆ ವೃತ್ತದಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು.