ಮಡಿಕೇರಿ, ಅ. ೨೩: ಸೈನಿಕ ಶಾಲೆಗಳ ೬ ಮತ್ತು ೯ನೇ ತರಗತಿಗೆ ಸೇರ್ಪಡೆ ಸಂಬAಧಿತ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿಯಿರುವ ಕೊಡಗು ಶಿಶು ಕಲ್ಯಾಣ ಸಂಸ್ಥೆಯಲ್ಲಿ ನವೆಂಬರ್ ೨ ರಿಂದ ಪ್ರತೀ ಭಾನುವಾರ (೧೦ ಭಾನುವಾರ) ಸೈನಿಕ ಶಾಲಾ ಪರೀಕ್ಷಾ ಮಾಹಿತಿ ಕಾರ್ಯಾಗಾರ ಪ್ರತೀ ಭಾನುವಾರ ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ಜರುಗಲಿದೆ. ಸರಗೂರು ಸೈನಿಕ ಶಾಲೆಯ ಪರಿಣಿತ ಅಧ್ಯಾಪಕರು ಸೇರಿದಂತೆ ವಿವಿಧ ವಿಷಯ ತಜ್ಞರು ಈ ಕಾರ್ಯಾಗಾರದಲ್ಲಿ ಉಪಯುಕ್ತ ಮಾಹಿತಿ ನೀಡಲಿದ್ದಾರೆ. ನವೆಂಬರ್ ೨ ರಂದು ಬೆಳಿಗ್ಗೆ ೯.೩೦ ಗಂಟೆಗೆ ಉದ್ಘಾಟನೆ ನಂತರ ವಿದ್ಯಾರ್ಥಿಗಳ ಪೋಷಕರಿಗೂ ಮಾಹಿತಿ ಶಿಬಿರ ಆಯೋಜಿತವಾಗಿದೆ. ಸೈನಿಕ ಶಾಲೆಗೆ ಸೇರಲಿಚ್ಚಿಸುವ ಕೊಡಗಿನ ವಿದ್ಯಾರ್ಥಿಗಳು ಈ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಕೋರಿದ್ದಾರೆ. ಕಾರ್ಯಾಗಾರಕ್ಕೆ ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆಗಳು - ಡಾ. ಸಿ.ಆರ್. ಪ್ರಶಾಂತ್ -೯೪೪೮೨೪೬೯೫೦, ಅಂಕಾಚಾರಿ ೯೯೬೪೧೦೩೩೨೨, ಪ್ರಕಾಶ್ ಪೂವಯ್ಯ. ೭೭೬೦೯೪೦೬೧೬.