ಮಡಿಕೇರಿ, ಅ. ೨೩: ದೀಪಾವಳಿ ಹಬ್ಬದ ಅಂಗವಾಗಿ ಬಲಿಪಾಡ್ಯಮಿಯಂದು ಹಣತೆ ಹಚ್ಚಿ ಬೆಳಗಿ ಗೋ ಪೂಜೆಯೊಂದಿಗೆ ಸಂಭ್ರಮದಿAದ ಹಬ್ಬ ಆಚರಿಸಲಾಯಿತು. ನಾಡಿನ ದೇವಾಲಯಗಳು., ಮನೆ ಮನೆಗಳಲ್ಲಿ ಹಬ್ಬಾಚರಣೆ ಸಂಭ್ರಮ ಮೂಡಿಸಿತ್ತು.
ಧಾರ್ಮಿಕ ಧರ್ಮದಾಯ ದತ್ತಿ ಇಲಾಖೆಯ ಆದೇಶದಂತೆ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಗೋವುಗಳನ್ನು ಪೂಜಿಸಲಾಯಿತು. ದೇಗುಲದ ಗೋಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಗೋವುಗಳಿಗೆ ತಿಲಕವಿಟ್ಟು, ಆರತಿ ಬೆಳಗಿ ಪೂಜಿಸಲಾಯಿತು. ನಾಡಿನ ಪುಣ್ಯಕ್ಷೇತ್ರ ಭಾಗಮಂಡಲ ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ಕ್ಷೇತ್ರಗಳಲ್ಲಿ ಗೋವುಗಳನ್ನು ಸ್ನಾನ ಮಾಡಿಸಿ ಆರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸಿ ಅಕ್ಕಿ, ಬೆಲ್ಲ, ಹಣ್ಣು ಹಂಪಲುಗಳಿAದ ಗೋಗ್ರಾಸವನ್ನು ನೀಡಿ ಪೂಜೆ ನೆರವೇರಿಸಲಾಯಿತು. ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಮಡಿಕೇರಿಯಲ್ಲಿ..,
ಮಡಿಕೇರಿಯ ಐತಿಹಾಸಿಕ ಹಿನ್ನೆಲೆಯಿರುವ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಕೂಡಾ ಸುರಿಯುವ ಮಳೆಯ ನಡುವೆಯೂ ಗೋ ಪೂಜೆ ಆಚರಿಸಲಾಯಿತು. ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಗೋವುಗಳನ್ನು ಸ್ನಾನ ಮಾಡಿಸಿ, ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ದೇವಾಲಯ ಸಮಿತಿ ಸದಸ್ಯ ಸಂತೋಷ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಸದಸ್ಯ ವಿಶಾಲ್ ನಂದಕುಮಾರ್, ದೇವಾಲಯದ ಸಿಬ್ಬಂದಿಗಳು, ಇತರರಿದ್ದರು.
ರಂಗಸಮುದ್ರದಲ್ಲಿ ಸಾಮರಸ್ಯ ಜ್ಯೋತಿ ಪೂಜೆ
ಕೂಡಿಗೆ: ಕುಶಾಲನಗರ ತಾಲೂಕು ಸಾಮರಸ್ಯ ವೇದಿಕೆ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ, ವಿರುಪಾಕ್ಷಪುರ, ಸಿರಾಜಳ್ಳ ಹಾಗೂ ಹೊಸಪಟ್ಟಣ ಗ್ರಾಮದಲ್ಲಿ ಸಾಮರಸ್ಯ ದೀಪಾವಳಿ ಆಚರಣೆ ನಡೆಯಿತು.
ವೇದಿಕೆಯ ಪದ್ಮ ಹಾಗೂ ಶಾಂತಕುಮಾರ ದಂಪತಿ ಗೋ ಪೂಜೆ ಮಾಡಿ ಬಸವೇಶ್ವರ ದೇವಸ್ಥಾನದ ಗರ್ಭಗುಡಿಯಿಂದ ದೀಪದೊಂದಿಗೆ ಮೆರವಣಿಗೆ ಮೂಲಕ ಬಂದು ಅಂಬೇಡ್ಕರ್ ಕಾಲೋನಿಯಲ್ಲಿ ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮಗಳ ದಲಿತ ಬಂಧುಗಳ ಜೊತೆಯಲ್ಲಿ ಊರಿನ ಪ್ರಮುಖರು ಮತ್ತು ವಿವಿಧ ಸಮುದಾಯಗಳ ಮುಖಂಡರ ನೇತೃತ್ವದಲ್ಲಿ ಸಾಮರಸ್ಯದ ಜ್ಯೋತಿಯನ್ನು ಮನೆಮನೆಗಳಲ್ಲಿ ಬೆಳಗಿಸಿ ಸಹಭೋಜನದಲ್ಲಿ ತೊಡಗಿಸಿಕೊಂಡು ಬಂಧುತ್ವದ ಮಹತ್ವ ಎತ್ತಿಹಿಡಿಯಲಾಯಿತು. ಮಂಗಳೂರು ವಿಭಾಗದ ಸಾಮರಸ್ಯ ವೇದಿಕೆ ಸಹ ಸಂಯೋಜಕ ಶಿವಪ್ರಸಾದ್ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಎಲ್ಲದರಲ್ಲೂ ಭಾರತ ಮುಂದುವರಿದಿದೆ. ಆದರೂ ಅಸ್ಪೃಶ್ಯತೆ ಇನ್ನೂ ಭಾರತದಲ್ಲಿ ತೊಲಗಲಿಲ್ಲ. ವ್ಯಕ್ತಿಗತ ಪರಿವರ್ತನೆಗಾಗಿ ಸಂಘಟನೆ ನೂರು ವರ್ಷದಿಂದ ಈ ರೀತಿ ಕಾರ್ಯಕ್ರಮಗಳ ಮೂಲಕ ಪ್ರಯತ್ನ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವೇದಿಕೆ ಪ್ರಮುಖ ಡಾ.ಉದಯ್ ಕುಮಾರ್, ಜಿಲ್ಲಾ ಸಂಯೋಜಕ ಹರೀಶ್ ತಮ್ಮಯ್ಯ, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ರಕ್ಷಿತ್ ಮಾವಾಜಿ, ಗೋ ಸೇವಾ ಪ್ರಮುಖ ಪ್ರದೀಪ್, ರಮೇಶ್ ಬೊಟ್ಟು ಮನೆ, ವಿಭಾಗ ಸಂಸ್ಕೃತ ಭಾರತಿ ಪ್ರಮುಖ ಮಧುಸೂದನ್, ಪರ್ಯಾವರಣ ಸಂಯೋಜಕ್ ಜನಾರ್ಧನ್, ಲೆಕ್ಕ ಪರಿಶೋಧಕ ದೇವಿ ಪ್ರಸಾದ್ ಸಾಮರಸ್ಯ ವೇದಿಕೆ ಕಾರ್ಯಕರ್ತರಾದ ಅರುಣ್, ಕಿರಣ್, ನಿತನ್, ಪ್ರತಾಪ್, ಯೋಗೇಶ್, ಗಿರಿ, ಹರಿನೇಶ್, ಚಂದ್ರು, ವಿಶ್ವ, ಸಂದೇಶ್, ಪರ್ಲಕೋಟಿ ಕಿರಣ್, ಪವನ್ ದೇರಳ, ರದೀಶ್ ಊರಿನ ಪ್ರಮುಖರು, ಮಹಿಳೆಯರು ಪಾಲ್ಗೊಂಡಿದ್ದರು. (ಮೊದಲ ಪುಟದಿಂದ) ಕೂಡಿಗೆ : ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ದೀಪಾವಳಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಯಾ ಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಗ್ರಾಮದ ಮಹಿಳೆಯರು ಮನೆ ಮುಂದೆ ವಿವಿಧ ಬಣ್ಣದ ರಂಗೋಲಿ ಹಾಕಿ ಸಂಪ್ರದಾಯದAತೆ ಸೆಗಣಿ ಸರಿಸಿ ಹೂಗಳಿಂದ ಅಲಂಕರಿಸಿ ಪೂಜಿಸಿದರು. ಮಹಿಳೆಯರು ಹೊಸ ಬಟ್ಟೆಗಳನ್ನು ಧರಿಸಿ, ಮನೆ, ಅಂಗಡಿಗಳಲ್ಲಿ ಲಕ್ಷಿö್ಮ ಪೂಜೆ ನೆರವೇರಿಸಿ ನಂತರ ಮನೆಯಲ್ಲಿ, ಬಗೆ ಬಗೆಯ ವಿಶೇಷ ಭೋಜನ ತಯಾರಿಸಿ ಸಹ ಕುಟುಂಬದೊAದಿಗೆ ಸೇವಿಸಿದರು. ಗ್ರಾಮದ ರೈತರು ತಾವುಗಳು ಸಾಗಿದ ಹಸುಗಳಿಗೆ ಸ್ನಾನ ಮಾಡಿಸಿ ಅವುಗಳನ್ನು ಹೂಗಳಿಂದ ಅಲಂಕರಿಸಿ ಸಂಪ್ರದಾಯದAತೆ ಗೋ ಪೂಜೆ ಮಾಡಿದರು. ಚೆಟ್ಟಳ್ಳಿ: ಚೆಟ್ಟಳ್ಳಿಯ ವೀರಾಂಜನೇಯ ಯುವಕ ಸಂಘದ ವತಿಯಿಂದ ಶ್ರೀನರೇಂದ್ರ ಮೋದಿ ಸಹಕಾರ ಭವನದಲ್ಲಿ ಮಹಿಳೆಯರು ಪುರುಷರು ಹಾಗು ಮಕ್ಕಳು ಹಣತೆಯನ್ನು ಬೆಳಗುವ ಮೂಲಕ ದೀಪಾವಳಿಯನ್ನು ಆಚರಿಸಿದರು.
ಹಿರಿಯ ಸಮಾಜ ಸೇವಕರು ಹಾಗೂ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಮಾತನಾಡಿ ಹಿಂದೂ ಸಂಪ್ರದಾಯದAತೆ ಎಲ್ಲೆಡೆ ದೀಪವನ್ನು ಬೆಳಗುವ ಮೂಲಕ ದೀಪಾವಳಿಯನ್ನು ಸಂಭ್ರಮದಿAದ ಆಚರಿಸಲಾಗಿದೆ. ಅದೇರೀತಿ ಹಲವು ವರ್ಷಗಳಿಂದ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿಯ ಆಚರಣೆ ನಡೆಯುತ್ತಿದೆ ಎಂದು ಹೇಳಿದರು. ಮಡಿಕೇರಿ : ನಗರದಂಚಿನಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ‘ದೀಪೋತ್ಸವ’ ಶ್ರದ್ಧಾಭಕ್ತಿಯಿಂದ ನಡೆಯಿತು. ಭಕ್ತರು ಸಹಸ್ರ ಹಣತೆಗಳನ್ನು ಹಚ್ಚಿ ದೇವಾಲಯನ್ನು ಬೆಳಗಿದರು.
ದೇವಾಲಯದ ಧರ್ಮದರ್ಶಿ ಹೆಚ್.ಎಸ್. ಗೋವಿಂದಸ್ವಾಮಿ ಅವರ ನೇತೃತ್ವದಲ್ಲಿ ರಾತ್ರಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ದೀಪೋತ್ಸವ ಜರುಗಿತು. ಕಳಸ ಪೂಜೆ, ಅನ್ನದಾನ ಮತ್ತು ಪ್ರಸಾದ ವಿನಿಯೋಗವಾದ ನಂತರ ತಾಯಿಯ ದರ್ಶನ ಹಾಗೂ ದೀಪೋತ್ಸವ ನೆರವೇರಿತು.
೧೦೮ ಎಳ್ಳು ಬತ್ತಿಯನ್ನು ದೇವಾಲಯದ ಆವರಣದಲ್ಲಿ ಹಚ್ಚಿದರೆ ದೋಷ ಪರಿಹಾರವಾಗಲಿದೆ ಎನ್ನುವ ನಂಬಿಕೆಯ ಹಿನ್ನೆಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೀಪೋತ್ಸವವನ್ನು ಯಶಸ್ವಿಗೊಳಿಸಿದರು.ಚೆಯ್ಯಂಡಾಣೆ : ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ತುಳಸಿಪೂಜೆ ಹಾಗೂ ಗೋಪೂಜೆಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.
ದೇವಸ್ಥಾನದ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವರಿಗೆ, ಶ್ರೀ ಅಯ್ಯಪ್ಪ ಸ್ವಾಮಿಗೆ, ಶ್ರೀನಾಗ ದೇವರಿಗೆ, ಶ್ರೀ ವನದುರ್ಗೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ತದನಂತರ ತುಳಸಿ ಪೂಜೆ, ಕುಂಕುಮಾರ್ಚನೆ, ಪುಷ್ಪಾರ್ಚನೆ ಹಾಗೂ ಪಂಚಾಮೃತ ಸೇವೆಯನ್ನು ನಡೆಸಿ ನೈವೇದ್ಯ ಅರ್ಪಿಸಿದರು. ಬಳಿಕ ಮಹಾಮಂಗಳಾರತಿ ಮಾಡಿದರು. ದೇವಸ್ಥಾನದ ಒಳ ಆವರಣದಲ್ಲಿ ಗೋ ಪೂಜೆ ನೆರವೇರಿಸಲಾಯಿತು. ಗೋವುವಿಗೆ ಕುಂಕುಮ ಇಟ್ಟು ವಸ್ತçವನ್ನಿಡಲಾಯಿತು. ಹೂವನ್ನು ಮುಡಿಸಿ ಆರತಿ ಬೆಳಗಲಾಯಿತು. ಗೋವಿಗೆ ನೈವೇದ್ಯ ಆಹಾರ ನೀಡಲಾಯಿತು. ನೆರೆದಿದ್ದ ಭಕ್ತಾದಿಗಳು ತುಳಸಿ ಕಟ್ಟೆಗೆ ಹಾಗೂ ಗೋ ಮಾತೆಗೆ ನಮಿಸಿ ಪ್ರಾರ್ಥಿಸಿದರು. ಅರ್ಚಕರು ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು. ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ನಾಪೋಕ್ಲು: ಆದರ್ಶ್ ಫ್ರೆಂಡ್ಸ್ ಚಡಾವು ಸಂಪಾಜೆ ವತಿಯಿಂದ ೧೩ನೇ ವರ್ಷದ ಗೋ ಪೂಜೆ ಸಂಘದ ಅಧ್ಯಕ್ಷ ಸುನಿಲ್ ಸಂಪಾಜೆ ಅಧ್ಯಕ್ಷತೆಯಲ್ಲಿ ನಡೆಯಿತು.
ಧಾರ್ಮಿಕ ಉಪನ್ಯಾಸವನ್ನು ವಾಗ್ಮಿ ವಿಕ್ರಾಂತ್ ದೇಲಂಪಾಡಿ ನೀಡಿದರು. ಈ ಸಂದರ್ಭ ಗೋವಿಗೆ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾ ದೇವಿ ಬಾಲಚಂದ್ರ ಕಳಗಿ ಹಾಗೂ ಆದರ್ಶ್ ಫ್ರೆಂಡ್ಸ್ನ ಪದಾಧಿಕಾರಿಗಳು, ಸದಸ್ಯರು ಹಾಗೂ ಮಹಿಳಾ ಪದಾಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.ಸೋಮವಾರಪೇಟೆ: ಪಟ್ಟಣದ ವೀರಶೈವ ಸಮಾಜದ ವತಿಯಿಂದ ಬಸವೇಶ್ವರ ದೇವಾಲಯದಲ್ಲಿ ದೀಪಾವಳಿಯ ಬಲಿಪಾಡ್ಯಮಿ ದಿನದಂದು ಗೋಪೂಜೆ ನೆರವೇರಿತು.
ವೀರಶೈವ ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ, ಕಾರ್ಯದರ್ಶಿ ಸಿ.ಸಿ. ನಾಗರಾಜ್, ಕೆ.ಎನ್. ನಾಗೇಶ್, ರಮೇಶ್, ದೇವಾಲಯದ ಅರ್ಚಕ ಶೇಖಯ್ಯ ಪೂಜಾರ್, ಸಮಾಜದ ಸದಸ್ಯರುಗಳಾದ ಸರ್ವಜ್ಞಮೂರ್ತಿ, ಪೂರ್ಣಿಮಾ, ನಳಿನಿ, ಯಶೋಧ, ತೃಪ್ತಿ, ದೀಪ್ತಿ, ವೇದಾವತಿ, ನವನೀತ್ ಸೇರಿದಂತೆ ಇತರರು ಇದ್ದರು.ಶನಿವಾರಸಂತೆ: ಪಟ್ಟಣದ ಜನತೆ ದೀಪಾವಳಿಯ ಮೊದಲ ದಿನ ನರಕ ಚತುರ್ದಶಿ ಹಾಗೂ ಎರಡನೇ ದಿನದ ಅಮವಾಸ್ಯೆ ಲಕ್ಷಿö್ಮÃ ಪೂಜೆಯನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿAದ ಆಚರಿಸಿದರು. ಇದ್ದಕ್ಕಿದ್ದಂತೆ ಸುರಿಯುವ ಮಳೆ, ಅರೆ ಘಳಿಗೆಯ ಬಿಸಿಲು ಹಾಗೂ ಮೈ ನಡುಗಿಸುವ ಚಳಿಯ ವಾತಾವರಣದಲ್ಲೂ ಮನೆಮಂದಿಯೆಲ್ಲ ಅಭ್ಯಂಜನ ಸ್ನಾನ ಮಾಡಿ, ನೂತನ ವಸ್ತç ಧರಿಸಿ, ಬಾಗಿಲಿಗೆ ತಳಿರುತೋರಣ ಕಟ್ಟಿ, ಮುಂಬಾಗಿಲಿಗೆ ರಂಗೋಲಿ ಬಿಡಿಸಿ, ಕೃಷ್ಣನ ಪೂಜಿಸಿದರು.ದೇವಾಲಯಗಳಿಗೆ ತೆರಳಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಮಧ್ಯಪೇಟೆ ಹಾಗೂ ಸಮೀಪದ ಗುಡುಗಳಲೆಯ ಪ್ರತಿ ಅಂಗಡಿಗಳು, ಹೊಟೇಲ್, ಕ್ಯಾಂಟೀನ್‌ಗಳಲ್ಲಿ ಅಮಾವಾಸ್ಯೆಯ ಲಕ್ಷಿö್ಮÃ ಪೂಜೆ ಸಂಭ್ರಮದಿAದ ಜರುಗಿತು. ಸೇವಂತಿಗೆ, ಚೆಂಡುಹೂವುಗಳ ಮಾಲೆಗಳಿಂದ ಅಂಗಡಿಗಳನ್ನು ಅಲಂಕರಿಸಿ, ಝಗಮಘಿಸುವ ವಿದ್ಯುತ್ ದೀಪಗಳನ್ನು ಬೆಳಗಿಸಿ, ಹಣತೆ ಹಚ್ಚಿಟ್ಟು ವರ್ತಕರು ವರ್ಷಕ್ಕೊಮ್ಮೆ ಬರುವ ದೀಪಾವಳಿಯ ಅಮಾವಾಸ್ಯೆಯ ಲಕ್ಷಿö್ಮÃ ಪೂಜೆಯನ್ನು ಸಂಭ್ರಮದಿAದ ಆಚರಿಸಿದರು.ಸಿಹಿ ಹಂಚಿದರು.ಮಹಿಳೆಯರಿಗೆ ಅರಶಿನ-ಕುಂಕುಮ ನೀಡಿ ಗೌರವಿಸಿದರು.ಸಿಡಿಮದ್ದು ಸಿಡಿಸಿ ಸಂಭ್ರಮಿಸಿದರು.
ಲಕ್ಷಿö್ಮÃ ಪೂಜಾ ಸಂದರ್ಭ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಹಾಗೂ ಶಿಷ್ಯ ಮಂಜುನಾಥ್ ಗುಡುಗಳಲೆಯ ಉದ್ಯಮಿ ಬಿ.ಎಸ್.ಮೋಹನ್ ಕುಮಾರ ಹಾಗೂ ಇತರ ವರ್ತಕರ ಅಂಗಡಿಗಳಲ್ಲಿ ನಡೆದ ಲಕ್ಷಿö್ಮÃ ಪೂಜೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ ಹರಸಿದರು. ಪಟ್ಟಣದ ಶ್ರೀಬೀರಲಿಂಗೇಶ್ವರ ಪ್ರಬಲ ಭೈರವಿ ದೇವಾಲಯದಲ್ಲೂ ಅಮವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು.ಶನಿವಾರಸಂತೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದೀಪಾವಳಿ ಬಲಿಪಾಡ್ಯಮಿ ಹಬ್ಬವನ್ನು ಗೋಪೂಜೆಯೊಂದಿಗೆ ಸಾಂಪ್ರದಾಯಿಕವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಈ ಹಬ್ಬದಲ್ಲಿ ಗೋಪೂಜೆೆಗೆ ಮಹತ್ವವಿದ್ದು ಹಳ್ಳಿಗಳಲ್ಲಿ ರೈತರು, ಪಶುಪಾಲಕರು ತಮ್ಮ ಗೋವುಗಳನ್ನು ಚೆಂಡು ಹೂವಿನ ಮಾಲೆ ಹಾಗೂ ಬೆಳಗುಂಬ ಬಳ್ಳಿಯನ್ನು ಸುತ್ತಿ ಅಲಂಕರಿಸಿ, ಬೆನ್ನ ಮೇಲೆ ಅಕ್ಕಿಹಿಟ್ಟಿನ ಗುನ್ನಹಾಕಿ ಪೂಜಿಸಿದರು.
ಬಲಿಪಾಡ್ಯಮಿ ಹಾಗೂ ಚೆಂಡು ಹೂವಿಗೂ ಅವಿನಾಭಾವ ಸಂಬAಧವಿದ್ದು;ಹೆಣ್ಣು ಮಕ್ಕಳು ಮುಂಜಾನೆಯೇ ಮನೆಯ ಹೊಸ್ತಿಲ ಮೇಲೆ ಹಾಗೂ ಅಂಗಳದಲ್ಲಿ ಬಿಡಿಸಿದ ರಂಗೋಲಿ ಮೇಲೆ ಸಗಣಿ ಉಂಡೆಯಲ್ಲಿ ಚೆಂಡು ಹೂವುಗಳನ್ನಿಟ್ಟು ದೀಪ ಬೆಳಗಿಸಿ ಪೂಜಿಸಿದರು.ರಾತ್ರಿಯೂ ಮನೆಯಂಗಳದಲ್ಲಿ ಸಾಲು ಹಣತೆಗಳನ್ನು ಹಚ್ಚಿಟ್ಟು ಬಲೀಂದ್ರನನ್ನು ಕರೆದು ಪೂಜಿಸಿದರು.ನೈವೇದ್ಯ ಸಮರ್ಪಿಸಿ, ಸಿಹಿ ಹಂಚಿ, ಸಹಭೋಜನ ಸವಿದು ಹಬ್ಬವನ್ನು ಸಂಪನ್ನಗೊಳಿಸಿದರು.ಹಬ್ಬದ ಪ್ರಯುಕ್ತ ದೇವಾಲಯಗಳಲ್ಲೂ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಸೋಮವಾರಪೇಟೆ: ಇಲ್ಲಿನ ಶ್ರೀ ಆಂಜನೇಯ ದೇವಾಲಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೇವಾಲಯದ ಆವರಣದಲ್ಲಿ ಗೋ ಪೂಜೆ ನಡೆಯಿತು.
ದೇವಾಲಯ ಅರ್ಚಕ ನಂಜುAಡಸ್ವಾಮಿ ಪೂಜಾ ಕಾರ್ಯವನ್ನು ನಡೆಸಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ. ಗೋಪಾಲ್, ಉಪಾಧ್ಯಕ್ಷ ಅಪ್ಪಯ್ಯ, ಪ್ರಮುಖರಾದ ಸಿ.ಎಲ್. ಸೀತಾರಾಮ್, ಎಂ.ಸಿ. ರಾಘವ, ಜಿ.ಬಿ. ಸೋಮಯ್ಯ, ಕೆ.ಜಿ. ಸುರೇಶ್, ಗಣೇಶ್ ಇದ್ದರು.