ವಿಶೇಷ ವರದಿ : ಅನಿಲ್ ಎಚ್.ಟಿ.

ಅಗಸ್ತö್ಯ... ಇಂದು ಮಳೆ ಬರುತ್ತಾ, ಜೋರು ಬರುತ್ತೇನೋ...?

ಓಹ್.. ತಲೆ ಅಲ್ಲಾಡಿಸಿ ಉತ್ತರಿಸಿದ್ದು ನೋಡಿದರೆ ಮಳೆ ಇವತ್ತೂ ಜೋರಾಗಿದೆ ಸರಿ ಕಣೋ.. ಅಗಸ್ತö್ಯ .. ಮಳೆ ಅನಾಹುತದಿಂದ ನಮ್ಮನ್ನೆಲ್ಲಾ ನೀನೇ ಕಾಪಾಡಪ್ಪಾ..

ಹೀಗೊಂದು ಸಂಭಾಷಣೆ ಕೇಳಿಬಂದದ್ದು ಕಾವಾಡಿ ಗೋ ಶಾಲೆಯಲ್ಲಿ..

ಅಮ್ಮತ್ತಿ ಬಳಿಯಿರುವ ಕಾವಾಡಿ ಗ್ರಾಮದ ಕಾಮಧೇನು ಗೋಶಾಲೆಯಲ್ಲಿ ಪುರೋಹಿತರಾದ ರಾಮಚಂದ್ರ ಭಟ್ ದಿನನಿತ್ಯ ತಮ್ಮ ಪ್ರೀತಿಯ ಅಗಸ್ತö್ಯ ಹೆಸರಿನ ನಂದಿಯೊAದಿಗೆ ಸಂವಾದ ನಡೆಸುತ್ತಾರೆ. ಅಗಸ್ತ್ಯನಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ಕೇಳುತ್ತಾರೆ. ಅಗಸ್ತö್ಯ ಇಂತಹ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುತ್ತಲೇ ಬಂದಿದ್ದಾನೆ. ಹೀಗಾಗಿಯೇ ಗೋ ಶಾಲೆಗೆ ಬಂದು ಅನೇಕರು ಅಗಸ್ತö್ಯನ ಬಳಿ ಪ್ರಶ್ನೆ ಕೇಳಿ ಸೂಕ್ತ ಉತ್ತರ ಪಡೆಯುತ್ತಿದ್ದಾರೆ.

ಕಾವಾಡಿಯಲ್ಲಿರುವ ಕಾಮಧೇನು ಗೋಶಾಲೆ ಪ್ರಾರಂಭವಾಗಿ ೫ ವರ್ಷಗಳೇ ಕಳೆದಿವೆ. ರಾಧೆ ಎಂಬ ಗೋವಿನ ಸಾಕಾಣೆಯ ಮೂಲಕ ನನಸಾದ ಗೋ ಶಾಲೆಯ ಕನಸಿನ ಯೋಜನೆ ಈಗ ೬೫ ಗೋವುಗಳ ಪಾಲನೆಗೆ ಬಂದು ತಲುಪಿದೆ.

ಗೋವುಗಳಿಲ್ಲದ ಮನೆ ಸ್ಮಶಾನಕ್ಕೆ ಸಮ ಎಂಬ ಪುರಾಣ ಕಾಲದ ಮಾತನ್ನು ಪ್ರಬಲವಾಗಿ ನಂಬಿರುವ ರಾಮಚಂದ್ರಭಟ್ ಅವರ ಕನಸಿನ ಯೋಜನೆಯಾಗಿ ಜಾರಿಗೊಂಡ ಗೋ ಸಾಕಾಣಿಕೆ ಈಗ ಗೋ ಶಾಲೆಯಾಗಿ, ಟ್ರಸ್ಟ್ ನಿರ್ವಹಣೆಯ ರೂಪದಲ್ಲಿ ಬೃಹತ್ ಯೋಜನೆಯಾಗುವಂತೆ ಮಾಡಿದೆ.

ಪ್ರಾರಂಭವಾಗಿದ್ದು ಹೇಗೆ?

ಅಮ್ಮತ್ತಿ ಬಳಿಯ ಕಾವಾಡಿಯಲ್ಲಿನ ನಿವೇಶನದಲ್ಲಿ ರಾಮಚಂದ್ರ ಭಟ್ ನೂತನ ಮನೆ ನಿರ್ಮಾಣ ಮಾಡಿ ಗೃಹಪ್ರವೇಶಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಇದೇ ಸಂದರ್ಭ ರಾಘವೇಶ್ವರ ಶ್ರೀಗಳು ವೀರಾಜಪೇಟೆಗೆ ಬಂದು ಉಪನ್ಯಾಸ ನೀಡಿದ ಸಂದರ್ಭ ಪ್ರತೀ ಮನೆಯಲ್ಲಿಯೂ ಗೋವುಗಳನ್ನು ಸಲಹಿ, ಗೋವಿಲ್ಲದ ಮನೆ ಸ್ಮಶಾನಕ್ಕೆ ಸಮಾನ ಎಂದು ಹೇಳಿದ್ದು ಇವರ ಮನಸ್ಸಿನಲ್ಲಿ ಅಗಾಧ ಪ್ರಭಾವ ಬೀರಿತು. ಹೊಸ ಮನೆಯಲ್ಲಿ ಗೋ ಸಾಕಬೇಕೆಂದು ನಿರ್ಧರಿಸಿರುವಂತೆಯೆ ಕಾಕತಾಳೀಯ ಎಂಬAತೆ ೫ ಗೋವುಗಳು ಭಟ್ಟರಿಗೆ ಗೋದಾನ ರೂಪದಲ್ಲಿ ದೊರಕಿತ್ತು. ಹೀಗಾಗಿ ೫ ಹಸುಗಳೊಂದಿಗೆ ಗೃಹಪ್ರವೇಶ ನೆರವೇರಿತ್ತು.

೭ ಬಾರಿ ಕರುಗಳಿಗೆ ಜನ್ಮ ನೀಡಿದ್ದ ರಾಧೆ ಎಂಬ ಹಸುವನ್ನು ನೀಡುವುದಾಗಿ ಸುಳ್ಯದ ಬಂಧು ಶಿವರಾಮ ಭಟ್ ಹೇಳಿದರು. ತಡಮಾಡದೇ ರಾಧೆಯನ್ನೇ ಮನೆಗೆ ಕರೆತಂದ ರಾಮಚಂದ್ರಭಟ್ ಅದನ್ನು ಸಲಹತೊಡಗಿದರು. ಇದೇ ವೇಳೆ ಕಾಲಕ್ರಮೇಣ ಅನೇಕರು ತಮ್ಮಲ್ಲಿನ ಹಸುಗಳನ್ನು ಸಾಕಲಾಗದೇ ರಾಮಚಂದ್ರಭಟ್ ಅವರ ಪೋಷಣೆಗೆ ತಂದೊಪ್ಪಿಸತೊಡಗಿದರು. ತನಗೇ ಅರಿವಿಲ್ಲದಂತೆ ಇವರ ಮನೆಯಲ್ಲಿ ಗೋಶಾಲೆಯ ವಾತಾವರಣ ಸೃಷ್ಟಿಯಾಯಿತು. ಕೊನೆಗೂ ೨೦೨೦ ರ ಆಗಸ್ಟ್ನಲ್ಲಿ ಕಾಮಧೇನು ಗೋಶಾಲೆ ಎಂಬ ಹೆಸರಿನಿಂದ ಅಧಿಕೃತವಾಗಿ ಗೋಶಾಲೆ ಆರಂಭವಾಯಿತು. ಪ್ರಸ್ತುತ ಇಲ್ಲಿ ೬೫ ಗೋವುಗಳನ್ನು ಕಾಮದೇನು ಗೋಶಾಲಾ ಟ್ರಸ್ಟ್ ಮೂಲಕ ಪೋಷಣೆ ಮಾಡಲಾಗುತ್ತಿದೆ. ಪ್ರತಿಯೊಂದಕ್ಕೂ ನಾಮಕರಣವಾಗಿರುವ ೨೨ ಕರುಗಳೂ ಸೇರಿದಂತೆ ವಿಶ್ವಾಮಿತ್ರ, ರಾಮ, ಅರ್ಜುನ, ಮಹಾರಾಜ, ಅಮೃತ, ಬಲರಾಮ, ಸುರಭಿ ಹೀಗೆ ವಿವಿಧ ಹೆಸರಿನ ೪ಐದÀನೇ ಪುಟಕ್ಕೆ (ಮೊದಲ ಪುಟದಿಂದ) ೬೫ ಗೋವುಗಳನ್ನು ಕಾಮಧೇನು ಗೋಶಾಲೆಯಲ್ಲಿ ಕಾಣಬಹುದು. ಕಾಮಧೇನು ಗೋಶಾಲಾ ಟ್ರಸ್ಟ್ ನಲ್ಲಿ ರಾಮಚಂದ್ರಭಟ್ ಮ್ಯಾನೆಜಿಂಗ್ ಟ್ರಸ್ಟಿಯಾಗಿದ್ದರೆ, ರಾಘವೇಂದ್ರ ಭಟ್ ಮತ್ತು ಕೆ.ಕೆ. ಶ್ಯಾಮ ಅವರು ಟ್ರಸ್ಟಿಗಳಾಗಿದ್ದಾರೆ.

ಕಾಮದೇನು ಗೋಶಾಲೆಯಲ್ಲಿ ೬೫ ಗೋಪಾಲನೆಗೆ ಕನಿಷ್ಟ ೪-೫ ಎಕರೆ ಜಾಗ ಬೇಕಾಗಿದೆ. ಈಗ ಜಾಗದ ಕೊರತೆ ಒಂದೆಡೆಯಾದರೆ ಪ್ರತೀನಿತ್ಯವೂ ಅಗತ್ಯವಾದ ಹಿಂಡಿ, ಹಸಿ ಮತ್ತು ಒಣಹುಲ್ಲಿನ ಕೊರತೆಯೂ ಎದುರಾಗಿದೆ. ೬೫ ಗೋಪಾಲನೆಗೆ ದಿನಕ್ಕೆ ಕನಿಷ್ಟ ೬,೫೦೦ ರೂ. ವೆಚ್ಚವಾಗುತ್ತಿದೆ. ಸಮಸ್ಯೆಯ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಆದರೆ ಗೋ ಮಾತೆಯನ್ನು ಸಲಹುವ ನನ್ನ ಕೈಂಕರ್ಯ, ಪ್ರತಿಜ್ಞೆಯಲ್ಲಿ ಹಿಂದೇಟು ಹಾಕಲಾರೆ. ಮಕ್ಕಳಂತೆ ಗೋವುಗಳನ್ನು ಸಲಹುತ್ತಿದ್ದೇನೆ ಎಂದು ರಾಮಚಂದ್ರಭಟ್ ಹೆಮ್ಮೆಯಿಂದ ಹೇಳುತ್ತಾರೆ. ಪ್ರತಿನಿತ್ಯ ಮುಂಜಾನೆ ೫ ಗಂಟೆಗೆ ಗೋಪಾಲನೆಗೆ ತೊಡಗಿಸಿಕೊಳ್ಳುವ ಇವರ ಕುಟುಂಬ ವರ್ಗ ರಾತ್ರಿ ೮ ಗಂಟೆಯವರೆಗೂ ಗೋವುಗಳ ಸಲಹುವಿಕೆಗೆ ಸಮಯ ವಿನಿಯೋಗ ಮಾಡುತ್ತಿದೆ. ಸಭೆ, ಸಮಾರಂಭಗಳಿಗೆ ಕುಟುಂಬ ಸದಸ್ಯರಿಗೆ ತೆರಳಲು ಆಗದಷ್ಟು ಕೆಲಸಗಳು ಗೋವುಗಳ ಪಾಲನೆಯಲ್ಲಿವೆ. ಹೀಗಿದ್ದರೂ ಯಾವೋರ್ವ ಸದಸ್ಯನೂ ನೊಂದುಕೊಳ್ಳದೇ ಮನೆಮಕ್ಕಳಂತೆ ಗೋವುಗಳನ್ನು ಪಾಲನೆ ಮಾಡುತ್ತಿದ್ದಾರೆ. ಅವಳಿ ಸಹೋದರ ರಾಘವೇಂದ್ರ ಭಟ್ ಗೋ ಸೇವಾ ಕಾಯಕದಲ್ಲಿ ನೆರವಾಗುತ್ತಿದ್ದಾರೆ.

ಗೋವುಗಳ ಬಗ್ಗೆ ಇಂದಿನ ಪೀಳಿಗೆಯಲ್ಲಿ ಮಾಹಿತಿಯೇ ಇಲ್ಲ. ದಿನನಿತ್ಯ ಕಾಫಿ, ಟೀಗೆ ಹಾಲು ಎಲ್ಲಿಂದ ಬರುತ್ತಿದೆ ಎಂದರೆ ಪ್ಯಾಕೇಟ್ ನಿಂದ ಎಂಬ ಉತ್ತರವೇ ಹೆಚ್ಚಾಗಿ ಕೇಳಿಬರುತ್ತಿದೆ. ಹೀಗಾಗಿ ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೋಶಾಲೆಗಳಿಗೆ ಭೇಟಿ ನೀಡಿ ಗೋವಿನ ಮಹತ್ವ ಅರಿಯಬೇಕು. ಗೋ ಎಂದರೆ ಪ್ರಾಣಿ ಅಲ್ಲ, ಗೋ ಎಂದರೆ ಪ್ರಾಣ ಎಂಬುದನ್ನು ಪ್ರತೀಯೋರ್ವರೂ ತಿಳಿಯಬೇಕು. ಗೋವಿಲ್ಲದ ಜೀವನ ಕಲ್ಪನೆ ಮಾಡಲೂ ಅಸಾಧ್ಯ ಎಂಬುದು ಅರಿವಾಗಬೇಕು ಎನ್ನುತ್ತಾರೆ ರಾಮಚಂದ್ರಭಟ್.

ಹಾಲು, ಮೊಸರು, ಬೆಣ್ಣೆ, ತುಪ್ಪಗಳು ಮಾತ್ರವೇ ಗೋ ಉತ್ಪನ್ನಗಳಲ್ಲ. ಗೋಮೂತ್ರಕ್ಕೂ ಔಷಧೀಯ ಮಹತ್ವವಿದೆ. ಸೆಗಣಿಗೂ ಪ್ರಾಧಾನ್ಯತೆ ಇದೆ. ಯಜ್ಞಗಳಲ್ಲಿ ಗೋದಾನ ಶ್ರೇಷ್ಟವಾಗಿದೆ. ಧರ್ಮ ಸಂರಕ್ಷಣೆಯ ಪ್ರತೀಕವಾಗಿ ಗೋ ಕಂಗೊಳಿಸುತ್ತದೆ. ಹೀಗಾಗಿ ಗೋವುಗಳ ಅಗತ್ಯವನ್ನು ಪ್ರತೀಯೋರ್ವರೂ ಮನಗಾಣಲೇಬೇಕಾದ ಅನಿವಾರ್ಯತೆಯ ಕಾಲಘಟ್ಟದಲ್ಲಿ ನಾವೆಲ್ಲರೂ ಇದ್ದೇವೆ ಎಂದೂ ಅವರು ಹೇಳಿದರು.

ಗೋ ಶಾಲೆಗೆ ಏನು ಅಗತ್ಯ?

ಕಾಮಧೇನು ಗೋ ಶಾಲೆಗೆ ಆರ್ಥಿಕ ನೆರವಿನ ಅಗತ್ಯತೆಯಿದೆ. ಅಂತೆಯೇ ಪ್ರತಿನಿತ್ಯ ೬೫ ಗೋವುಗಳಿಗೆ ಹಿಂಡಿ, ಹಸಿ ಮತ್ತು ಒಣಹುಲ್ಲು, ಬೇಕಾಗಿದೆ. ಹಡ್ಲು ಬಿಟ್ಟ ತಮ್ಮ ಭೂಮಿಯಲ್ಲಿ ಗೋವುಗಳನ್ನು ಮೇಯಿಸಿ ಎನ್ನುವ ಮಾನವಂತಿಕೆಯ ದಾನಿಗಳ ಅಗತ್ಯವಿದೆ. ಜಿಲ್ಲೆಯಾದ್ಯಂತಲಿನ ಎಲ್ಲಿಂದಾದರೂ ಹುಲ್ಲಿನ ಸರಬರಾಜಿನ ಅಗತ್ಯತೆ ಇದೆ. ಸದ್ಯದ ಮಟ್ಟಿಗೆ ಗೋಶಾಲೆಯ ವಾಸಿಗಳಿಗೆ ಹುಲ್ಲಿನ ಕೊಡುಗೆಯೇ ಶ್ರೇಷ್ಟ ಕೊಡುಗೆಯಾಗಿದೆ. ಪ್ರಸ್ತುತ ಮುಕ್ಕಾಲು ಎಕರೆ ಜಾಗದಲ್ಲಿ ನಿರ್ವಹಿಸಲ್ಪಡುತ್ತಿರುವ ಕಾಮಧೇನು ಗೋಶಾಲೆಯ ೬೫ ಗೋವುಗಳಿಗೆ ಮೇಯಲು ಮತ್ತು ಆಶ್ರಯಕ್ಕೆ ವಿಸ್ತಾರವಾದ ಕನಿಷ್ಟ ೫ ಎಕರೆ ವಿಶಾಲವಾದ ಜಾಗದ ಅಗತ್ಯವಿದೆ. ಸರ್ಕಾರವೂ ಈ ಬೇಡಿಕೆಗಳತ್ತ ಮನಸ್ಸು ಮಾಡಬೇಕೆಂಬುದು ಗೋ ಪ್ರೇಮಿಗಳ ಆಗ್ರಹವಾಗಿದೆ.

ಕಾಮಧೇನು ಗೋಶಾಲೆಯ ವಿಶೇಷಗಳು

ಗೋಶಾಲೆಯಲ್ಲಿ ಹುಲ್ಲು ಖಾಲಿಯಾದಾಗ ಹುಲ್ಲು ಮುಗಿದಿದೆ ಹೇಗಾದರೂ ವ್ಯವಸ್ಥೆ ಮಾಡಿ ಕೊಡಬೇಕು ಎಂದು ರಾಮಚಂದ್ರ ಭಟ್ಟರು ಅಗಸ್ತö್ಯನೊಂದಿಗೆ ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ವಿಚಿತ್ರವೆಂದರೆ ಆ ದಿನ ಸಂಜೆಯ ಒಳಗೆ ಒಂದೋ ಯಾರಾದರೂ ಹುಲ್ಲು ತಂದು ಗೋಶಾಲೆಗೆ ಹಾಕುತ್ತಾರೆ ಅಥವಾ ಹುಲ್ಲು ನಮ್ಮ ಜಾಗದಲ್ಲಿ ಇದೆ. ಬಂದು ಕುಯ್ದುಕೊಂಡು ಹೋಗಿ ಎಂಬ ಮಾಹಿತಿಯನ್ನು ಫೋನ್ ಮುಖಾಂತರ ನೀಡುತ್ತಾರೆ.!

ಗೋವುಗಳಿಗೆ ಹಿಂಡಿ ಇತ್ಯಾದಿ ಮುಗಿದುಹೋಗಿದ್ದಲ್ಲಿ ಅಗಸ್ತö್ಯನ ಮುಂದೆ ಹೇಳಿಕೊಂಡರೆ ಅಗಸ್ತö್ಯ ಅರೆ ತೆರೆದ ಕಣ್ಣುಗಳಿಂದ ಕಿವಿಯಾಡಿಸುತ್ತಾ ಹೂಂ ಎಂಬ ಭಾವ ತೋರುತ್ತಾನೆ.. ಆ ದಿನ ಸಂಜೆಯ ಒಳಗೆ ಯಾರೋ ದಾನಿಗಳು ಹಿಂಡಿ, ಬೆಲ್ಲ, ಬಾಳೆಹಣ್ಣುಗಳನ್ನು ತಂದು ಗೋ ಶಾಲೆಗೆ ಒಪ್ಪಿಸುತ್ತಾರೆ!

ಕಷ್ಟಗಳನ್ನು ಅಗಸ್ತö್ಯನ ಕಿವಿಯಲ್ಲಿ ಹೇಳಿದರೆ ಪರಿಹಾರವಾಗುತ್ತದೆ ಎಂಬ ಅನುಭವ ಹಲವಾರು ಗೋಪ್ರೇಮಿಗಳಿಗೆ ಆಗಿದೆ. ಎರಡು ಚೀಟಿಯಲ್ಲಿ ಎಸ್ ಅಥವಾ ನೋ ಅಂತ ಬರೆದು ಅಗಸ್ತö್ಯನ ಎದುರು ಹಿಡಿದರೆ ಚೀಟಿಯನ್ನು ಮೂಸಿ ಅವನ ಅಭಿಪ್ರಾಯವನ್ನು ತಿಳಿಸುತ್ತಾನೆ! ಗೋಶಾಲೆಯ ಯಾವುದಾದರೂ ಗೋವು ಅನಾರೋಗ್ಯದಿಂದ ನರಳುತ್ತಿದ್ದರೆ ಎಲ್ಲಾ ಗೋವುಗಳ ಮುಖದಲ್ಲಿ ಒಂದು ರೀತಿಯ ಆತಂಕ ಹಾಗೂ ಅವ್ಯಕ್ತ ಮೌನ. ಇಂತಹ ಸಂದರ್ಭ ಅಗಸ್ತö್ಯ ಮತ್ತೆ ಬಲರಾಮ ಒಂದೆರಡು ಬಾರಿ ಗುಟುರು ಹಾಕಿ ಮನೆಯವರನ್ನು ಎಚ್ಚರಿಸುವುದೂ ಉಂಟು.

ಕಾಮಧೇನು ಗೋಶಾಲೆಯಲ್ಲಿ ಬೆರಣಿ, ಭಸ್ಮ ಇತ್ಯಾದಿ ಹಲವು ವಸ್ತುಗಳೊಂದಿಗೆ ಪಂಚಗವ್ಯ ಘೃತ ಎಂಬ ಆಯುರ್ವೇದ ಔಷಧಿ ಕೂಡಾ ತಯಾರಾಗುತ್ತದೆ. ಮನೆಯವರೆಲ್ಲರ ಮುತುವರ್ಜಿಯಿಂದ ಈ ಕೆಲಸಗಳು ನಡೆಯುತ್ತವೆ. ನಿರ್ದಿಷ್ಟ ಪ್ರಮಾಣದಲ್ಲಿ ಹಾಲು, ಮೊಸರು, ದೇಸಿ ಗೋವಿನ ತುಪ್ಪ, ಗೋಮೂತ್ರ ಹಾಗೂ ಗೋಮಯವನ್ನು ಉಪಯೋಗಿಸಿ ತಯಾರಿಸಲಾದ ಈ ಔಷಧ ಕ್ಯಾನ್ಸರ್ ಹಾಗೂ ಇತರ ಹಲವಾರು ಖಾಯಿಲೆಗಳಿಗೆ ರಾಮಬಾಣ.