ಗೋಣಿಕೊಪ್ಪ ವರದಿ, ಅ. ೨೦ : ಹಳ್ಳಿಗಟ್ಟು ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿAಗ್ ವಿಭಾಗದ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ಹ್ಯಾಕ್‌ನೋವ ರಾಷ್ಟçಮಟ್ಟದ ಸ್ಪರ್ಧೆಯಲ್ಲಿ ಮೈಸೂರು ಜೆಎಸ್‌ಎಸ್ ಸೈನ್ಸ್, ಟೆಕ್ನಾಲಜಿ ಯೂನಿವರ್ಸಿಟಿಯ ಟೀಂ ಜಸ್ಟಿಸ್ ಗ್ಯಾಂಗ್ ಪ್ರಥಮ, ಬೆಂಗಳೂರು ಬಿಎಂಎಸ್ ದಯಾನಂದ ಸಾಗರ್ ಯೂನಿವರ್ಸಿಟಿಯ ಟೀಂ ಮಲ್ಮಟ್ರಿಕ್ಸ್ ತಂಡ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡಿತು.

ಕೇರಳ ರಾಜ್ಯದ ಕಣ್ಣೂರು ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ಟೀಂ ಜಿಸಿಇಕೆ ತಂಡ ಉತ್ತಮ ಅನ್ವೇಷಣೆ ಪ್ರಶಸ್ತಿ ಪಡೆದುಕೊಂಡಿತು. ಮೈಸೂರು ಜೆಎಸ್‌ಎಸ್ ಸೈನ್ಸ್, ಟೆಕ್ನಾಲಜಿ ಯೂನಿವರ್ಸಿಟಿಯ ಟೀಂ. ಔರಾ ತಂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅನ್ವೇಷಣೆ ಪ್ರಶಸ್ತಿ ಪಡೆದುಕೊಂಡಿತು.

ಥಿAಕ್ ಫಾಸ್ಟ್, ಬಿಲ್ಡ್ ಫಾಸ್ಟರ್, ಇನೊವೇಟ್ ಫಾಸ್ಟರ್ ಘೋಷವಾಕ್ಯದಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಂಗಳೂರು ಬಿಎಂಎಸ್ ದಯಾನಂದ ಸಾಗರ್ ಯೂನಿವರ್ಸಿಟಿಯ ಟೀಂ ಮಲ್ಮಟ್ರಿಕ್ಸ್ ತಂಡ, ತಾಂಡವಪುರ ಮಹಾರಾಜ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿತ ಟೀಂ ಶೇಪ್‌ಇನ್, ಕೇರಳ ರಾಜ್ಯದ ಕಣ್ಣೂರು ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ಟೀಂ ಜಿಸಿಇಕೆ, ಮೈಸೂರು ಜೆಎಸ್‌ಎಸ್ ಸೈನ್ಸ್, ಟೆಕ್ನಾಲಜಿ ಯೂನಿವರ್ಸಿಟಿಯ ಟೀಂ ಜಸ್ಟಿಸ್ ಗ್ಯಾಂಗ್, ಟೀಂ. ಔರಾ, ಬೆಂಗಳೂರು ದಯಾನಂದ ಸಾಗರ್ ಯೂನಿವರ್ಸಿಟಿ ಕಾಲೇಜಿನ ಟೀಂ. ನೆಬ್ರಿಕ್ಸ್, ಮೈಸೂರು ತಾಂಡವಪುರ ಮಹಾರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಟೀಂ ಪ್ಲೆöÊ ಹೈ, ಹಳ್ಳಿಗಟ್ಟು ಕೂರ್ಗ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಟೀ ಇನೋವೆಸ್ರ‍್ಸ್, ತಾಂಡವಪುರ ಮಹಾರಾಜ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಟೀಂ ಇನೋವೆಟ್ರಿಕ್ಸ್ ಅಂತಿಮ ಸುತ್ತಿನಲ್ಲಿ ಅನ್ವೇಷಣೆಯನ್ನು ಹೊರ ಹಾಕಿದವು.

೨೪ ಗಂಟೆಗಳಲ್ಲಿ ಅನ್ವೇಷಣೆಯಲ್ಲಿ ಯುವ ಸಮೂಹದಿಂದ ಸಾಕಷ್ಟು ತಂತ್ರಜ್ಞಾನಗಳು ಹೊರ ಬಂದವು. ಸ್ಪರ್ಧಿಗಳು ನೀಡಿರುವ ಪ್ರಯೋಗದಲ್ಲಿ ಮತ್ತಷ್ಟು ಪ್ರಯೋಗ, ತಂತ್ರಜ್ಞಾನ ಮತ್ತು ಸವಾಲು ಎದುರಿಸುವ ಕ್ಷಮತೆ ಕಾಪಾಡಿಕೊಳ್ಳಲು ಪರೀಕ್ಷೆ ನಡೆಸಲಾಯಿತು. ೨೪ ಗಂಟೆಗಳಲ್ಲಿ ಸವಾಲು ಮುಗಿಸಿ ಉತ್ತಮ ಅನ್ವೇಷಣೆ ಹೊರ ತರಲಾಯಿತು. ಸುಮಾರು ೧೨೦ ತಂಡಗಳು ಹೆಸರು ನೋಂದಾಯಿಸಿಕೊAಡಿದ್ದವು. ಕೊನೆಯದಾಗಿ ೩೦ ತಂಡಗಳಿಗೆ ಭಾಗವಹಿಸಲು ಅವಕಾಶ ನೀಡಲಾಯಿತು.

ಅನ್ವೇಷಣೆಗೆ ಅವಕಾಶ ಮಾಡಿಕೊಟ್ಟಿರುವ ಕಾರ್ಯಕ್ರಮದ ಬಗ್ಗೆ ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಮುಕ್ಕಾಟೀರ. ಸಿ. ಕಾರ್ಯಪ್ಪ ಪ್ರಶಂಸೆ ವ್ಯಕ್ತಪಡಿಸಿದರು. ಮೈಸೂರು ಜೆಎಸ್‌ಎಸ್‌ಎಸ್‌ಟಿಯು ಕಾಲೇಜಿನ ಐಎಸ್‌ಇ ವಿಭಾಗ ಮುಖ್ಯಸ್ಥ ಡಾ. ಎಸ್. ಪಿ. ಶಿವ ಪ್ರಕಾಶ್, ಮೈಸೂರು ಎನ್‌ಐಇ ಕಾಲೇಜು ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗದ ಮುಖ್ಯಸ್ಥ ಡಾ. ಸಂಜಯ್, ಜಸ್ಟ್ ರೊಬೊಟಿಕ್ಸ್ ಸಿಇಒ ಬ್ರಿಜೇಶ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಕಾಲೇಜು ಪ್ರಾಂಶುಪಾಲ ಡಾ. ಎಂ. ಬಸವರಾಜ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥೆ ಕೆ. ಕೆ. ಡೈನಾ, ಹ್ಯಾಕ್‌ನೋವ ಕಾರ್ಯಕ್ರಮ ಸಂಚಾಲಕಿ ಕೆ. ಎಂ. ಕೀರ್ತನ, ವಿದ್ಯಾರ್ಥಿಗಳಾದ ಟೆಕ್‌ನೋವಾ ಅಧ್ಯಕ್ಷ ಎಂ. ಜಿ. ತೀರ್ಥ, ಕಾರ್ಯದರ್ಶಿ ಕೆ. ಕೆ. ಪ್ರಜು, ತಾಂತ್ರಿಕ ಮುಖ್ಯಸ್ಥ ಬಿ. ಎಸ್. ಮದನ್‌ಗೌಡ ಇದ್ದರು.