ಪೆರಾಜೆ, ಅ. ೨೦: ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಯುವಕ ನೋರ್ವ ಬೈಕ್ ಸಹಿತ ಕೊಚ್ಚಿ ಹೋಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾ ಗಿರುವ ಘಟನೆ ಚೆಂಬು ಗ್ರಾಮದ ಹೊದ್ದೆಟ್ಟಿಯಲ್ಲಿ ಸಂಭವಿಸಿದೆ. ಚೆಂಬು ಗ್ರಾಮದ ಹೊಸೂರು ಜಯರಾಮ ಅವರ ಪುತ್ರ ನಿರುಪಮ್ ಭಾನುವಾರ ಸಂಜೆ ೬ ಗಂಟೆಯ ಸುಮಾರಿಗೆ ಕಲ್ಲುಗುಂಡಿಯಿAದ ತನ್ನ ಮನೆಗೆ ಹೋಗುತ್ತಿದ್ದಾಗ ಹೊದ್ದೆಟ್ಟಿಯ ಮಕ್ಕಟ್ಟಿ ಬಳಿ ಹೊಳೆ ದಾಟುವಾಗ ಮಧ್ಯದಲ್ಲಿ ಒಮ್ಮೆಲೇ ನೀರು ಬಂದು ಸುಮಾರು ೩೦೦ ಮೀಟರ್‌ನಷ್ಟು ದೂರ ಕೊಚ್ಚಿ ಹೋಗಿದ್ದು, ನಂತರ ಕಲ್ಲಿನ ಸಹಾಯದಿಂದ ಮೇಲೆ ಬಂದಿದ್ದಾರೆ. ೪ನಾಲ್ಕನೇ ಪುಟಕ್ಕೆ (ಮೊದಲ ಪುಟದಿಂದ) ಬೈಕ್ ಕೊಚ್ಚಿಕೊಂಡು ಕೆಳಕ್ಕೆ ಹೋಗಿದ್ದು, ಇಂದು ಬೆಳಿಗ್ಗೆ ನೋಡಿದಾಗ ಬೈಕ್ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇಲ್ಲಿ ಸೇತುವೆ ಆಗಬೇಕೆಂದು ಹಲವಾರು ವರ್ಷಗಳಿಂದ ಬೇಡಿಕೆ ಇದ್ದರೂ ಇದುವರೆಗೂ ಯಾವುದೇ ಪ್ರಯತ್ನ ಫಲಕಾರಿಯಾಗಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. - ಗಿರೀಶ್ ಪೆರಾಜೆ