ಮೂರ್ನಾಡು ಅ ೨೧ : ಇಲ್ಲಿಗೆ ಸಮೀಪದ ಕಿಗ್ಗಾಲು ಗ್ರಾಮದಲ್ಲಿ ಕೊಡಗು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮಡಿಕೇರಿ ಮತ್ತು ಪಶುಪಾಲನಾ ಇಲಾಖೆ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಒಂದು ದಿವಸದ ಉಚಿತ ಪಶು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು. ಗ್ರಾಮದ ಬಂಜೆ ರಾಸುಗಳ ತಪಾಸಣೆ, ಹೋರಿ ಮತ್ತು ಕೋಣಗಳಿಗೆ ಕಸಿ, ಜಂತುನಾಶಕ ಔಷಧಿ ವಿತರಣೆ ಹಾಗೂ ಸಾಕುನಾಯಿ ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ನಿರೋಧಕ ಲಸಿಕೆಯನ್ನು ನೀಡಲಾಯಿತು. ಸ್ಥಳೀಯ ಪಶುವೈದ್ಯಾಧಿಕಾರಿ ಡಾ. ಸಿ ಎಸ್ ಶಿಲ್ಪಶ್ರೀ, ಪಶುವೈದ್ಯ ಪರೀಕ್ಷಕರಾದ ಜೆ.ಸಿ. ಗಜಲಕ್ಷಿö್ಮ ಮತ್ತು ಸಿಬ್ಬಂದಿಗಳಾದ ಬಿ.ಜೆ. ವೆಂಕಟೇಶ್ ಹಾಗೂ ಬಿ.ಸಿ. ರೋಷನ್ ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.