ಐಗೂರು, ಅ. ೨೧: ಐಗೂರಿನ ವಿಜಯನಗರದ ಗುಳಿಗಪ್ಪ ಮತ್ತು ವನದುರ್ಗಿ ದೇವಾಲಯದ ೩೩ನೇ ವಾರ್ಷಿಕ ಪೂಜೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಿಗ್ಗೆ ಮೆರವಣಿಗೆ ಮನೆ ಮನೆಗೆ ತೆರಳಿ ಮನೆಯವರ ಪೂಜೆ ಮುಗಿದ ಬಳಿಕ ದೇವಾಲಯವನ್ನು ತಲುಪಿತು. ಅರ್ಚಕರಾದ ಸುರೇಂದ್ರ ಮತ್ತು ಗುಳಿಗಪ್ಪ ದೇವಾಲಯದ ಪೂಜಾರಿ ಅಚ್ಯುತ ಅವರ ನೇತೃತ್ವದಲ್ಲಿ ಗಣ ಹೋಮ, ಅಭಿಷೇಕ ಪೂಜೆ, ತೀರ್ಥ ಪ್ರಸಾದ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.