ಸಿದ್ದಾಪುರ, ಅ. ೨೧: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರೆಬಿಕ ಕಾಫಿ ಹಣ್ಣಾಗಿದ್ದು ಇದರೊಂದಿಗೆ ಇದೀಗ ರೋಬಸ್ಟ ಕಾಫಿ ಕೂಡ ಹಣ್ಣಾಗಿ ಕೊಯ್ಲಿಗೆ ಬಂದಾಗಿದೆ. ಆದರೆ ಸುರಿಯುತ್ತಿರುವ ಮಳೆಯಿಂದಾಗಿ ಹಣ್ಣಾಗಿರುವ ಕಾಫಿ ಫಸಲುಗಳು ನೆಲಕ್ಕೆ ಬಿದ್ದು ಹಾನಿಯಾಗುವ ಸಾಧ್ಯತೆ ಕಂಡುಬAದಿದೆ. ಕೆಲವು ಬೆಳೆಗಾರರು ನೀರು ಹಾಯಿಸಿದ ಹಿನ್ನೆಲೆಯಲ್ಲಿ ಕೆಲವು ತೋಟಗಳಲ್ಲಿ ಅವಧಿಗೆ ಮುಂಚಿತವಾಗಿಯೇ ಕಾಫಿ ಫಸಲುಗಳು ಕೊಯ್ಲಿಗೆ ಬಂದಿವೆ. ಕೊಯ್ಲು ಮಾಡಿ ಒಣ ಹಾಕಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಭತ್ತದ ಕೃಷಿ ಮಾಡಿದ ರೈತರು ಕೂಡ ಕಂಗಾಲಾಗಿದ್ದಾರೆ. ದಿನನಿತ್ಯ ರಾತ್ರಿ ಸಮಯದಲ್ಲಿ ರಭಸವಾಗಿ ಮಳೆ ಸುರಿಯುತ್ತಿದ್ದು ರೈತರು ಆತಂಕಕ್ಕೆ ಸಿಲುಕಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.