ಕೂಡಿಗೆ, ಅ. ೨೦: ಬೆಂಗಳೂರಿನ ರನ್ ಫಾರ್ ಇಂಡಿಯನ್ ಆರ್ಮಿ ವತಿಯಿಂದ ಬೆಂಗಳೂರು ಮಿಲಿಟರಿ ಕ್ಯಾಂಪಸ್ನಲ್ಲಿ ನಡೆದÀ ೧೦ ಕಿಲೋಮೀಟರ್ ಮ್ಯಾರಥಾನ್ ಸ್ಪರ್ಧೆಯಲ್ಲಿ ತೊರೆನೂರು ಗಣೇಶ್ ಪ್ರಥಮ ಸ್ಥಾನ ಗಳಿಸಿದ್ದಾರೆ.
೪೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧೆಗೆ ೫೦೦ ಮಂದಿ ಭಾಗವಹಿಸಿದ್ದರು. ಈ ಪೈಕಿ ವಿಜೇತರಾಗಿ ಬೆಂಗಳೂರು ಮಿಲಿಟರಿ ಕೇಂದ್ರ ಮುಖ್ಯಸ್ಥ ಸುಭೇದರ್ ಸಿಂಗ್ ಅವರಿಂದ ಟ್ರೋಫಿ, ಬಹುಮಾನವನ್ನು ಪಡೆದರು.