ಮಡಿಕೇರಿ ಅ.೨೧: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲೆ ಮಡಿಕೇರಿ ಇವರ ವತಿಯಿಂದ ಪ್ರತಿ ವರ್ಷದಂತೆ ೨೦೨೫-೨೬ನೇ ಸಾಲಿಗೆ ಜಿಲ್ಲೆಯ ವಿವಿಧ ಸಂಘ- ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ (ಗಣಪತಿ ಉತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಇತರೆ ಕಾರ್ಯಕ್ರಮಗಳನ್ನು ಹೊರತುಪಡಿಸಿ) ವೇದಿಕೆ ಹಾಗೂ ಮೆರವಣಿಗೆಗೆ ಸಂಬAಧಿಸಿದAತೆ ಕಲಾತಂಡ ನಿಯೋಜಿಸಲು ಅವಕಾಶವಿದ್ದು, ಈ ಅವಕಾಶ ಸದುಪಯೋಗಪಡಿಸಿಕೊಳ್ಳಲು ಕೋರಿದೆ.
ಕಾರ್ಯಕ್ರಮಗಳು ರೂಪಿಸಿಕೊಂಡ ಸಂಘ-ಸAಸ್ಥೆಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವೇದಿಕೆ ಹಾಗೂ ಮೆರವಣಿಗೆಗೆ ಕಲಾತಂಡಗಳನ್ನು ಪ್ರಾಯೋಜಿಸಲು ತಮ್ಮ ಪೂರ್ಣ ವಿವರಗಳೊಂದಿಗೆ ಸಕಾಲದ ಸೇವಾಸಿಂಧುವಿನಡಿ ಕಾರ್ಯಕ್ರಮ ನಡೆಯುವ ೧೫ ದಿನಗಳ ಮುಂಚಿತವಾಗಿ ಮನವಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೨೭೨-೨೨೮೪೯೦ ನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಅವರು ತಿಳಿಸಿದ್ದಾರೆ.