ಮಡಿಕೇರಿ, ಅ. ೧೯: ಕರ್ನಾಟಕ ಟೆಕ್ವಾಂಡೊ ಅಸೋಸಿಯೇಷನ್ ಆಶ್ರಯದಲ್ಲಿ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್‌ಶಿಪ್‌ನಲ್ಲಿ ಮಡಿಕೇರಿಯ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.ಮನೀಶ್‌ನಾಥ್ ಜಿ.ಎಂ. ೨ ಚಿನ್ನ, ನಿಲಾಹ್ ಜೆ.ತಾರಕನ್ ೧ ಚಿನ್ನ, ೧ ಬೆಳ್ಳಿ, ಐಡೆನ್ ಜೆ ತಾರಕನ್ ೧ ಚಿನ್ನ, ೧ ಬೆಳ್ಳಿ ಹಾಗೂ ಕನ್ನಿಕಂಡ ಮೌಲ್ಯ ಓಂಕಾರಪ್ಪ ೧ ಚಿನ್ನ, ೧ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಬಾರನ ಚಿನ್ಮಯ್, ಬಾರನ ಬಿಂಬಿತ್ ಹಾಗೂ ಬಾರನ ಪ್ರೇಕ್ಷಿತ್ ಪ್ರಶಂಸನಾ ಪತ್ರ ಪಡೆದುಕೊಂಡರು. ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ. ಲೋಕೇಶ್ ರೈ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.