ಕುಶಾಲನಗರ, ಅ. ೧೯: ಪುರಸಭೆ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಕುಶಾಲನಗರ ಮಹಾತ್ಮಾ ಗಾಂಧಿ ಮೆಮೋರಿಯಲ್ ಪದವಿ ಕಾಲೇಜು ಎನ್ಎಸ್ಎಸ್ ತಂಡ ಮತ್ತು ಕುಶಾಲನಗರ ತಾಲೂಕು ಬ್ಯುಟಿಷಿಯನ್ ವೇದಿಕೆ ಸಹಯೋಗದೊಂದಿಗೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ನಿರ್ಬಂಧಿಸಿರುವ ಬಗ್ಗೆ ಪಟ್ಟಣದ ಮುಖ್ಯರಸ್ತೆಯ ಉದ್ದಿಮೆದಾರರು ಮತ್ತು ನಗರ ನಿವಾಸಿಗಳ ಗಮನಕ್ಕೆ ತರುವ ಅಭಿಯಾನ ನಡೆಯಿತು.
ಅಭಿಯಾನಕ್ಕೆ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಮತ್ತು ಪುರಸಭೆ ಮುಖ್ಯಾಧಿಕಾರಿ ಟಿ.ಜೆ. ಗಿರೀಶ್ ಅವರುಗಳು ಚಾಲನೆ ನೀಡಿ ಸ್ವಚ್ಛತೆ ಬಗ್ಗೆ ಸಂದೇಶ ನೀಡಿದರು.
ಕಸ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಕೊಡಗು ಜಿಲ್ಲೆಯ ಪರಿಸರ ಪ್ರಕೃತಿಗೆ ಧಕ್ಕೆ ಉಂಟಾಗದAತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು ಎಂದು ಹೇಳಿದ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ನಮ್ಮ ಕಸ ನಮ್ಮದು ಎಂಬ ಧ್ಯೇಯ ವಾಕ್ಯದೊಂದಿಗೆ ಉತ್ತಮ ಪರಿಸರ ನಿರ್ಮಾಣ ಆಗಬೇಕಾಗಿದೆ ಎಂದರು.
ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್, ಎಂ.ಜಿ.ಎA. ಪದವಿ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಕೆ.ಆರ್. ಮಂಜೇಶ್, ಶರಣ್ ಕೆ.ಕೆ, ಕುಶಾಲನಗರ ತಾಲೂಕು ಬ್ಯುಟಿಷಿಯನ್ ಅಸೋಸಿಯೇಷನ್ ಅಧ್ಯಕ್ಷರಾದ ನಾಗಮಣಿ, ಗೌರವಾಧ್ಯಕ್ಷರಾದ ವನಿತ ಚಂದ್ರಮೋಹನ್, ಕಾವ್ಯ ಗೌಡ ಎನ್ಎಸ್ಎಸ್, ಪುರಸಭೆ ಸಿಬ್ಬಂದಿಗಳು ಇದ್ದರು.
ಈ ಸಂಬAಧ ಸ್ಟಿಕರ್ಗಳನ್ನು ಪಟ್ಟಣದ ನೂರಾರು ಸಂಖ್ಯೆಯ ಅಂಗಡಿ ಮಳಿಗೆಗಳಲ್ಲಿ ಅಂಟಿಸಿ ಪ್ಲಾಸ್ಟಿಕ್ ಬದಲಿಗೆ ಉಪಯೋಗಿಸಬಹುದಾದ ವಸ್ತುಗಳ ಬಗ್ಗೆ ಮಾಹಿತಿ ನೀಡಲಾಯಿತು.