ಮಡಿಕೇರಿ, ಅ. ೧೮: ಯು.ಎ.ಇಯಲ್ಲಿ ನೆಲೆಸಿರುವ ಕೊಡಗು ಅರೆಭಾಷೆ ಗೌಡ ಕುಟುಂಬಗಳು ಸೇರಿ ೪ನೇ ಬಾರಿಗೆ ಕೈಲ್ ಮುಹೂರ್ತ ಹಬ್ಬವನ್ನು ದುಬೈಯ ‘ಇಂಡಿಯ ಕ್ಲಬ್’ನಲ್ಲಿ ಅದ್ದೂರಿಯಾಗಿ ಆಚರಿಸಿದರು.
ಪ್ರಮುಖರಾದ ಹೇಮಾವತಿ ಅಡ್ಕರ್ ಅವರು ಜ್ಯೋತಿ ಬೆಳಗುವುದರೊಂದಿಗೆ ಒಳಾಂಗಣ ಆಟೋಟಗಳಿಗೆ ಚಾಲನೆ ನೀಡಿದರು. ಮಕ್ಕಳಿಗೆ ಕಾಳು ಹೆಕ್ಕುವುದು, ಓಟದ ಸ್ಪರ್ಧೆ ಹಾಗೂ ವಯಸ್ಕರಿಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಪುಟಾಣಿ ಮಕ್ಕಳ ನೃತ್ಯ ಪ್ರದರ್ಶನ ಆಕರ್ಷಣೀಯವಾಗಿತ್ತು. ಸಾಂಪ್ರದಾಯಿಕ ಭೋಜನದ ನಂತರ, ವಾಲಗ ಕುಣಿತ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮಗಳು ಜರುಗಿದವು. ಉದ್ಯಮಿ ಮಂಜುನಾಥ ಪೆರುಬಾಯಿ ಅವರು ಯುವಕರನ್ನು ಉದ್ದೇಶಿಸಿ ಮಾತನಾಡಿದರು.
ದುಬೈನ ಹೃದಯಭಾಗದಲ್ಲಿರುವ ಪ್ರಮುಖ ಪ್ರಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಸಂಪೂರ್ಣ ಕಾರ್ಯಕ್ರಮವನ್ನು ಅಚ್ಚಾಂಡಿರ, ಆನೇರ, ಬೆಳ್ಯನ, ಕಡ್ಲೇರ, ಕಲ್ಲಂಬಿ, ಕರ್ಣಯ್ಯನ, ಕತ್ರಿಕೊಲ್ಲಿ, ಕೊಂಪುಳಿರ ಹಾಗೂ ಮೊಟ್ಟನ ಕುಟುಂಬಗಳು ವ್ಯವಸ್ಥಿತವಾಗಿ ಆಯೋಜಿಸಿದ್ದರು