ಪೊನ್ನಂಪೇಟೆ, ಅ. ೧೯: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ತೂಚಮಕೇರಿ ಪೆಮ್ಮಂಡ ಕುಟುಂಬಸ್ಥರು ಆಯೋಜಿಸಿರುವ ಮೊದಲನೇ ವರ್ಷದ ಕೊಡವ ಕೌಟುಂಬಿಕ ತೋಕ್ ನಮ್ಮೆಗೆ ಅದ್ದೂರಿ ಚಾಲನೆ ನೀಡಲಾಯಿತು.

ಮೊದಲ ವರ್ಷವೇ ೨೩೮ ತಂಡಗಳು ಪಾಲ್ಗೊಳ್ಳುವ ಮೂಲಕ ತೋಕ್ ನಮ್ಮೆ ದಾಖಲೆ ಸೃಷ್ಟಿಸಿತು. ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ವಾಲಗದೊಂದಿಗೆ ಮೆರವಣಿಗೆ ಮೂಲಕ ಮೈದಾನಕ್ಕೆ ಆಗಮಿಸಿದ ಪೆಮ್ಮಂಡ ಕುಟುಂಬದ ಸದಸ್ಯರು ಮೈದಾನದಲ್ಲಿ ಸೇರುವ ಮೂಲಕ ಒಗ್ಗಟ್ಟು ಮೆರೆದರು.

ಪೆಮ್ಮಂಡ ಕುಟುಂಬದ ಹಿರಿಯರು ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಹಾಗೂ ಪೆಮ್ಮಂಡ ಕುಟುಂಬದ ಅಧ್ಯಕ್ಷ ಪೆಮ್ಮಂಡ ಅರುಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಿಯಪ್ಪ ಹಾಗೂ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ನಾಚಪ್ಪ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತೋಕ್ ನಮ್ಮೆಗೆ ಶುಭ ಕೋರಿದರು. ನಂತರ ಗುಂಡು ಹೊಡೆಯುವ ಮೂಲಕ ತೋಕ್ ನಮ್ಮೆಗೆ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮಾತನಾಡಿ ಕೋವಿಯ ಹಕ್ಕು ಕೊಡವರಿಗೆ ಪಾರಂಪರಿಕವಾಗಿ ಬಂದಿದೆ. ಬ್ರಿಟಿಷರ ಕಾಲದಲ್ಲಿ ಬಂದAತ ಕೋವಿಯ ಹಕ್ಕು, ಸ್ವಾತಂತ್ರö್ಯ ನಂತರ ಸಂಸತ್ತಿನಲ್ಲಿ ಚರ್ಚೆಯಾಗಿ ಕೊಡವರು ವಿಶೇಷ ಸಮುದಾಯದವರಾದ ಕಾರಣ ಕೋವಿಯ ಹಕ್ಕನ್ನು ಮುಂದುವರೆಸಲಾಯಿತು.ಕೋವಿ ಹಕ್ಕು ನಮಗೆ ಪಾರಂಪರಿಕವಾಗಿ ಬಂದಿದ್ದರೂ, ೧೦ ವರ್ಷದವರೆಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಕೋವಿಯ ಹಕ್ಕನ್ನು ಕೋರ್ಟ್ನಲ್ಲಿ ಬಾರಿ ಹೋರಾಟದಿಂದ ಪಡೆದುಕೊಳ್ಳಲಾಗಿದ್ದು, ಈ ಅವಧಿ ೨೦೨೯ಕ್ಕೆ ಮುಕ್ತಾಯವಾಗಲಿದ್ದು, ನಮ್ಮ ಪಾರಂಪರಿಕ ಹಕ್ಕಿಗಾಗಿ ಎಲ್ಲರೂ ಪಕ್ಷಾತೀತವಾಗಿ ಧ್ವನಿ ಎತ್ತಬೇಕಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ ಮಾತನಾಡಿ ಕೊಡವ ಜನಾಂಗ ಉಳಿಯಬೇಕಾದರೆ ನಮ್ಮ ಉಡುಗೆ ತೊಡುಗೆ, ಭಾಷೆಯ ಮೇಲೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಕೊಡವರು ದೇಶಭಕ್ತರು ಹಾಗೂ ಪರಿಸರ ಪ್ರೇಮಿಗಳಾಗಿದ್ದು, ಕೊಡಗಿನಂತಹ ವಿಶಿಷ್ಟ ಸ್ಥಳ ವಿಶ್ವದಲ್ಲೇ ಇಲ್ಲ ಎಂದು ಹೇಳಬಹುದು. ನಮ್ಮ ಸ್ಥಳವನ್ನು ಹೊರಗಿನವರಿಗೆ ಮಾರಾಟ ಮಾಡದೇ, ಈ ಮಣ್ಣನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ನಂತರ ಶಾಸಕ ಎ. ಎಸ್. ಪೊನ್ನಣ್ಣ ಹಾಗೂ ಅವರ ಪತ್ನಿಕಾಂಚನ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ತಮ್ಮ ಗುರಿ ಪ್ರದರ್ಶನ ಮಾಡಿದರು.

ಪೆಮ್ಮಂಡ ಕುಟುಂಬದ ವತಿಯಿಂದ ಶಾಸಕ ಎ. ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ, ಸಂಸದ ಯದುವೀರ್ ಒಡೆಯರ್, ತೋಕ್ ನಮ್ಮೆಗೆ ಸಂಬAಧಿಸಿದAತೆ ಹಾಡು ರಚಿಸಿ ಹಾಡಿದ ಮುಕ್ಕಾಟಿರ ಮೌನಿ ನಾಣಯ್ಯ, ಚಿಟ್ಟಿರ ಗ್ರಂಥ ಅವರನ್ನು ಸನ್ಮಾನಿಸಲಾಯಿತು. ತಿಂಗಕೋರ್ ಮೊಟ್ಟ್ ತಲಕಾವೇರಿ ತಂಡ ಕೋಲಾಟ ಪ್ರದರ್ಶನ ಮಾಡಿತು. ಪೆಮ್ಮಂಡ ಕುಟುಂಬದ ಪುಟಾಣಿಗಳು ನೃತ್ಯ ಮಾಡಿದರು.

ಕಾರ್ಯಕ್ರಮದಲ್ಲಿ ಕ್ರೀಡಾಕೂಟ ಅಧ್ಯಕ್ಷ ಪೆಮ್ಮಂಡ ಮಂಜು ಬೋಪಣ್ಣ, ಭೂ ದಾಖಲೆಯ ಸಹಾಯಕ ನಿರ್ದೇಶಕ ಅಜ್ಜಿಕುಟ್ಟೀರ ಭೀಮಯ್ಯ, ಅಂತರರಾಷ್ಟಿçÃಯ ಓಟಗಾರ ಪೆಮ್ಮಂಡ ಅಪ್ಪಯ್ಯ, ಪೆಮ್ಮಂಡ ಪೊನ್ನಪ್ಪ ಹಾಗೂ ಪೆಮ್ಮಂಡ ಕುಟುಂಬಸ್ಥರು ಹಾಜರಿದ್ದರು. ಪೆಮ್ಮಂಡ ಪುಷ್ಪ ಪ್ರಾರ್ಥಿಸಿ, ಮಾಳೇಟಿರ ಶ್ರೀನಿವಾಸ್ ಹಾಗೂ ಪೆಮ್ಮಂಡ ಇಂದಿರಾ ಬೋಪಣ್ಣ ಕಾರ್ಯಕ್ರಮ ನಿರೂಪಿಸಿದರು.

-ವರದಿ : ಚನ್ನನಾಯ