ಮಡಿಕೇರಿ, ಅ. ೧೯: ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ನಗರದ ಕಾವೇರಿ ಹಾಲ್‌ನಲ್ಲಿ ಓಣಾ ಘೋಷಂ ಹಾಗೂ ಓಣಂ ಸಧ್ಯ ಕಾರ್ಯಕ್ರಮ ಸಂಭ್ರಮದಿAದ ನಡೆಯಿತು. ಮಲಯಾಳಿ ಸಂಸ್ಕೃತಿ, ಆಚಾರ ವಿಚಾರವನ್ನು ಬಿಂಬಿಸುವ ಹಲವಾರು ಕಾರ್ಯಕ್ರಮಗಳು ಜರುಗಿದವು. ತಿರುವಾದಿರ ನೃತ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಸಭಾ ಕಾರ್ಯಕ್ರಮವನ್ನು ವಿಧಾನಸಭೆಯ ಮಾಜಿ ಅಧ್ಯಕ್ಷರಾದ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಓಣಂ ಕೇರಳದ ಪವಿತ್ರವಾದ ಹಬ್ಬವಾಗಿದ್ದು, ಕೊಡಗಿನಲ್ಲೂ ಕೂಡ ತಲತಲಾಂತರದಿAದ ಈ ಹಬ್ಬವನ್ನು ಹಿಂದೂ ಮಲಯಾಳಿ ಸಮುದಾಯ ಆಚರಿಸುತ್ತಾ ಬಂದಿದೆ. ಆ ಮೂಲಕ ಹಿಂದೂ ಮಲಯಾಳಿ ಸಮುದಾಯವನ್ನು ಸಂಘಟಿಸುವ ಕಾರ್ಯವೂ ನಡೆಯುತ್ತಿದೆ ಎಂದರು. ಕೊಡಗು ಮತ್ತು ಕೇರಳಕ್ಕೆ ಧಾರ್ಮಿಕವಾಗಿ ಹತ್ತಿರದ ಸಂಬAಧವಿದೆ ಎಂದ ಬೋಪಯ್ಯ, ಹಿಂದೂ ಮಲಯಾಳಿ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳುವ ಮೂಲಕ ಮಕ್ಕಳು ಅವಕಾಶದಿಂದ ವಂಚಿತರಾಗದAತೆ ಜಾಗ್ರತೆ ವಹಿಸಬೇಕೆಂದು ಕರೆ ನೀಡಿದರು.
ಕೊಡಗು - ಮೈಸೂರು ಸಂಸದ ಯದುವೀರ್ ಒಡೆಯರ್ ಸಾಧಕರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಿ ಮಾತನಾಡಿ, ಹಿಂದೂ ಮಲಯಾಳಿ ಸಮುದಾಯಕ್ಕೂ ಮೈಸೂರು ಅರೆಮನೆಗೂ ಅವಿನಾಭಾವ ಸಂಬAಧವಿದೆ. ಅರಮನೆಯಲ್ಲೂ ಕೂಡ ಬಲಿಪಾಡ್ಯಮಿ ಆಚರಿಸಲ್ಪಡುತ್ತದೆ. ಭಾರತ ತನ್ನ ೪ಐದÀನೇ ಪುಟಕ್ಕೆ ವೈಶಿಷ್ಟö್ಯವಾದ ಸಂಸ್ಕೃತಿ ಪರಂಪರೆಯಿAದ ಗುರುತಿಸಲ್ಪಟ್ಟಿದೆ. ಆದ್ದರಿಂದ ಇಲ್ಲಿನ ಸಂಸ್ಕೃತಿ ಪರಂಪರೆಯನ್ನು ಸಂರಕ್ಷಿಸಲು ಪ್ರತಿಯೊಬ್ಬರು ಪಣತೊಡಬೇಕು. ನಮ್ಮ ಧರ್ಮವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ವಿ. ಧರ್ಮೇಂದ್ರ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಹಿಂದೂ ಮಲಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ, ಓಣಂ ಆಚರಣಾ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್, ಮಡಿಕೇರಿ ಹಿಂದೂ ಮಲಯಾಳಿ ಸಂಘದ ಸ್ಥಾಪಕಾಧ್ಯಕ್ಷ ಕೆ.ಎಸ್. ರಮೇಶ್, ಗೌರವ ಸಲಹೆಗಾರ ಪಿ.ಟಿ. ಉಣ್ಣಿಕೃಷ್ಣ, ಉಪಾಧ್ಯಕ್ಷ ಪಿ.ವಿ. ವಿಜಯಕುಮಾರ್, ಸಂಘಟನಾ ಕಾರ್ಯದರ್ಶಿ ಟಿ.ಆರ್. ಪ್ರಮೋದ್, ಪ್ರಚಾರ ಸಮಿತಿ ಸಂಚಾಲಕ ರವಿ ಅಪ್ಪು ಕುಟ್ಟನ್, ಓಣಾ ಘೋಷಂ ಖಜಾಂಚಿ ಉಣ್ಣಿಪ್ರಕಾಶ್, ಸಂಘದ ಯೂತ್ ವಿಂಗ್ ಅಧ್ಯಕ್ಷ ಆರ್. ಅರವಿಂದ್, ನಾಪೋಕ್ಲು ಘಟಕದ ಅಧ್ಯಕ್ಷ ಕೆ.ಕೆ. ಅನಿಲ್, ಮಡಿಕೇರಿ ಮಹಿಳಾ ಘಟಕದ ಅಧ್ಯಕ್ಷ ಲತಾ ರಾಜನ್, ಸ್ಥಾಪಕಾಧ್ಯಕ್ಷೆ ಲಲಿತ, ನಾಪೋಕ್ಲು ಮಹಿಳಾ ಘಟಕದ ಅಧ್ಯಕ್ಷೆ ಎಂ.ವಿ. ಸುಮಿತ್ರ, ಮಾವೇಲಿ ವೇಷಧಾರಿ ಅವಿನಾಶ್ ಕಾಸರಗೊಡು, ಇತರರು ಉಪಸ್ಥಿತರಿದ್ದರು.
ಸಂಧ್ಯಾಮಣಿ ಪ್ರಾರ್ಥಿಸಿ, ಶಶಿ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಪಿ. ಅಶೋಕ್ ಸ್ವಾಗತಿಸಿ, ಜಂಟಿ ಕಾರ್ಯದರ್ಶಿ ಟಿ.ಬಿ. ಪ್ರಭಾಕರ್ ವಂದಿಸಿದರು.