ಮಡಿಕೇರಿ, ಅ. ೧೯: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಕಾರ್ಯ ಚಟುವಟಿಕೆಗಳನ್ನು ನಿಷೇಧಿಸಲು ಸರ್ಕಾರ ಚಿಂತಿಸಿರುವುದು ಜನರ ದಿಕ್ಕು ತಪ್ಪಿಸುವ ಕೆಲಸವಾಗಿದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರಕ್ಕೆ ಒಂದು ರಸ್ತೆ ಮಾಡುವ ಶಕ್ತಿ ಇಲ್ಲ; ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವುದಕ್ಕಾಗಿ ಇದೀಗ ಆರ್‌ಎಸ್‌ಎಸ್ ವಿಷಯವನ್ನು ತೆಗೆದುಕೊಂಡಿದೆ.

ಇದರ ವಿರುದ್ಧ ಬಿಜೆಪಿ ಹಾಗೂ ಸಂಘ ಹೋರಾಟ ರೂಪಿಸುತ್ತದೆ. ಆರ್‌ಎಸ್‌ಎಸ್ ಒಂದು ರಾಷ್ಟçಭಕ್ತ ಸಂಘಟನೆಯಾಗಿದೆ. ಭಾರತೀಯರ ಸಂಸ್ಕೃತಿ ಇರಬಹುದು. ಧರ್ಮ ಇರಬಹುದು ಅವುಗಳನ್ನು ರಕ್ಷಣೆ ಮಾಡುತ್ತಾ ಬಂದಿರುವ ಸಂಘಟನೆಯಾಗಿದೆ ಎಂದರು.

ಗಣವೇಷಧಾರಿಯಾಗಿದ್ದ ಪಿಡಿಓ ಅನ್ನು ಅಮಾನತು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯದುವೀರ್ ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಸಿದ್ಧಾಂತ, ಹೋರಾಟಕ್ಕೆ ಅವಕಾಶವಿದೆ. ಸರ್ಕಾರಿ ಕೆಲಸಕ್ಕೂ ವೈಯಕ್ತಿಕ ಕೆಲಸಕ್ಕೂ ವ್ಯತ್ಯಾಸವಿದೆ. ಈ ಸರ್ಕಾರಕ್ಕೆ ಒಪ್ಪಿಗೆ ಇಲ್ಲದ ಸಿದ್ಧಾಂತದ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಪಿಡಿಓ ತಮ್ಮ ವೈಯಕ್ತಿಕ ಸಮಯದ ಅವಧಿಯಲ್ಲಿ ಭಾಗವಹಿಸಿದ್ದಾರೆ.

ಆದರೂ ಅಮಾನತು ಮಾಡಿರುವುದು ಖಂಡನೀಯ ಎಂದರು. ನಗರದ ಸ್ಟೋನ್‌ಹಿಲ್‌ನಲ್ಲಿ ಶೇಖರಣೆಗೊಂಡಿರುವ ಕಸಗಳ ವಿಲೇವಾರಿಗೆ ಸಂಬAಧಿಸಿದAತೆ ಸ್ಥಳೀಯ ಗುತ್ತಿಗೆದಾರರಿಂದ ಯಾವುದೇ ಸ್ಪಂದನ ಸಿಗದ ಹಿನ್ನೆಲೆಯಲ್ಲಿ ವಿಲೇವಾರಿ ಸ್ಥಗಿತಗೊಂಡಿದೆ. ೪ಐದÀನೇ ಪುಟಕ್ಕೆ ಈ ಕಾಮಗಾರಿಗೆ ಕೇಂದ್ರ ಸರ್ಕಾರದಿಂದಲೂ ಅನುದಾನ ಬಂದಿದ್ದು, ಸ್ಥಳೀಯವಾಗಿ ಸಹಕಾರ ಸಿಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದ ಯದುವೀರ್, ಅಮೃತ್ ೨ ಯೋಜನೆ ಕಾಮಗಾರಿ ವೈಜ್ಞಾನಿಕವಾಗಿ ನಡೆಯುತ್ತಿದ್ದು, ಮಳೆಯ ಕಾರಣದಿಂದ ವಿಳಂಬವಾಗಿದೆ. ಉತ್ತಮ ಗುಣಮಟ್ಟದೊಂದಿಗೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗುವುದೆಂದರು.