ಮಡಿಕೇರಿ, ಅ. ೧೯: ಕೊಡಗು ಜಿಲ್ಲೆಯಲ್ಲಿ ಅಕ್ಟೋಬರ್ ೧೫ರ ಬುಧವಾರದಂದು ಹೊಸತೊಂದು ಇತಿಹಾಸ ನಿರ್ಮಾಣವಾಗಿದೆ. ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ನೇತೃತ್ವದಲ್ಲಿ ‘ಸ್ವಚ್ಛ ಕೊಡಗು - ಸುಂದರ ಕೊಡಗು’ ಎಂಬ ಸ್ವಚ್ಛತಾ ಶ್ರಮದಾನ ಅಭಿಯಾನಕ್ಕೆ ಕರೆ ನೀಡಲಾಗಿತ್ತು.
ಈ ಅಭಿಯಾನಕ್ಕೆ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೊಡಗು ಚೇಂಬರ್ ಆಫ್ ಕಾಮರ್ಸ್ ಕೊಡಗು ಹೋಂಸ್ಟೇ ಅಸೋಸಿಯೇಷನ್, ರೋಟರಿ ಲಯನ್ಸ್ ಸಂಸ್ಥೆಗಳು, ಪ್ರವಾಸೋದ್ಯಮ ಇಲಾಖೆ, ರೆಡ್ಕ್ರಾಸ್, ವಿದ್ಯಾರ್ಥಿ ಸಮೂಹ, ವಿವಿಧ ಸಂಘ-ಸAಸ್ಥೆಗಳು ಸೇರಿದಂತೆ ೩೦೦ಕ್ಕೂ ಅಧಿಕ ಸಂಘಟನೆಗಳಿAದ ಜಿಲ್ಲೆಯಾದ್ಯಂತ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತಗೊಂಡಿತ್ತು. ಇದು ಯಾವುದೇ ಒಂದು ಉತ್ತಮ ಪರಿಕಲ್ಪನೆಯ ಕಾರ್ಯಕ್ಕೆ ಕೊಡಗಿನ ಜನರು ಒಂದಾಗಿ ಬೆಂಬಲ ನೀಡುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಇಡೀ ಜಿಲ್ಲೆಯಾದ್ಯಂತ ನಿರ್ದಿಷ್ಟ ಕಾಲಕ್ಕೆ ಸ್ವಚ್ಛತೆಗೆ ಕರೆ ನೀಡಲಾಗಿತ್ತು. ಅವರು.. ಇವರು.. ಎಂಬ ಬೇಧ-ಭಾವವಿಲ್ಲದೆ ಸರ್ವರೂ ಇದಕ್ಕೆ ಕೈಜೋಡಿಸಿ ರಸ್ತೆ-ಬೀದಿಗೆ ಇಳಿದಿದ್ದರು. ಇದು ಒಂದು ರೀತಿಯಲ್ಲಿ ಉತ್ಸಾಹ ಭರಿತವೂ ಆಗಿತ್ತು. ಆದರೆ, ಈ ಕಾಯಕಕ್ಕೆ ಇಳಿದಂತೆ ಪ್ರಾಕೃತಿಕ ಪರಿಸರದ ನಡುವಿನ ಕೊಡಗು ಜಿಲ್ಲೆಯ ಒಳಹೂರಣ ಮಾತ್ರ ಜಿಲ್ಲೆಯ ಆರು ಲಕ್ಷದಷ್ಟು ಜನರನ್ನು ದಿಗ್ಭçಮೆಗೊಳಿಸುವಂತೆ ಮಾಡಿದೆ. ಅಲ್ಲದೆ ಭವಿಷ್ಯಕ್ಕೆ ಎಚ್ಚರಿಕೆಯ ಕರೆಗಂಟೆಯನ್ನೂ ನೀಡಿದೆ.
ರಸ್ತೆ ಬದಿಗಳಲ್ಲಿ, ಬೀದಿ ಬೀದಿಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ, ಅರಣ್ಯದಂಚಿನಲ್ಲಿ, ದೇವರಕಾಡು ಸೇರಿದಂತೆ ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿ ತಾಣಗಳಲ್ಲಿ.. ಈ ರೀತಿಯಾಗಿ ಎಲ್ಲೆಂದರಲ್ಲಿ ಅಲ್ಲಿ ಹರಡಿದ್ದ ರಾಶಿ ರಾಶಿ ಕಸಗಳು, ಬೇಡದ ವಸ್ತುಗಳು, ಮದ್ಯದ ಪೊಟ್ಟಣ, ಬಿಯರ್ ಬಾಟಲಿಗಳು, ಇನ್ನಿತರ ಬೇಡದ ವಸ್ತುಗಳು ಟನ್ಗಟ್ಟಲೆಯಷ್ಟು ಕಂಡುಬAದಿವೆ. ಇದು ಕೇವಲ ನಗರ ಪಟ್ಟಣ ಪ್ರದೇಶಗಳಲ್ಲಿ ಮಾತ್ರವಲ್ಲ ಗ್ರಾಮೀಣ ವಿಭಾಗಗಳಲ್ಲೂ ತುಂಬಿ ತುಳುಕುತ್ತಿದ್ದ ದೃಶ್ಯ ಬಹುಶಃ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸುಂದರ ಕೊಡಗು ಎಂಬುದು ಇತ್ತೀಚಿನ ವರ್ಷಗಳಲ್ಲಿ ಕೇವಲ ಬಾಯಿ ಮಾತಿಗಷ್ಟೇ.. ಆದರೆ ಒಳಹೂರಣ ಏನಿದೆ.. ಏನಾಗುತ್ತಿದೆ ಎಂಬುದನ್ನು ಇಡೀ ಜಿಲ್ಲೆ.. ಜಿಲ್ಲೆಯ ಜನರು ಈ ಅಭಿಯಾನದ ಮೂಲಕ ಕಣ್ಣರಳಿಸಿ ನೋಡಿದ್ದಾರೆ. ಪ್ರತಿಯೊಬ್ಬರ ಹೃದಯಾಂತರಾಳದಲ್ಲಿ ಅಬ್ಬಬ್ಬಾ ನಮ್ಮ ಕೊಡಗು ಯಾವ ಪರಿಸ್ಥಿತಿಯತ್ತ ತಲುಪುತ್ತಿದೆ ಎಂಬ ಆತಂಕದ ಕರಿಛಾಯೆಯನ್ನು ಈ ಸ್ವಚ್ಛತಾ ಆಂದೋಲನ ಮೂಡಿಸಿದೆ. ಬಹುಶಃ ಬಹುತೇಕ ಜನರಿಗೆ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿದೆ ಎಂಬುದು ಅರಿವಾಗಿದ್ದು, ಸ್ವಚ್ಛತಾ ಕಾಯಕಕ್ಕೆ ಇಳಿದಾಗಲೇ....
ಪ್ರಸ್ತುತ ಇಲ್ಲಿ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ಪ್ರವಾಸಿಗರ ಮೇಲೆ ಆರೋಪಗಳು ಹಲವರಿಂದ ಇದೆ. ಆದರೆ ಕಸದ ರಾಶಿ ಹರಡಲು ಒಂದು ರೀತಿಯಲ್ಲಿ ಎಲ್ಲರೂ ಕಾರಣಕರ್ತರೇ ಆಗಿದ್ದಾರೆ. ಏನೇ ಇರಲಿ ಹೊಸತೊಂದು ಜಾಗೃತಿ ಆರಂಭಗೊAಡಿದೆ. ದಸರಾ ಕಳೆದು, ಕಾವೇರಿ ಸಂಕ್ರಮಣಕ್ಕೆ ಜಿಲ್ಲೆ ಶುದ್ಧಗೊಂಡಿದೆ. ಮುಂದೆ ಬೆಳಕಿನ ಹಬ್ಬ ದೀಪಾವಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆ ಈ ಹಿಂದಿನAತೆ ಸ್ವಚ್ಛ, ಸುಂದರ ತಾಣವಾಗಿಯೇ ಇರಲೀ ಎಂಬುದು ಎಲ್ಲರ ಆಶಾಭಾವನೆಯಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಉದ್ಯಮಿಗಳು, ಸಂಘ-ಸAಸ್ಥೆಗಳು, ವಿದ್ಯಾರ್ಥಿಗಳು ಈ ರೀತಿಯಾಗಿ ಎಲ್ಲರ ಪರಿಶ್ರಮ ವ್ಯರ್ಥವಾಗದಿರಲಿ...