ಮಡಿಕೇರಿ, ಅ.೧೯: ಕೊಡಗು ಪತ್ರಿಕಾ ಭವನ ಟ್ರಸ್ಟ್ನ ೨೪ನೇ ವಾರ್ಷಿಕೋತ್ಸವ ಪ್ರಯುಕ್ತ ಪತ್ರಿಕಾ ಭವನದಲ್ಲಿ ಆಯೋಜಿತ ಒಳಾಂಗಣ ಕ್ರೀಡಾ ಕೂಟವನ್ನು ಹಿರಿಯ ಕಬಡ್ಡಿ ಆಟಗಾರ ಜಿ.ಸಿ.ಕೃಷ್ಣ ಟಿ.ಟಿ ಆಡುವ ಮೂಲಕ ಉದ್ಘಾಟಿಸಿ, ಕ್ರೀಡಾಪಟುಗಳಿಗೆ ಶುಭಕೋರಿದರು.
ಈ ಸಂದರ್ಭ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್ ಅವರು ಮಾತನಾಡಿ, ಪತ್ರಿಕಾ ಭವನ ಆರಂಭವಾದಲ್ಲಿAದ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ವಾರ್ಷಿಕೋತ್ಸವದ ಸಂದರ್ಭ ನಿರಂತರವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ ಎಂದರು.
ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿ.ರವಿಕುಮಾರ್ ಮಾತನಾಡಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ ವರ್ಷಂಪ್ರತಿ ತನ್ನ ವಾರ್ಷಿಕೋತ್ಸವ ಸಂದರ್ಭ ಪತ್ರಕರ್ತರಿಗೆ ಮತ್ತು ಪತ್ರಕರ್ತರ ಕುಟುಂಬದವರಿಗಾಗಿ ವಿವಿಧ ಒಳಾಂಗಣ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಪತ್ರಕರ್ತರು ವೃತ್ತಿ ಜಂಜಾಟದಿAದ ಹೊರಬಂದು ವಿವಿಧ ಕ್ರೀಡಾಕೂಟ ಗಳಲ್ಲಿ ಪಾಲ್ಗೊಳ್ಳುವಂತಾಗಬೇಕೆAಬ ಉದ್ದೇಶದಿಂದ ಒಳಾಂಗಣ ಕ್ರೀಡಾಕೂಟವನ್ನು ಆಯೋಜಿಸಿರುವುದಾಗಿ ಹೇಳಿದರು. ಕ್ರೀಡಾಕೂಟದಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಟ್ರಸ್ಟಿಗಳು, ಕೊಡಗು ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು.ಆರAಭದಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ಸರ್ವರನ್ನು ಸ್ವಾಗತಿಸಿದರು. ಟ್ರಸ್ಟಿ ಎಂ.ಶ್ರೀಧರ್ ಹೂವಲ್ಲಿ ವಂದಿಸಿದರು.
ಕ್ರೀಡಾ ವಿಜೇತರು: ಟೇಬಲ್ ಟೆನ್ನಿಸ್ ಸಿಂಗಲ್ಸ್- ಉಮೇಶ್ ಪ್ರಥಮ, ರಾಜೇಶ್- ದ್ವಿತೀಯ, ಟಿ.ಪಿ ರಮೇಶ್ - ತೃತೀಯ. ಟೇಬಲ್ ಟೆನ್ನಿಸ್ ಡಬಲ್ಸ್ ರಾಜೇಶ್-ಹನಿಫ್ ಪ್ರಥಮ, ಟಿ.ಪಿ ರಮೇಶ್-ವಿನೋದ್ ಮೂಡಗದ್ದೆ ದ್ವಿತೀಯ, ಟಿ.ಕೆ ಸಂತೋಷ್-ಉಮೇಶ್ ತೃತೀಯ. ಕೇರಂ ಸಿಂಗಲ್ಸ್ ನಾಸಿರ್ ಪ್ರಥಮ, ರಾಜೇಶ್ ದ್ವಿತೀಯ. ಕೇರಂ ಡಬಲ್ಸ್ ಟಿ.ಪಿ. ರಮೇಶ್-ಹನಿಫ್ ಪ್ರಥಮ, ನಾಸಿರ್- ರಂಜಿತ್ ಕವಲಪಾರ ದ್ವಿತೀಯ. ಚೆಸ್ ಡಿ.ಪಿ. ಲೋಕೇಶ್ ಪ್ರಥಮ, ವಿನೋದ್ ಮೂಡಗದ್ದೆ - ದ್ವಿತೀಯ.
ಮಕ್ಕಳ ವಿಭಾಗ ಟೇಬಲ್ ಟೆನ್ನಿಸ್ ವಿಶ್ವಾಸ್ ವೆಂಕಟ್ ಪ್ರಥಮ, ಧನುಶ್ ದ್ವಿತೀಯ, ಕೇರಂ ಹೃತಿಕ್ಷ ಪ್ರಥಮ, ವಿಶ್ವಾಸ್ ವೆಂಕಟ್ ದ್ವಿತೀಯ. ಚೆಸ್ ವಿಶ್ವಾಸ್ ವೆಂಕಟ್ ಪ್ರಥಮ, ಮೋಕ್ಷದಾಯಿನಿ ದ್ವಿತೀಯ. ಸಮಾಧಾನಕರ ಬಹುಮಾನ- ತರುಣ್ ಬಜೆಕೊಡಿ, ಭುವಿತ್, ವಿದ್ವತ್ ಪಡೆದುಕೊಂಡರು.