ಕುಶಾಲನಗರ, ಅ ೧೮: ಕಾವೇರಿ ತುಲಾ ಸಂಕ್ರಮಣ ಹಿನ್ನೆಲೆಯಲ್ಲಿ ವಾಡಿಕೆಯಂತೆ ರಾಜ್ಯದ ಪ್ರಮುಖ ಅಣೆಕಟ್ಟೆ ಹಾರಂಗಿ ಅಣೆಕಟ್ಟೆ ಆವರಣದಲ್ಲಿರುವ ಕಾವೇರಿ ಮಾತೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ಇದೇ ಸಂದರ್ಭ ರೈತ ಮುಖಂಡರು, ನೀರಾವರಿ ಸಲಹಾ ಸಮಿತಿ ಸದಸ್ಯರು ಸೇರಿದಂತೆ ನೀರು ಬಳಕೆದಾರ ಸಂಘದ ಪ್ರಮುಖರನ್ನು ಶಾಸಕರು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಾಲಿನಲ್ಲಿ ನಿರಂತರವಾಗಿ ಮಳೆಯಾದ ಕಾರಣ ಹಾರಂಗಿ ಮತ್ತು ಕಾವೇರಿ ಜಲಾನಯನ ತಗ್ಗು ಪ್ರದೇಶಗಳಲ್ಲಿ ಬೆಳೆ ಹಾನಿ ಉಂಟಾಗಿದೆ. ಕಾವೇರಿ ನದಿಯಂಚಿನಲ್ಲಿ ನೆಲೆಕಂಡಿರುವ ನಾವೆಲ್ಲರೂ ಪುಣ್ಯವಂತರು. ಜೀವನದಿ ಕಾವೇರಿಯನ್ನು ಮಲಿನ ಮಾಡದೆ ಸಂರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ನೀರು ಕುಡಿಯಲು ಕೂಡ ಬಳಕೆಯಾಗುತ್ತಿದ್ದು, ಇದರಲ್ಲಿರುವ ಮಹಶೀರ್ನಂತಹ ವಿಶೇಷ ಅಪರೂಪದ ಜಲಚರಗಳು ನಶಿಸದಂತೆ ಎಚ್ಚರವಹಿಸಬೇಕು. ರೈತರು ಕೂಡ ತಮ್ಮ ಬೆಳೆಗೆ ಬಳಸುವ ರಾಸಾಯನಿಕ ಗೊಬ್ಬರಗಳ ಬಗ್ಗೆ ಎಚ್ಚರವಹಿಸಬೇಕಿದೆ ಎಂದರು.
೫೦ ಕೋಟಿ ರೂ. ವೆಚ್ಚದಲ್ಲಿ ೧೮ ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿ ಕೈಗೊಳ್ಳಲಾ ಗುವುದು. ಹಾಗೆಯೇ ೩೬.೫೦ ಕೋಟಿ ರೂ. ವೆಚ್ಚದಲ್ಲಿ ‘ಬೌನ್ಸ್ಟಿçಂಗ್ ಬ್ರಿಡ್ಜ್’ ನಿರ್ಮಾಣಕ್ಕೆ ೪ಏಳನೇ ಪುಟಕ್ಕೆ(ಮೊದಲ ಪುಟದಿಂದ) ಚಾಲನೆ ನೀಡಲಾಗುವುದು. ಗುಡ್ಡೆಹೊಸೂರಿನಿಂದ ಹುದುಗೂರು ಮಾರ್ಗದ ೫ ಕಿ.ಮೀ. ರಸ್ತೆ ೫ ಕೋಟಿ ರೂ. ವೆಚ್ಚದಲ್ಲಿ ಹಾಗೆಯೇ ಚಿಕ್ಲಿಹೊಳೆ ರಸ್ತೆ ೫ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ ವಿವರಿಸಿದರು.
ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಿAದ ಹಾರಂಗಿ ಜಲಾಶಯ ಕಚೇರಿ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿಗೂ ಮುಂದಾಗಲಾಗಿದೆ.
ಹಾರಂಗಿ ಎಡದಂಡೆ ನಾಲೆಯ ೬.೮೫ ಕಿ.ಮೀ.ನಿಂದ ೧೪.೭೫ ಕಿ.ಮೀ.ವರೆಗೆ ೭೨ ಕೋಟಿ ರೂ. ಮುಖ್ಯನಾಲೆಯನ್ನು ಆಧುನೀಕರಣ ಕಾಮಗಾರಿಯು ಈಗಾಗಲೇ ಆರಂಭವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೂ ಜಲ ಸಂಪನ್ಮೂಲ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದ್ದಾರೆ. ಆ ದಿಸೆಯಲ್ಲಿ ಡಿಸೆಂಬರ್ ವೇಳೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಹಾರಂಗಿ ಜಲಾಶಯ ಬಳಿಯ ಸೇತುವೆ ನಿರ್ಮಾಣ, ರಸ್ತೆ ಅಭಿವೃದ್ಧಿ, ಚಿಕ್ಲಿಹೊಳೆ ರಸ್ತೆ ಅಭಿವೃದ್ಧಿಗೆ ಒಟ್ಟಾರೆ ೯೫ ಕೋಟಿ ರೂ.ಗೂ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕೆ ಜನವರಿಯಲ್ಲಿ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಹಾರಂಗಿ ಜಲಾಶಯ ನದಿ ಪಾತ್ರ ಗರಗಂದೂರು ಮತ್ತಿತರ ಕಡೆಗಳಲ್ಲಿ ಹೂಳುತೆಗೆಯುವ ಕಾರ್ಯ ಮಾಡಲಾಗುವುದು. ಜೊತೆಗೆ ಗಿಡ ಗಂಟಿಗಳನ್ನು ಕಡಿಯುವ ಕೆಲಸವಾಗಬೇಕು. ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಲಾಗುವುದು ಎಂದು ಡಾ. ಮಂತರ್ ಗೌಡ ತಿಳಿಸಿದರು.
ಹಾರಂಗಿ ಜಲಾಶಯದ ನೀರು ಬಳಕೆದಾರರ ಸಂಘದ ಅಧ್ಯಕ್ಷ ಮಾತನಾಡಿ, ಹೆಚ್ಚಿನ ಅನುದಾನ ಒದಗಿಸಿ ಹೂಳು ತೆಗೆಯುವಂತಾಗಬೇಕು ಎಂದು ಕೋರಿದರು.
ಹಾರಂಗಿ ಜಲಾಶಯ ಅಧೀಕ್ಷಕ ಇಂಜಿನಿಯರ್ ಸತೀಶ್ ಮಾತನಾಡಿ, ಜಲಾಶಯದಿಂದ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ ೮.೫೦ ಟಿಎಂಸಿ ಆಗಿದ್ದು, ಇದರಲ್ಲಿ ೮.೦೭೩ ಟಿಎಂಸಿ ನೀರನ್ನು ಉಪಯೋಗಿಸಬಹುದಾಗಿದೆ. ಹಾರಂಗಿ ಜಲಾಶಯವು ಮಣ್ಣಿನ ಏರಿ, ಕಲ್ಲು ಕಟ್ಟಡ ಹಾಗೂ ಕಾಂಕ್ರೀಟ್ ಕಟ್ಟಡದಿಂದ ಕೂಡಿರುತ್ತದೆ. ಜಲಾಶಯದ ಉದ್ದ ೮೪೫.೮೨ ಮೀ., ಎತ್ತರ ೫೩ ಮೀ., ಹಾಗೂ ಸಮುದ್ರ ಮಟ್ಟದಿಂದ ೨೮೫೯ ಅಡಿಗಳು ಎತ್ತರದಲ್ಲಿದೆ ಎಂದು ತಿಳಿಸಿದರು.
ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ಮಾಹಿತಿ ನೀಡಿ ಹಾರಂಗಿ ಜಲಾಶಯವು ಕೊಡಗು ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ, ಹಾಸನ ಜಿಲ್ಲೆಯ ಅರಕಲಗೂಡು, ಮೈಸೂರು ಜಿಲ್ಲೆಯ ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕುಗಳಲ್ಲಿ ೧,೩೪,೮೯೫ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ. ಇದರಲ್ಲಿ ಎರಡು ಏತ ನೀರಾವರಿ ಒಳಗೊಂಡಿದೆ ಎಂದು ತಿಳಿಸಿದರು.
೧೯೮೪ ರಿಂದ ಕಾವೇರಿ ಉತ್ಸವವನ್ನು ನೆರವೇರಿಸುತ್ತಿದ್ದು, ತಲಕಾವೇರಿಯಿಂದ ಪ್ರತೀ ವರ್ಷವೂ ಪುಣ್ಯ ತೀರ್ಥವನ್ನು ತಂದು ಪೂಜಿಸಿ ಮರುದಿನ ಹಾರಂಗಿ ಜಲಾಶಯ ಬಳಿ ಇರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ತೀರ್ಥ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗಿದೆ ಎಂದು ಹೇಳಿದರು.
ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ಇಂಜಿನಿಯರ್ಗಳಾದ ಕುಸುಕುಮಾರ್, ಮಂಜುನಾಥ್, ಎಇಇ ರಾಜೇಂದ್ರ ಕುಮಾರ್, ಸಹಾಯಕ ಇಂಜಿನಿಯರ್ಗಳಾದ ಸೌಮ್ಯ ರಾಜು, ಸಂದ್ಯಾ ಇತರರು ಇದ್ದರು.
ಹಾರಂಗಿ ಹೂಳೆತ್ತುವ ಯೋಜನೆ ಸಂಬAಧಿಸಿದ ಗುತ್ತಿಗೆದಾರರ ನಿರಾಸಕ್ತಿ ಕಾರಣ ಪ್ರಗತಿ ಕಂಡಿಲ್ಲ. ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಇಳಿಕೆಯಾದ ಕೂಡಲೆ ಈ ಕಾಮಗಾರಿ ಚಾಲನೆಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಹುಣಸೂರು ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಸಾಲಿಗ್ರಾಮ ಕಾರ್ಯಪಾಲಕ ಅಭಿಯಂತರ ಕುಶುಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.