ಮಡಿಕೇರಿ, ಅ. ೧೭ : ಬಾವಿಗೆ ಆಕಸ್ಮಿಕವಾಗಿ ಬಿದ್ದು ನರಳಾಡುತ್ತಿದ್ದ ಏಳು ವರ್ಷದ ಗರ್ಭಿಣಿ ಹಸುವನ್ನು ಅಗ್ಗಿಶಾಮಕ ಸಿಬ್ಬಂದಿ ಮತ್ತು ಗ್ರಾಮಸ್ಥರು ಪ್ರಯತ್ನಪಟ್ಟು ಸುರಕ್ಷಿತವಾಗಿ ಮೇಲಕ್ಕೆತ್ತಿದ ಘಟನೆ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೈಸ್ಕೂಲ್ ಪೈಸಾರಿ ಗ್ರಾಮದ ಕುಸುಮ ಎಸ್ಟೇಟ್ ನಲ್ಲಿ ನಡೆದಿದೆ ತರೆದ ಬಾವಿಗೆ ಆರು ತಿಂಗಳ ಗರ್ಭಿಣಿ ಹಸುವೊಂದು ಕಾಲು ಜಾರಿ ಬಿದ್ದಿತ್ತು. ಸುಮಾರು ೨೦ ಅಡಿಗೂ ಹೆಚ್ಚು ಆಳದ ಬಾವಿಗೆ ಹಸು ಬಿದ್ದಿದ್ದರಿಂದ ಸ್ಥಳೀಯ ನಿವಾಸಿ ಮತ್ತು ಹಸುವಿನ ಮಾಲೀಕ ಸೂರಿ ಅವರು ಗೋಣಿಕೊಪ್ಪ ಅಗ್ಗಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅಗ್ಗಿಶಾಮಕ ಸಿಬ್ಬಂದಿಗಳು ಮತ್ತು ಸ್ಥಳೀಯರು ಬಾವಿಯಿಂದ ಮೂರು ಗಂಟೆ ಕಾರ್ಯಾಚರಣೆ ಬಳಿಕ ಹಸುವನ್ನು ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆ ಎತ್ತಿದ್ದರು.