ಕೂಡಿಗೆ, ಅ. ೧೭: ಶಿಕ್ಷಣ ಸಂಸ್ಥೆಗಳ ಏಳಿಗೆಗೆ ಪೋಷಕ ವರ್ಗದವರು ಭಾವನಾತ್ಮಕ ಸಂಬAಧ ಬೆಳೆಸಬೇಕು. ವಿದ್ಯಾರ್ಥಿಗಳಲ್ಲಿ ಉತ್ತಮ ಗುಣ ನಡತೆ, ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ ಎಂದು ಕುಶಾಲನಗರ ಪದವಿಪೂರ್ವ ಕಾಲೇಜನ ನಿವೃತ್ತ ಕಲಾ ಶಿಕ್ಷಕ ಉ.ರಾ. ನಾಗೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಹೆಬ್ಬಾಲೆಯಲ್ಲಿರುವ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕ ಮತ್ತು ಶಿಕ್ಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪೋಷಕರಿಗೆ ವಿದ್ಯಾರ್ಥಿಗಳ ಗುರುತರವಾದ ಜವಾಬ್ದಾರಿ ಇರುತ್ತದೆ. ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಜನೆ ಮಾಡಿದಾಗ ಭವಿಷ್ಯದ ಜೀವನಕ್ಕೆ ದಾರಿಯಾಗಲಿದೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಪೋಷಕ ಶಿಕ್ಷಕ ಪರಿಷತ್ತಿನ ಅಧ್ಯಕ್ಷ ಮಂಜುನಾಥ್ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಬದುಕು ಸಾರ್ಥಕತೆಗೆ ಶಿಕ್ಷಕರ ಪಾತ್ರ ಮುಖ್ಯ. ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಬೆಳೆಯಲು ಒಳ್ಳೆಯ ಶಿಕ್ಷಣದ ಅವಶ್ಯಕತೆ ಬೇಕಾಗಿರುತ್ತದೆ ಎಂದು ತಿಳಿಸಿದರು.

ಶಾಲೆಯ ವ್ಯವಸ್ಥಾಪಕ ಹೆಚ್.ಎಸ್. ಲೋಕೇಶ್ ಮಾತನಾಡಿ, ವಿದ್ಯಾರ್ಥಿಗಳ ಪ್ರಗತಿ, ಶಿಸ್ತಿನ ಮಹತ್ವ ಹಾಗೂ ವಿದ್ಯಾರ್ಥಿಗಳ ಪ್ರಗತಿಗೆ ಪೋಷಕರ ಬೆಂಬಲ, ಸಹಕಾರದ ಬಗ್ಗೆ ತಿಳಿಸಿದರು. ಹಾಜರಿದ್ದ ಪೋಷಕರು ಶಾಲೆಯ ಬಗ್ಗೆ ತಮ್ಮ ಉತ್ತಮವಾದ ಅಭಿಪ್ರಾಯದೊಂದಿಗೆ ಸಕಾರಾತ್ಮಕವಾಗಿ ತಿಳಿಸಿದರು. ಸಭೆಯಲ್ಲಿ ಮುಖ್ಯ ಶಿಕ್ಷಕಿ ಲೇಖ ಜಾನ್, ಸಹ ಶಿಕ್ಷಕರ ವೃಂದ, ಪೋಷಕರು ಭಾಗವಹಿಸಿದ್ದರು.