ಬೆಂಗಳೂರು, ಅ. ೧೭: ಬೆಂಗಳೂರಿನ ವಿಧಾನಸೌಧ ಕಚೇರಿಯಲ್ಲಿ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಪರಿಶಿಷ್ಟ ಪಂಗಡ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ವೀರಾಜಪೇಟೆ ಕ್ಷೇತ್ರದ ಪರಿಶಿಷ್ಟ ಪಂಗಡದ ಅಭಿವೃದ್ಧಿ ಮತ್ತು ಮೂಲಸೌಲಭ್ಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಕೊಡಗು ಜಿಲ್ಲೆಯ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸವಾಗಿರುವ ಪರಿಶಿಷ್ಟ ಪಂಗಡದ ಜನಾಂಗದವರಿಗೆ ನಿವೇಶನಗಳನ್ನು ಒದಗಿಸಲು ಕಾಯ್ದಿರಿಸಿರುವ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಇದಲ್ಲದೆ ಕೊಡಗು ಜಿಲ್ಲೆಯ ತೆರಾಲು ಗ್ರಾಮದ ೨೦.೦೦ ಎಕರೆ ಹಾಗೂ ಬಿರುನಾಣಿ ಗ್ರಾಮದ ೭.೦೦ ಎಕರೆ ಬದಲಾಗಿ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿ, ಬಿರುನಾಣಿ ಗ್ರಾಮದ ಸರ್ವೆ ನಂ: ೨೨/೨ರಲ್ಲಿ ೧೨.೦೦ ಹಾಗೂ ೭.೦೦ ಒಟ್ಟು ೧೯.೦೦ ಎಕರೆ ವೀಸ್ತರ್ಣದ ಜಾಗದಲ್ಲಿ ಬಡಾವಣೆ ನಿರ್ಮಿಸಲು ತಿದ್ದುಪಡಿ ಆದೇಶ.

ಕೊಡವ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕೊಡವ ಸಮುದಾಯದ ಕುಲಶಾಸ್ತಿçÃಯ ಅಧ್ಯಯನ ಬಗ್ಗೆ ಹಾಗೂ ಕೊಡಗು ಜಿಲ್ಲೆಯ ಕಾಫಿ ತೋಟಗಳ ಮಾಲೀಕರ ಲ್ಯೆನ್‌ಮನೆಗಳಲ್ಲಿ ೪೭೫೭ ವಸತಿರಹಿತ ಮತ್ತು ನಿವೇಶನರಹಿತ ಪ.ಪಂಗಡದವರಿಗೆ ಮಾನ್ಯ ಮುಖ್ಯಮಂತ್ರಿಯವರ ಗ್ರಾಮೀಣ ನಿವೇಶನ ಯೋಜನೆಯಡಿ ಹಕ್ಕುಪತ್ರ ನೀಡುವ ಕುರಿತು ಚರ್ಚೆ ನಡೆಯಿತು.

ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕುಗಳ ವ್ಯಾಪ್ತಿಯ ಗಿರಿಜನ ಹಾಡಿಗಳು, ಕಾಲೋನಿಗಳ ಜನರಿಗೆ ಅನುಕೂಲವಾಗುವಂತೆ ಸಂಚಾರಿ ಆರೋಗ್ಯ ಘಟಕ ಸ್ಥಾಪಿಸುವ ಬಗ್ಗೆ.ಪರಿಶಿಷ್ಟ ಪಂಗಡದ ಜನಾಂಗದವರಿಗೆ ಅರಣ್ಯ ಹಕ್ಕು ನೀಡುವ ಕುರಿತು. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಗೆ ಬಿಡುಗಡೆಯಾಗಿದ್ದ ಅನುದಾನವು ನಗದೀಕರಣವಾಗದಿರುವುದರಿಂದ ಸದರಿ ಬಾಬ್ತನ್ನು ಬಿಡುಗಡೆ ಮಾಡುವ ಬಗ್ಗೆಯೂ ಚರ್ಚೆ ನಡೆಯಿತು.

ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪರಿಶಿಷ್ಟ ಪಂಗಡದ ಜನಾಂಗದ ಹಾಡಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಸಂಬAಧ ಅನುದಾನ ಬಿಡುಗಡೆ ಮಾಡುವ ಬಗ್ಗೆ.ಕೊಡಗು ಜಿಲ್ಲೆಯ ಕಾಫಿ ತೋಟಗಳ ಲೈನ್‌ಮನೆಗಳಲ್ಲಿ ವಾಸವಾಗಿರುವ ಪರಿಶಿಷ್ಟ ಪಂಗಡದ ಬಾಕಿ ೨೮೦೦ ಕುಟುಂಬಗಳಿಗೆ ನಿವೇಶನಗಳನ್ನು ಒದಗಿಸಲು ೧೦೦ ಎಕರೆ ಜಾಗವನ್ನು ಗುರುತಿಸಿ ಕೊಡಗು ಐ.ಟಿ.ಡಿ.ಪಿ. ರವರಿಗೆ ಹೆಸರಿಗೆ ಹಸ್ತಾಂತರಿಸುವ ಕುರಿತು ಹಾಗೂ ಕೊಡಗು ಬುಡಕಟ್ಟು ಸಂಸೃತಿಯ ಜನಾಂಗವನು `ಅರೆಮನೆಪಾಲೆ’ ಎಂದು ಮಾನ್ಯತೆ ದೊರಕಿಸಿಕೊಡುವ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕ್ಯೆಗೊಳ್ಳಲು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಈ ಸಭೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದಶಿ ರಂದೀಪ್, ನಿರ್ದೆಶಕ ಯೋಗೇಶ್, ಉಪನಿರ್ದೆಶಕರು ಹಾಗೂ ಅಧಿಕಾರಿಗಳು ಹಾಜರಿದ್ದರು.