ಚೆಯ್ಯಂಡಾಣೆ, ಅ. ೧೭: ಚೆಯ್ಯಂಡಾಣೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ದ್ವಿತೀಯ ವರ್ಷದ ಕೋಕೇರಿ ಪ್ರೀಮಿಯರ್ ಲೀಗ್ (ಕೆ.ಪಿ.ಎಲ್.) ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ನವೆಂಬರ್ ೭ ರಿಂದ ೯ ರ ವರೆಗೆ ನಡೆಯಲಿದೆ.
ಈ ವ್ಯಾಪ್ತಿಗೆ ಒಳಪಟ್ಟ ಕ್ರೀಡಾಪಟುಗಳನ್ನು ಒಟ್ಟು ೮ ತಂಡಗಳಿಗೆ ಮಾಲೀಕರು ಬಿಡ್ಡಿಂಗ್ ಮುಖಾಂತರ ಆಯ್ಕೆ ಮಾಡಿದ್ದಾರೆ.
ಇದರ ಬಿಡ್ಡಿಂಗ್ ಪ್ರಕ್ರಿಯೆ ಇತ್ತೀಚಿಗೆ ಚೆಯ್ಯಂಡಾಣೆಯ ಲಕ್ಷಿö್ಮ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು.
ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಒಟ್ಟು ೧೦೪ ಮಂದಿ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ನ.೭ ರಿಂದ ೯ ರವರೆಗೆ ೩ ದಿನಗಳ ಕಾಲ ಬಲಿಷ್ಠ ೮ ತಂಡಗಳಾದ ಟೀಮ್ ಹಂಟರ್ಸ್, ಹರಿಕಾ ಕ್ರಿಕೆಟರ್ಸ್, ಕೋಕೇರಿ ಕ್ರಿಕೆಟ್ ಕ್ಲಬ್, ಚೆಯ್ಯಂಡಾಣೆ ಸೂಪರ್ ಕಿಂಗ್ಸ್, ಗ್ಲೋಬಲ್ ಪೈರೇಟ್ಸ್, ಅದ್ವಿತ್ ಕ್ರಿಕೆಟರ್ಸ್, ಭಗವತಿ ಕ್ರಿಕೆಟರ್ಸ್ ಕೆದಮುಳ್ಳೂರು, ಟೈಟಾನ್ಸ್ ಕೆದಮುಳ್ಳೂರು ತಂಡಗಳು ಸೆಣಸಾಡಲಿದೆ.
ಚಾಂಪಿಯನ್ ತಂಡಕ್ಕೆ ೫೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ತಂಡಕ್ಕೆ ೩೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ೧೦ ಸಾವಿರ ಹಾಗೂ ಆಕರ್ಷಕ ಟ್ರೋಫಿ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಗುವುದು. ಉತ್ತಮ ಆಟಗಾರರಿಗೆ ವ್ಯೆಯಕ್ತಿಕ ಬಹುಮಾನ ಕೂಡ ನೀಡಲಾಗುವುದು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೋಕೇರಿ ಪ್ರೀಮಿಯರ್ ಲೀಗ್ ಅಧ್ಯಕ್ಷ ಚೇನಂಡ ರೋಷನ್ ಚಂಗಪ್ಪ, ಉಪಾಧ್ಯಕ್ಷ ಪೆಮ್ಮಂಡ ದಕ್ಷತ್ ಸುಬ್ಬಯ್ಯ, ಕೋಶಾಧಿಕಾರಿ ವಿಪಿನ್ ಗಣಪತಿ ಹಾಗೂ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.