ಸೋಮವಾರಪೇಟೆ, ಅ. ೧೭: ಅಕ್ರಮ ಗೋ ಸಾಗಾಟ, ಗೋ ಹತ್ಯೆ, ಗೋ ಮಾಂಸ ಮಾರಾಟಕ್ಕೆ ಪೊಲೀಸ್ ಇಲಾಖೆಯೇ ಪರೋಕ್ಷ ಬೆಂಬಲ ನೀಡುತ್ತಿದೆ. ಗೋ ಸಾಗಾಟವನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ವಿರುದ್ದವೇ ದೂರು ದಾಖಲಿಸಲಾಗುತ್ತಿದೆ. ಇಲಾಖೆಯ ಅಧಿಕಾರಿಗಳ ವರ್ತನೆ ಸರಿ ಇಲ್ಲ; ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪಟ್ಟಣದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು.

ನಿರಂತರವಾಗಿ ಗೋವುಗಳ ಕಳ್ಳತನವಾಗಲು ಇಲಾಖೆಯ ನಿರ್ಲಕ್ಷö್ಯ ಹಾಗೂ ಶಾಮೀಲು ಕಾರಣವೆಂದು ಬೊಟ್ಟು ಮಾಡಿದ ಕಾರ್ಯಕರ್ತರು, ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ತಾ.೧೨ರ ತಡರಾತ್ರಿ ೨.೩೦ರ ಸುಮಾರಿಗೆ ಪಟ್ಟಣದಿಂದ ಮೂರು ಗೋವುಗಳನ್ನು ಅಕ್ರಮವಾಗಿ ಸಾಗಾಟಗೊಳಿಸುತ್ತಿದ್ದ ಸಂದರ್ಭ ಗೂಡ್ಸ್ ವಾಹನ ಕಾಗಡಿಕಟ್ಟೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಮೂರು ಗೋವುಗಳಿಗೆ ಗಾಯಗಳಾದ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಗಾಯಗೊಂಡ ಗೋ ಕಳ್ಳರನ್ನು ಎಸ್ಕಾರ್ಟ್ ಮೂಲಕ ಸಾಗಿಸಿದ ಇನ್ನೋವಾ ಕಾರಿನ ಚಾಲಕ ಹಾಗೂ ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಪರ ಸಂಘಟನೆಗಳ ಕೈಗೆ ಸಿಕ್ಕಿಬೀಳುವ ಗೋ ಹಂತಕರು, ಗೋ ಕಳ್ಳರು ಪೊಲೀಸ್ ಇಲಾಖೆಗೆ ಸಿಗದಿರಲು ಕಾರಣವೇನು? ಹೈವೆ ಪ್ಯಾಟ್ರೋಲ್ ವಾಹನ ಗೋ ಕಳ್ಳರಿಗೆ ಎಸ್ಕಾರ್ಟ್ ನೀಡುವ ವಾಹನವಾಗಿದೆಯೇ? ಎಂದು ಗಂಭೀರ ಪ್ರಶ್ನೆ ಎತ್ತಿದ ಕಾರ್ಯಕರ್ತರು, ಪೊಲೀಸ್ ಇಲಾಖೆಯು ಗೋ ಕಳ್ಳರಿಗೆ ರಕ್ಷಣೆ ನೀಡುವ ಇಲಾಖೆಯಾಗಿದೆ ಎಂದು ಗಂಭೀರ ಆರೋಪ ಮಾಡಿದರು. ತಾ. ೧೨ರ ಘಟನೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರಿದರು.

ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸುವ ನೀವು; ಗೋ ಕಳ್ಳರನ್ನು ಹಿಡಿದು ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಿದ್ದೀರಾ? ಎಂದು ಇನ್ಸ್ಪೆಕ್ಟರ್ ಮುದ್ದುಮಹದೇವ ಅವರನ್ನು ಪ್ರಶ್ನಿಸಿದರು. ಈ ಹಿಂದೆ ಮಾದಾಪುರದಲ್ಲಿ ಹತ್ತಾರು ಕೆ.ಜಿ.ಯಷ್ಟು ಗೋ ಮಾಂಸ ಹಿಡಿದ ಸಂದರ್ಭ, ಅಲ್ಲಿಂದ ಸೋಮವಾರಪೇಟೆ ಪೊಲೀಸ್ ಠಾಣೆಗೆ ಬರುವಷ್ಟರಲ್ಲಿ ಗೋ ಮಾಂಸ ಹೋಗಿ ಕುರಿ ಮಾಂಸ ಮಾಡಿದ್ದಾರೆ. ಇಂತಹ ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಂಡಿದ್ದೀರಾ? ಎಂದು ಪ್ರಶ್ನಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ್ ಬೋಜೇಗೌಡ ಮಾತನಾಡಿ, ಕೊಡಗು ಜಿಲ್ಲೆ ಸೇರಿದಂತೆ ಸೋಮವಾರಪೇಟೆ ತಾಲೂಕಿನಾದ್ಯಂತ ಅಕ್ರಮವಾಗಿ ನಡೆಯುತ್ತಿರುವ ಗೋಸಾಗಾಟ ತಡೆಯಲು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇಲ್ಲಿನ ಪೊಲೀಸ್ ಇಲಾಖೆ ಮೊನ್ನೆ ಘಟನೆಗೆ ಸಂಬAಧಿಸಿದAತೆ ಯಾರನ್ನೋ ಬಂಧಿಸಿ ನೈಜ್ಯ ಅಪರಾಧಿಗಳನ್ನು ಬಿಟ್ಟು ಸಮಾಜದ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ನೈಜ್ಯ ಅಪರಾಧಿಗಳನ್ನು ಬಂಧಿಸುವವರೆಗೂ ಪ್ರತಿಭಟನೆ ಮುಂದುವರೆಯುತ್ತದೆ. ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಮುಂದಿನ ದಿನಗಳಲ್ಲಿ ಅಕ್ರಮ ಗೋ ಸಾಗಾಟ ನಡೆಯುವುದಿಲ್ಲ ಎಂದು ಬರವಣಿಗೆಯಲ್ಲಿ ನೀಡಬೇಕು. ಅಲ್ಲಿಯವರೆಗೂ ಪ್ರತಿಭಟನೆ ನಡೆಯುತ್ತದೆ ಎಂದರು.

ಬಾAಗ್ಲಾದೇಶದಿAದ ಅಕ್ರಮವಾಗಿ ನುಸುಳಿ ಅಸ್ಸಾಮಿಗರ ಹೆಸರಿನಲ್ಲಿ ನೆಲೆಸಿರುವವರಿಗೆ ನಿರಂತರ ಗೋ ಮಾಂಸ ಲಭಿಸುತ್ತಿದೆ. ಇದರ ಮೂಲ ಹುಡುಕುವ ಕೆಲಸವನ್ನು ಇಲಾಖೆ ಮಾಡಿಲ್ಲ. ಹಿಂದೂಪರ ಸಂಘಟನೆಯವರೇ ಹಿಡಿದು ಕೊಡುತ್ತಿದ್ದಾರೆ. ಪೊಲೀಸರು ಒಂದೇ ಒಂದು ಪ್ರಕರಣವನ್ನೂ ಹಿಡಿದಿಲ್ಲ. ಕುಟ್ಟದಿಂದ ಕೊಡ್ಲಿಪೇಟೆವರೆಗೂ ಅಕ್ರಮ ನಡೆಯುತ್ತಿದೆ. ಚೆಕ್‌ಪೋಸ್ಟ್ಗಳಿವೆ ಅಧಿಕಾರಿಗಳಿಲ್ಲ; ಹೈವೇ ಪ್ಯಾಟ್ರೋಲ್ ಅವರು ಯಾವುದಕ್ಕೆ ಇರುವುದು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಕಾಬಿಟ್ಟಿ ಗೋ ಸಾಗಾಟಕ್ಕೆ ಪತ್ರ ನೀಡುವ ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಮೊಕದ್ದಮೆ ದಾಖಲಿಸಬೇಕು. ಮಾಂಸಕ್ಕಾಗಿ ಗೋವನ್ನು ಮಾರುವ, ಸಾಗಾಟಗೊಳಿಸುವ, ವಧೆ ಮಾಡಿ ಮಾಂಸ ಮಾರುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮುಂದಿನ ದಿನಗಳಲ್ಲಿ ವೇದಿಕೆ ವತಿಯಿಂದ ಪಶುವೈದ್ಯಕೀಯ ಇಲಾಖೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಬೋಜೇಗೌಡ ಎಚ್ಚರಿಸಿದರು. ಅಕ್ರಮ ಗೋಹತ್ಯೆ, ಸಾಗಾಟಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಸೋಮವಾರಪೇಟೆ ತಾಲೂಕು ಸೇರಿದಂತೆ ಕೊಡಗು ಜಿಲ್ಲಾ ಬಂದ್‌ಗೆ ಕರೆ ನೀಡಲಾಗುವುದು ಎಂದು ತಿಳಿಸಿದರು.

ಸಿಐ ವಿವರಣೆ

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಇನ್ಸ್ಪೆಕ್ಟರ್ ಮುದ್ದು ಮಹದೇವ, ಪ್ರಕರಣದಲ್ಲಿ ನೆಪಮಾತ್ರಕ್ಕೆ ಯಾರನ್ನೂ ಬಂಧಿಸಿಲ್ಲ. ಮೇಲಧಿಕಾರಿಗಳು ಪ್ರತಿ ಹಂತದಲ್ಲೂ ನಮ್ಮ ಕರ್ತವ್ಯ ನೋಡುತ್ತಿದ್ದಾರೆ. ಅಕ್ರಮ ಗೋ ಸಾಗಾಟಕ್ಕೆ ಕಡಿವಾಣ ಹಾಕಲಾಗುವುದು. ಮೊನ್ನೆಯ ಘಟನೆಗೆ ಸಂಬAಧಿಸಿದAತೆ ಓರ್ವ ಆರೋಪಿಯನ್ನು ಬಂಧಿಸಿದ್ದು, ಉಳಿದ ಈರ್ವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು. ಭರವಸೆಗಷ್ಟೇ ಸೀಮಿತವಾಗದೇ ಕಾರ್ಯರೂಪಕ್ಕೆ ತರಬೇಕು; ತಪ್ಪಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಒತ್ತಾಯಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಯೋಜಕ್ ದಿವಾಕರ್ ವೀರಾಜಪೇಟೆ, ಶರತ್ ಪೊನ್ನಂಪೇಟೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸುನಿಲ್ ಮಾದಾಪುರ, ಕುಮಾರ್ ಮೇಕೇರಿ, ತಾಲೂಕು ಸಂಯೋಜಕ್ ಉಮೇಶ್, ಸುಭಾಷ್ ತಿಮ್ಮಯ್ಯ, ಅನೂಜ್ ಕೊಡ್ಲಿಪೇಟೆ, ಶಶಿಕಾಂತ್, ದರ್ಶನ್ ಜೋಯಪ್ಪ, ತಾಲೂಕು ಸಹ ಸಂಯೋಜಕ್ ಸೂರಜ್, ಹೇಮಂತ್ ಬಜೆಗುಂಡಿ, ವಿನಯ್‌ಕುಮಾರ್ ಮಾದಾಪುರ, ಪ್ರಮುಖರಾದ ಗೌತಮ್ ಗೌಡ, ದರ್ಶನ್ ಜೋಯಪ್ಪ, ಮಹೇಶ್ ತಿಮ್ಮಯ್ಯ, ಶ್ರೀನಿಧಿ ಲಿಂಗಪ್ಪ, ಕಿಬ್ಬೆಟ್ಟ ಮಧು, ಶರತ್‌ಚಂದ್ರ, ಮಚ್ಚಂಡ ಪ್ರಕಾಶ್, ಸೋಮೇಶ್, ಮೋಹಿತ್ ತಿಮ್ಮಯ್ಯ, ಮಸಗೋಡು ಸುರೇಶ್, ರೂಪಾ ಸತೀಶ್, ಸುಮತಿ, ಕೃಷ್ಣ, ಮೋಕ್ಷಿಕ್ ರಾಜ್, ಕೂತಿ ದಿವಾಕರ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.