ಕೋಕೇರಿ: ಮುಖ್ಯರಸ್ತೆಯಿಂದ ಕುಪ್ಪೋಟು ಸೇತುವೆ ತನಕ ಹಾಗೂ ೯ನೇ ಮೈಲ್ನಿಂದ ಕಿಕ್ಕರೆ ಜಂಕ್ಷನ್ ತನಕ ಸ್ವಚ್ಛತಾ ಕಾರ್ಯದಲ್ಲಿ ಸಾರ್ವಜನಿಕರು ಪಾಲ್ಗೊಂಡರು. ೪ ಜೀಪ್ ಟ್ರೆöÊಲರ್ಗಳಷ್ಟು ಕಸ ಸಂಗ್ರಹಗೊAಡಿತು.ಶ್ರೀಮAಗಲ: ಪೊನ್ನಂಪೇಟೆ ತಾಲೂಕಿನ ಗ್ಲೇನ್ ಲೋರ್ನ ಟೀ ಎಸ್ಟೇಟ್, ಟಾಟಾ ಕಾಫಿ ಲಿಮಿಟೆಡ್ ಆಶ್ರಯದಲ್ಲಿ ಕೆ.ಕೆ.ಆರ್.ನಿಂದ ಟಿ. ಶೆಟ್ಟಿಗೇರಿವರೆಗೆ ಸ್ವಚ್ಛತಾ ಕಾರ್ಯವನ್ನು ಸ್ವಚ್ಛ ಕೊಡಗು, ಸುಂದರ ಕೊಡಗು ಅಭಿಯಾನದಡಿ ಕೈಗೊಳ್ಳಲಾಯಿತು. ಈ ಸಂದರ್ಭ ಸಿಬ್ಬಂದಿಗಳಾದ ಬಿ.ಟಿ. ಕುಶಾಲಪ್ಪ, ಟಿ.ಸಿ. ಸುಧಾ, ಕೆ.ಎಂ. ತಮ್ಮಯ್ಯ, ವಿಜಯಕುಮಾರ್, ಪುಷ್ಪ ಮತ್ತು ಕಾರ್ಮಿಕರು ಪಾಲ್ಗೊಂಡಿದ್ದರು.ಸುAಟಿಕೊಪ್ಪ: ಇಲ್ಲಿನ ಟಾಟಾ ಕಾಫಿ ಸಂಸ್ಥೆ ಅಭಿಯಾನಕ್ಕೆ ಜೊತೆಯಾಗಿ ಶ್ರಮದಾನ ಕೈಗೊಂಡಿತು. ಸಂಸ್ಥೆ ಸಿಬ್ಬಂದಿ ವರ್ಗ ಪಟ್ಟಣದ ವಿವಿಧೆಡೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿತು.ಮಡಿಕೇರಿ: ಸ್ವಚ್ಛ ಕೊಡಗು ಅಭಿಯಾನ ಕಾರ್ಯಕ್ರಮದಲ್ಲಿ ಬೆಟ್ಟಗೇರಿಯ ಉದಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡರು. ಶಾಲೆಯ ಅಧ್ಯಕ್ಷರಾದ ತಳೂರು ಎ. ಕಿಶೋರ್ ಕುಮಾರ್, ನಿರ್ದೇಶಕರಾದ ಅನುದೀಪ್ ಎಂ.ಜೆ, ಶಿಕ್ಷಕಿಯರಾದ ಸ್ವಪ್ನ, ಮುತ್ತಮ್ಮ, ಸೌಮ್ಯ ಮತ್ತು ಲಿಖಿತ ಉಪಸ್ಥಿತರಿದ್ದರು.ಮಡಿಕೇರಿ: ಮದೆ ಗ್ರಾಮದ ಮದೆ ಮಹದೇಶ್ವರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಶ್ರಮದಾನ ನೆರವೇರಿಸಿದರು. ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಮಾಪಿಳೆತೋಡಿನಲ್ಲಿ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರ ಅಭಿಮಾನಿ ಬಳಗದ ವತಿಯಿಂದ ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನದ ಅಂಗವಾಗಿ ಮಾಪಿಳೆತೋಡು ವ್ಯಾಪ್ತಿಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.
ಆಲಿರ ಹಾರಿಸ್ ಎರ್ಮು ಅವರ ನೇತೃತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಎ.ಹೆಚ್. ಮಜೀದ್, ಎ.ಎಂ. ಅಲವಿ, ಸಂಶು, ಎ.ವಿ. ನಿಸಾರ್, ಎಂ.ಎಸ್. ಸಮೀರ್, ಇರ್ಷಾದ್, ಝಿಯಾದ್, ಮಜೀದ್, ರಜಾಕ್, ಬಾಜಿ, ನೀತ್ ಅಯ್ಯಪ್ಪ, ಅರುಣ ಮುಂತಾದವರು ಪಾಲ್ಗೊಂಡಿದ್ದರು.ಮಡಿಕೇರಿ: ಸ್ವಚ್ಛ ಕೊಡಗು - ಸುಂದರ ಕೊಡಗು ಅಭಿಯಾನದಡಿಯಲ್ಲಿ ೨ನೇ ಮೊಣ್ಣಂಗೇರಿಯ ಶೌರ್ಯ ವಿಪತ್ತು ಘಟಕದಿಂದ ಶ್ರಮದಾನ ನಡೆಯಿತು.
೨ನೇ ಮೊಣ್ಣಂಗೇರಿಯಿAದ ಜೋಡುಪಾಲದವರೆಗೆ ಮಂಗಳೂರು ರಾಷ್ಟಿçÃಯ ಹೆದ್ದಾರಿಯ ಬಸ್ ತಂಗುದಾಣ ಹಾಗೂ ರಸ್ತೆಯ ಎರಡು ಬದಿಗಳಲ್ಲಿ ಬಿದ್ದಿದ್ದ ಕಸದ ರಾಶಿಗಳನ್ನು ಸ್ವಚ್ಛತೆಗೊಳಿಸಿ ಅಂದಾಜು ೫ ಪಿಕಪ್ ವಾಹನದಷ್ಟು ಕಸ, ಬಾಟಲಿ, ಪ್ಲಾಸ್ಟಿಕ್ಗಳನ್ನು ಮದೆ ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು.
ಘಟಕದ ಸಂಯೋಜಕಿ ಹಾಗೂ ಸೇವಾ ಪ್ರತಿನಿಧಿ ಸಬೀನಾ, ತಾಲೂಕು ಜ್ಞಾನವಿಕಾಸ ಕೇಂದ್ರದ ಸಮನ್ವಯ ಸಮಿತಿಯ ಅಧಿಕಾರಿ ಮಾಲಿನಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರಾದ ಯೋಗೀಶ್, ಹೂವಮ್ಮ ಹಾಗೂ ಇತರರು ಇದ್ದರು.ಮಡಿಕೇರಿ: ಸ್ವಚ್ಛ-ಸುಂದರ ಕೊಡಗು ಅಭಿಯಾನಕ್ಕೆ ಕೋಳುಮಾಡನ ಕುಟುಂಬ ಕೈಜೋಡಿಸಿತು. ಮಡಿಕೇರಿ ತಾಲೂಕಿನ ಅರ್ವತೋಕ್ಲು ಗ್ರಾಮದಲ್ಲಿ ಕೋಳುಮಾಡನ (ಕಾಕೇರಿ) ಕುಟುಂಬಸ್ಥರು ಬಕ್ಕದ ಬಳಿಯಿಂದ ಬಸ್ ನಿಲ್ದಾಣದ ಎರಡು ಕಡೆ ಸ್ವಚ್ಛತಾ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರು ಉತ್ತಪ್ಪ, ರಾಮಚಂದ್ರ, ಪ್ರಕಾಶ, ಸೂರಿ, ಜಯಪ್ರಕಾಶ್ ಮತ್ತು ಸರಸ್ವತಿ ಭಾಗವಹಿಸಿದ್ದರು.ಮಡಿಕೇರಿ: ಸ್ವಚ್ಛ-ಸುಂದರ ಕೊಡಗು ಅಭಿಯಾನಕ್ಕೆ ಕೋಳುಮಾಡನ ಕುಟುಂಬ ಕೈಜೋಡಿಸಿತು. ಮಡಿಕೇರಿ ತಾಲೂಕಿನ ಅರ್ವತೋಕ್ಲು ಗ್ರಾಮದಲ್ಲಿ ಕೋಳುಮಾಡನ (ಕಾಕೇರಿ) ಕುಟುಂಬಸ್ಥರು ಬಕ್ಕದ ಬಳಿಯಿಂದ ಬಸ್ ನಿಲ್ದಾಣದ ಎರಡು ಕಡೆ ಸ್ವಚ್ಛತಾ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರು ಉತ್ತಪ್ಪ, ರಾಮಚಂದ್ರ, ಪ್ರಕಾಶ, ಸೂರಿ, ಜಯಪ್ರಕಾಶ್ ಮತ್ತು ಸರಸ್ವತಿ ಭಾಗವಹಿಸಿದ್ದರು.ಗೋಣಿಕೊಪ್ಪ: ಕೈಕೇರಿಯ ಒಕ್ಕಲಿಗ ಯುವಕ ಸಂಘದ ವತಿಯಿಂದ ಮುಖ್ಯರಸ್ತೆಯಲ್ಲಿ ಶುಚಿತ್ವ ಕಾರ್ಯ ಕೈಗೊಳ್ಳಲಾಯಿತು.ಮಡಿಕೇರಿ: ನಗರದ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘ ನಿಯಮಿತ ವತಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು.
ಸಂಘದ ಅಧ್ಯಕ್ಷ ಸಿರಿಲ್ ಮೊರಾಸ್, ಸÀಂಘದ ಹಿರಿಯ ಸದಸ್ಯ ಬೇಬಿ ಮ್ಯಾಥ್ಯು ಮಾತನಾಡಿ, ಸ್ವಚ್ಛ ಕೊಡಗು ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು. ಗ್ರೇಸಿ ಲೋಬೊ ಸ್ವಚ್ಛತಾ ವಿಧಿಯನ್ನು ಬೋಧಿಸಿದರು. ಸಂಘದ ಉಪಾಧ್ಯಕ್ಷ ಅಂತೋಣಿ ಕ್ಲಮೆಂಟ್ ರೇಗೊ, ಹಾಗೂ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು.ಮುಳ್ಳೂರು: ಸಮೀಪದ ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ವತಿಯಿಂದ ಬುಧವಾರ ಸ್ವಚ್ಛ ಕೊಡಗು ಅಭಿಯಾನದ ಪ್ರಯುಕ್ತ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ರೋಟರಿ ಕ್ಲಬ್ ಸದಸ್ಯರು ಗ್ರಾಮದ ಗಿರಿಜನರ ಹಾಡಿಯಿಂದ ಮೊರಾರ್ಜಿ ವಸತಿ ಶಾಲಾ ಮುಂಭಾಗ, ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಮುಂಭಾಗದಲ್ಲಿ ಗಿಡಗಂಟಿಗಳನ್ನು ಕಡಿದು ಮತ್ತು ಅಲ್ಲಲ್ಲಿ ಬಿದ್ದ ತ್ಯಾಜ್ಯಗಳನ್ನು ತೆಗೆದು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.
ಸ್ವಚ್ಛತಾ ಶ್ರಮದಾನದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣ ಸ್ವಾಮಿ, ಕಾರ್ಯದರ್ಶಿ ಕಿರಣ್, ರೋಟರಿ ವಲಯ ಸೇನಾನಿ ಎ.ಎಸ್. ರಾಮಣ್ಣ, ಸದಸ್ಯರಾದ ತಮ್ಮಯ್ಯ, ಎಂ.ಇ. ವೆಂಕಟೇಶ್ ವಿಠಲ್, ಪ್ರಸನ್ನಕುಮಾರ್, ವೆಂಕಟೇಶ್, ವಿಜಯ್, ಉದಯ್ ಕುಮಾರ್, ಸತೀಶ್ ಕುಮಾರ್ ಪಾಲ್ಗೊಂಡಿದ್ದರು.ಮಡಿಕೇರಿ: ಸ್ವಚ್ಛ ಕೊಡಗು - ಸುಂದರ ಕೊಡಗು ಅಭಿಯಾನದ ಭಾಗವಾಗಿ ನಗರದ ಬದ್ರಿಯಾ ಮಸೀದಿ ವತಿಯಿಂದ ನಗರದ ಗಣಪತಿ ಬೀದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.ಸೋಮವಾರಪೇಟೆ: ಇಲ್ಲಿನ ಲಯನ್ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಸಂದರ್ಭ ಅಧ್ಯಕ್ಷ ರಾಮಶೆಟ್ಟಿ, ಕಾರ್ಯದರ್ಶಿ ಮಂಜುನಾಥ್, ಸದಸ್ಯರಾದ ಸಿ.ಕೆ. ಮಲ್ಲಪ್ಪ, ಲೀಲಾ ರಾಮ, ಲಿಂಗರಾಜ್ ಹಾಗೂ ಇತರರು ಭಾಗವಹಿಸಿದ್ದರು.
ಮಡಿಕೇರಿ: ಮೂರ್ನಾಡಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆ ವತಿಯಿಂದ ಮೂರ್ನಾಡು ಬಸ್ ನಿಲ್ದಾಣದಿಂದ ಕುಂಬಳದಾಳು ಕೊಡವ ಸಮಾಜ ಮಾರ್ಗವಾಗಿ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಯಿತು.
ಸ್ಕೌಟ್ ಶಿಕ್ಷಕಿ ಸುನಿತಾ, ಗೈಡ್ ಶಿಕ್ಷಕಿ ಸ್ವರ್ಣಲತಾ ಹಾಗೂ ಸ್ಕೌಟ್ ಮಾಸ್ಟರ್ ಗುಲ್ಶನ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಾಪೋಕ್ಲು: ಸ್ವಚ್ಛ ಕೊಡಗು - ಸುಂದರ ಕೊಡಗು ಹೆಸರಿನ ಸ್ವಚ್ಛತಾ ಅಭಿಯಾನಕ್ಕೆ ನಾಪೋಕ್ಲು ಪಟ್ಟಣದಲ್ಲಿ ಉತ್ತಮ ಸ್ಪಂದನ ದೊರೆಯಿತು.
ಇಲ್ಲಿನ ಗ್ರಾಮ ಪಂಚಾಯಿತಿ ಹಾಗೂ ವರ್ತಕರ ಸಂಘ, ಸಹಕಾರ ಮಹಿಳಾ ಸಮಾಜದ ವತಿಯಿಂದ ಸ್ವಚ್ಛತಾ ಆಂದೋಲನ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವನಜಾಕ್ಷಿ, ವರ್ತಕರ ಸಂಘದ ಅಧ್ಯಕ್ಷ ಮಾಚೆಟ್ಟಿರ ಕುಸು ಕುಶಾಲಪ್ಪ, ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಸಹಕಾರ ಮಹಿಳಾ ಸಮಾಜದ ಅಧ್ಯಕ್ಷೆ ಕುಟ್ಟೇಟಿರ ರೇಷ್ಮಾ ಉತ್ತಪ್ಪ, ಲಯನ್ ಮಾಜಿ ಅಧ್ಯಕ್ಷ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ನಾಪೋಕ್ಲು: ಸ್ವಚ್ಛ ಕೊಡಗು - ಸುಂದರ ಕೊಡಗು ಹೆಸರಿನ ಸ್ವಚ್ಛತಾ ಅಭಿಯಾನಕ್ಕೆ ನಾಪೋಕ್ಲು ಪಟ್ಟಣದಲ್ಲಿ ಉತ್ತಮ ಸ್ಪಂದನ ದೊರೆಯಿತು.
ಇಲ್ಲಿನ ಗ್ರಾಮ ಪಂಚಾಯಿತಿ ಹಾಗೂ ವರ್ತಕರ ಸಂಘ, ಸಹಕಾರ ಮಹಿಳಾ ಸಮಾಜದ ವತಿಯಿಂದ ಸ್ವಚ್ಛತಾ ಆಂದೋಲನ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವನಜಾಕ್ಷಿ, ವರ್ತಕರ ಸಂಘದ ಅಧ್ಯಕ್ಷ ಮಾಚೆಟ್ಟಿರ ಕುಸು ಕುಶಾಲಪ್ಪ, ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಸಹಕಾರ ಮಹಿಳಾ ಸಮಾಜದ ಅಧ್ಯಕ್ಷೆ ಕುಟ್ಟೇಟಿರ ರೇಷ್ಮಾ ಉತ್ತಪ್ಪ, ಲಯನ್ ಮಾಜಿ ಅಧ್ಯಕ್ಷ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಮಡಿಕೇರಿ: ೧ನೇ ಮೊಣ್ಣಂಗೇರಿಯಲ್ಲಿ ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನ ಹಿನ್ನೆಲೆ ಶ್ರಮದಾನವನ್ನು ಸ್ಥಳೀಯ ಗ್ರಾಮಸ್ಥರು ಮಾಡಿದರು.