ಭಾಗಮAಡಲ, ಅ. ೧೭: ಭಾಗಮಂಡಲದ ಭಗಂಡೇಶ್ವರ ಕ್ಷೇತ್ರದಲ್ಲಿ ಭಕ್ತರ ಸಂಗಮ ಕಂಡುಬAತು. ತಲಕಾವೇರಿಗೆ ತೆರಳುವ ಮುನ್ನ ಭಾಗಮಂಡಲದ ಕ್ಷೇತ್ರಕ್ಕೆ ತೆರಳಬೇಕೆಂಬ ವಾಡಿಕೆ ಇರುವ ಹಿನ್ನೆಲೆ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಭಾಗಮಂಡಲದಲ್ಲಿ ನೆರೆದಿದ್ದರು. ಭಕ್ತಾದಿಗಳು ಕೇಶಮುಂಡನ ಮಾಡಿಸಿಕೊಂಡು ತಮ್ಮ ಪೂರ್ವಜರಿಗೆ ಪಿಂಡ ಪ್ರದಾನವನ್ನು ನೆರವೇರಿಸಿ ಕನ್ನಿಕೆ, ಸುಜ್ಯೋತಿ, ಕಾವೇರಿ ಸಂಗಮವಾಗುವ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾದರು.
ಭಗಂಡೇಶ್ವರ ಕ್ಷೇತ್ರದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಕ್ತಸಮೂಹ ಪಾಲ್ಗೊಂಡಿತು. ದಿನಂಪ್ರತಿಯAತೆ ಕ್ಷೇತ್ರದಲ್ಲಿ ಅನ್ನಸಂತರ್ಪಣೆ ನಡೆಯಿತು. ತ್ರಿವೇಣಿ ಸಂಗಮ ಬಳಿಯ ಅಶ್ವತ್ಥ ಕಟ್ಟೆ ಹಾಗೂ ನಾಗರಕಟ್ಟೆಯಲ್ಲಿಯೂ ಭಕ್ತರು ಪೂಜೆ ಮಾಡಿದರು. ಭಾಗಮಂಡಲದಲ್ಲಿ ಜಾತ್ರಾ ವಾತಾವರಣ ಸೃಷ್ಟಿಯಾಗಿತ್ತು. ಬೀದಿ ಬದಿಯಲ್ಲಿ ಆಟಿಕೆ, ಗೃಹಪಯೋಗಿ ವಸ್ತುಗಳ ಮಾರಾಟ ಜೋರಾಗಿತ್ತು. ತ್ರಿವೇಣಿ ಸಂಗಮದಲ್ಲಿ ಭಿಕ್ಷುಕರ ಸಾಲು ಕೂಡ ಕಂಡುಬAತು.