ಮಡಿಕೇರಿ, ಅ. ೧೭: ತೀರ್ಥರೂಪಿಣಿಯಾಗಿ ಪ್ರತ್ಯಕ್ಷಗೊಳ್ಳುವ ಕಾವೇರಿ ಮಾತೆಯ ದರ್ಶನಕ್ಕಾಗಿ ಬಂದಿದ್ದ ಭಕ್ತಸಮೂಹಕ್ಕೆ ವಿವಿಧ ಸಂಘ ಸಂಸ್ಥೆಗಳಿAದ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ತಲಕಾವೇರಿ ಕ್ಷೇತ್ರದಲ್ಲಿ ಕೊಡಗು ಏಕೀಕರಣ ರಂಗ ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿತ್ತು. ತುಲಾ ಸಂಕ್ರಮಣ ಜಾತ್ರೆಯ ೧ ತಿಂಗಳ ಕಾಲ ಏಕೀಕರಣ ರಂಗ ನಿರಂತರವಾಗಿ ಕ್ಷೇತ್ರದಲ್ಲಿ ಅನ್ನದಾಸೋಹ ನಡೆಸುತ್ತದೆ. ಅದೇ ರೀತಿ ಇಂದೂ ಕೂಡ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರಿಗೆ ಸಕಾಲದಲ್ಲಿ ಊಟದ ವ್ಯವಸ್ಥೆ ಮಾಡಿತು.

ಬೆಳಿಗ್ಗೆ ಇಡ್ಲಿ, ವಡೆ, ಉಪ್ಪಿಟ್ಟು, ಕೇಸರಿಬಾತ್, ಚಟ್ನಿಯೊಂದಿಗೆ ಕಾಫಿ, ಟೀ ವ್ಯವಸ್ಥೆಯನ್ನು ಏಕೀಕರಣ ರಂಗ ಮಾಡಿತ್ತು. ಮಧ್ಯಾಹ್ನ ಅನ್ನ, ಸಾರು, ಪಲ್ಯ, ಹಪ್ಪಳ, ಮೊಸರು, ಮಜ್ಜಿಗೆಯನ್ನು ಭಕ್ತರಿಗೆ ಒದಗಿಸಲಾಯಿತು. ಇದರೊಂದಿಗೆ ಚೆಟ್ಟಿಯಾರ್ ಕುಟುಂಬ ತಲಕಾವೇರಿಯ ಕೈಲಸಾಶ್ರಮದಲ್ಲಿ ಭಕ್ತರಿಗಾಗಿ ಅನ್ನದಾಸೋಹ ನಡೆಸಿತು. ಭಾಗಮಂಡಲ ಕ್ಷೇತ್ರದಲ್ಲಿ ಬೆಳಿಗ್ಗೆ ಹಾಗೂ ಮಧ್ಯಾಹ್ನ ವೀರಾಜಪೇಟೆ ಕೊಡವ (ಮೊದಲ ಪುಟದಿಂದ) ಸಮಾಜದಿಂದ ಉಪಹಾರ ಹಾಗೂ ಭೋಜನ ವ್ಯವಸ್ಥೆಯನ್ನು ಮಾಡಿತ್ತು. ಭಾಗಮಂಡಲದ ಗಜಾನನ ಯುವಕ ಸಂಘದಿAದ ಮಧ್ಯಾಹ್ನ ಭಾಗಮಂಡಲದಲ್ಲಿ ಅನ್ನಸಂತರ್ಪಣೆ ನೆರವೇರಿತು.

ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅನ್ನಸಂತರ್ಪಣೆ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಭೋಜನ ಸವಿದರು.