ಮಡಿಕೇರಿ, ಅ. ೧೭: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕಳೆದ ೨೦೨೪-೨೫ನೇ ಸಾಲಿನ ಕೊಡವ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ಆಯಾಯ ಸಾಲಿನಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಮಾತ್ರ ಸಲ್ಲಿಸುವುದು.

ಕೊಡವ ಭಾಷೆ-ಸಾಹಿತ್ಯ, ಸಂಸ್ಕೃತಿ, ಕಲೆ, ಜಾನಪದ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಿರುವ ಕೊಡವ ಕಥಾ ಸಂಕಲನ, ಕಾದಂಬರಿ, ಅಧ್ಯಯನ ಗ್ರಂಥಗಳನ್ನು ಮಾತ್ರ ಪರಿಗಣಿಸಲಾಗುವುದು.

ಅನ್ಯ ಭಾಷೆಯಿಂದ ಕೊಡವ ಭಾಷೆಗೆ ತರ್ಜುಮೆಗೊಂಡಿರುವ ಕೃತಿಗಳನ್ನು ಪರಿಗಣಿಸಲಾಗುವುದು. ಅಕಾಡೆಮಿಯಿಂದ ಪ್ರಕಟಗೊಂಡಿರುವ ಲೇಖಕರ ಪುಸ್ತಕಗಳನ್ನು ಬಹುಮಾನಕ್ಕೆ ಸಲ್ಲಿಸುವಂತಿಲ್ಲ. ಪ್ರಕಟಿತ ಪುಸ್ತಕಗಳ ತಲಾ ಮೂರು ಕೃತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ “ಕೊಡವ ಅಕಾಡೆಮಿಯ ಪುಸ್ತಕ ಬಹುಮಾನ-೨೦೨೪-೨೫”ಎಂದು ಕಡ್ಡಾಯವಾಗಿ ಬರೆದು, ಅಧ್ಯಕ್ಷರು/ ರಿಜಿಸ್ಟಾçರ್ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಸ್ಕೌಟ್ಸ್ ಭವನ, ಮಡಿಕೇರಿ-೫೭೧೨೦೧, ಈ ಮೇಲಿನ ವಿಳಾಸಕ್ಕೆ ನವೆಂಬರ್ ೨೨ ರೊಳಗೆ ಸಲ್ಲಿಸುವಂತೆ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಅಕಾಡೆಮಿ ಕಚೇರಿ ದೂರವಾಣಿ: ೮೭೬೨೯೪೨೯೭೬ ಯನ್ನು ಸಂಪರ್ಕಿಸಬಹುದು.