ಮಡಿಕೇರಿ : ಸ್ವಚ್ಛ ಕೊಡಗು ಮತ್ತು ಸುಂದರ ಕೊಡಗು ಅಭಿಯಾನ ಹಿನ್ನೆಲೆ ಪಾಲಿಬೆಟ್ಟದ ಚೆಶೈರ್ ಹೋಂ ವಿಶೇಷಚೇತನ ಶಾಲೆಯ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಪಾಲ್ಗೊಂಡರು. ಸುಮಾರು ೧ ಕಿ.ಮೀ. ದೂರ ಶ್ರಮಿಸಿ ಕಸವನ್ನು ಹೆಕ್ಕುವುದರ ಮೂಲಕ ಸ್ವಚ್ಛತೆಯನ್ನು ಮಾಡಿದರು. ಈ ಸಂದರ್ಭ ಶಾಲೆಯ ಅಧ್ಯಕ್ಷ ಗೀತಾ ಚಂಗಪ್ಪ, ಉಪಾಧ್ಯಕ್ಷÀ ಪುನೀತ ರಾಮದಾಸ್, ಶಾಲಾ ಮುಖ್ಯೋಪಾಧ್ಯಯÀ ಶಿವರಾಜ್ ಮತ್ತು ಸ್ವಯಂ ಸೇವಕರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ಕಣಿವೆ : ಸ್ವಚ್ಛ ಕೊಡಗು ಸುಂದರ ಕೊಡಗು ಕಾರ್ಯಕ್ರಮದ ಭಾಗವಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಗ್ರಾ. ಪಂ. ಅಧ್ಯಕ್ಷೆ ಸೌಮ್ಯ ಉದ್ಘಾಟಿಸಿದರು.
ನಿಸರ್ಗಧಾಮ ಮುಂಭಾಗದಲ್ಲಿ ಫುಡ್‌ಕೋರ್ಟ್ ವಾಣಿಜ್ಯ ಸಂಸ್ಥೆಯ ಸಿಬ್ಬಂದಿಗಳು ಸ್ವಚ್ಛಗೊಳಿಸಿದರು. ಗುಡ್ಡೆಹೊಸೂರು ಜಂಕ್ಷನ್‌ನಿAದ ಚಿಕ್ಕಬೆಟಗೇರಿಯವರೆಗೆ ರೆಡೊಲೆಂಟ್ ಪಾಯಿಂಟ್ ರಿಸಲ್ಟ್ ಸಿಬ್ಬಂದಿಗಳು ಶ್ರಮದಾನ ನಿರ್ವಹಿಸಿದರೆ, ಹಾರಂಗಿ ರಸ್ತೆಯಲ್ಲಿ ಜಂಗಲ್ ಕ್ಯಾಂಪ್ ರೆಸಾರ್ಟ್ನ ಸಿಬ್ಬಂದಿಗಳು ಭಾಗಿಯಾದರು. ಗುಡ್ಡೆÀ್ಡಹೊಸೂರು ಜಂಕ್ಷನ್‌ನಿAದ ಬಸವನಹಳ್ಳಿಯವರೆಗೆ ಫಾರ್ಮ್ ಎರಾ, ಆನೆಕಾಡುವರೆಗೆ ಪರ್ಪಲ್ ಪಾಮ್ ಸಂಸ್ಥೆಯ ಉದ್ಯೋಗಿಗಳು ಭಾಗವಹಿಸಿ ಗುಡ್ಡೆಹೊಸೂರು ಪಂಚಾಯಿತಿ ವ್ಯಾಪ್ತಿಯಲ್ಲಿ ತಮ್ಮ ಸ್ವಚ್ಛತೆಯ ಬದ್ಧತೆಯನ್ನು ಪ್ರದರ್ಶಿಸಿದರು. ಈ ಸಂದರ್ಭ ಉಪಾಧ್ಯಕ್ಷ ಪ್ರವೀಣ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಎಂ.ಆರ್. ಸದಸ್ಯರಾದ ಮಾದಪ್ಪ, ನಿತ್ಯಾನಂದ, ಪ್ರದೀಪ್, ರಮೇಶ್ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಸ್ವಚ್ಛತಾ ಶ್ರಮದಾನದಲ್ಲಿ ತಮ್ಮನ್ನು ತೊಡಗಿಸಿಕೊಂಡರು.ಸಿದ್ದಾಪುರ : ಸಿದ್ದಾಪುರ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಸ್ವಚ್ಛ ಕೊಡಗು - ಸುಂದರ ಕೊಡಗು ಅಭಿಯನ ಹಮ್ಮಿಕೊಳ್ಳಲಾಯಿತು. ಸಿದ್ದಾಪುರ ಪಟ್ಟಣದ ವ್ಯಾಪ್ತಿಯಲ್ಲಿ ಕಸ ತ್ಯಾಜ್ಯಗಳನ್ನು ತೆಗೆದು ಸ್ವಚ್ಛತೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ್. ಉಪಾಧ್ಯಕ್ಷ ಪಳನಿ ಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಆರ್. ಆಶಾ ಕುಮಾರಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.
ಸಿದ್ದಾಪುರ : ವೀರಾಜಪೇಟೆ ವಲಯ ಅರಣ್ಯ ಇಲಾಖೆ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಸ ಹಾಗೂ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.ಕಡಂಗ :ಸ್ವಚ್ಛ ಕೊಡಗು ಸುಂದರ ಕೊಡಗು ಒಂದು ವಿಶೇಷ ಪರಿಕಲ್ಪನೆಯೊಂದಿಗೆ ಕೊಡಗು ಜಿಲ್ಲೆಯಾದ್ಯಂತ ಹಲವು ಸಂಘಟನೆಗಳೊAದಿಗೆ ಸೇರಿಕೊಂಡು ಹಮ್ಮಿಕೊಳ್ಳಲಾದ ಸ್ವಚ್ಛತಾ ಕಾರ್ಯಕ್ರಮ ದಲ್ಲಿ ಬಡವರ ನೆರವು ಕೊಟ್ಟಮುಡಿ ಹಾಗೂ ಉಮ್ಮತ್ ಒನ್ ಕೊಡಗು ಸಂಘಟನೆಯ ಸದಸ್ಯರು ಸೇರಿ ನಾಪೋಕ್ಲು ಮಡಿಕೇರಿ ಮುಖ್ಯ ರಸ್ತೆಯ ಬದಿಗಳಲ್ಲಿ ಶ್ರಮದಾನ ನಡೆಸಿದರು.ಮಡಿಕೇರಿ : ಜೆಸಿ ಶಾಲೆ ಹಾಗೂ ಕುಮಟೂರು ಕೊಡವ ರಿಕ್ರಿಯೇಶನ್ ಕ್ಲಬ್‌ನ ಸಹಭಾಗಿತ್ವದಲ್ಲಿ ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನ ನಡೆಯಿತು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸ್ವಚ್ಛ ಕೊಡಗು ಸಂಚಾಲಕÀ ಪಲ್ವಿನ್ ಪೂಣಚ್ಚ ಮುಂದಾಳತ್ವದಲ್ಲಿ ಅಭಿಯಾನ ಪ್ರಾರಂಭವಾಯಿತು. ಕುಮಟೂರಿನ ಹೇರ್ಮಾಡ್ ಆರ್ಚ್ನಿಂದ ಪ್ರಾರಂಭವಾದ ಸ್ವಚ್ಛತಾ ಕಾರ್ಯ ಶ್ರೀಮಂಗಲದ ಕೂರ್ಗ್ ಗೆಸ್ಟ್ ಹೌಸ್‌ನವರೆಗೆ ಸುಮಾರು ನಾಲ್ಕು ಕಿಲೋಮೀಟರ್ ದೂರ ರಸ್ತೆ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಲಾಯಿತು. ಸ್ವಚ್ಛತಾ ಆಂದೋಲನಕ್ಕೆ ಜೆ.ಸಿ. ಶಾಲೆಯ ಮುಖ್ಯ ಶಿಕ್ಷಕ ಸತೀಶ್, ಸಹಶಿಕ್ಷಕರುಗಳು, ವಿದ್ಯಾರ್ಥಿಗಳು, ಕೊಡವ ರಿಕ್ರಿಯೇಶನ್ ಸದಸ್ಯರಾದ ತಿಮ್ಮಯ್ಯ, ಹರೀಶ್, ಶರತ್, ವಿನೇಶ್, ಸೂರಜ್ ಕಾರ್ಯಪ್ಪ, ಪೊನ್ನಣ್ಣ, ಸುರೇಶ್, ರಜತ್ ಪೂವಣ್ಣ ಪಾಲ್ಗೊಂಡಿದ್ದರು ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯ ಗಾಜಿನ ಬಾಟಲ್‌ಗಳನ್ನು ಶ್ರೀಮಂಗಲ ಪಂಚಾಯಿತಿ ವತಿಯಿಂದ ವಿಲೇವಾರಿ ಮಾಡಲಾಯಿತು.
ಮಡಿಕೇರಿ : ಜೆಸಿ ಶಾಲೆ ಹಾಗೂ ಕುಮಟೂರು ಕೊಡವ ರಿಕ್ರಿಯೇಶನ್ ಕ್ಲಬ್‌ನ ಸಹಭಾಗಿತ್ವದಲ್ಲಿ ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನ ನಡೆಯಿತು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸ್ವಚ್ಛ ಕೊಡಗು ಸಂಚಾಲಕÀ ಪಲ್ವಿನ್ ಪೂಣಚ್ಚ ಮುಂದಾಳತ್ವದಲ್ಲಿ ಅಭಿಯಾನ ಪ್ರಾರಂಭವಾಯಿತು. ಕುಮಟೂರಿನ ಹೇರ್ಮಾಡ್ ಆರ್ಚ್ನಿಂದ ಪ್ರಾರಂಭವಾದ ಸ್ವಚ್ಛತಾ ಕಾರ್ಯ ಶ್ರೀಮಂಗಲದ ಕೂರ್ಗ್ ಗೆಸ್ಟ್ ಹೌಸ್‌ನವರೆಗೆ ಸುಮಾರು ನಾಲ್ಕು ಕಿಲೋಮೀಟರ್ ದೂರ ರಸ್ತೆ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಲಾಯಿತು. ಸ್ವಚ್ಛತಾ ಆಂದೋಲನಕ್ಕೆ ಜೆ.ಸಿ. ಶಾಲೆಯ ಮುಖ್ಯ ಶಿಕ್ಷಕ ಸತೀಶ್, ಸಹಶಿಕ್ಷಕರುಗಳು, ವಿದ್ಯಾರ್ಥಿಗಳು, ಕೊಡವ ರಿಕ್ರಿಯೇಶನ್ ಸದಸ್ಯರಾದ ತಿಮ್ಮಯ್ಯ, ಹರೀಶ್, ಶರತ್, ವಿನೇಶ್, ಸೂರಜ್ ಕಾರ್ಯಪ್ಪ, ಪೊನ್ನಣ್ಣ, ಸುರೇಶ್, ರಜತ್ ಪೂವಣ್ಣ ಪಾಲ್ಗೊಂಡಿದ್ದರು ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯ ಗಾಜಿನ ಬಾಟಲ್‌ಗಳನ್ನು ಶ್ರೀಮಂಗಲ ಪಂಚಾಯಿತಿ ವತಿಯಿಂದ ವಿಲೇವಾರಿ ಮಾಡಲಾಯಿತು.
ಮಡಿಕೇರಿ: ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನದ ಅಂಗವಾಗಿ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ಮತ್ತು ಕಾವೇರಿ ಮಹಿಳಾ ಸಮಾಜದ ಸದಸ್ಯರು ಪಾಲ್ಗೊಂಡು ಬಲ್ಲಮಾವಟಿ ವ್ಯಾಪ್ತಿಯಲ್ಲಿ ಶ್ರಮದಾನ ನೆರವೇರಿಸಿದರು. ಚೆಟ್ಟಳ್ಳಿ: ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ವತಿಯಿಂದ ಸ್ವಚ್ಛ ಕೊಡಗು, ಸುಂದರ ಕೊಡಗು ಅಭಿಯಾನದಡಿಯಲ್ಲಿ ಸ್ವಚ್ಚತಾ ಆಂದೋಲನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಕಾಲೇಜಿನ ಆವರಣ ಹಾಗೂ ಕಾಲೇಜಿನ ಮುಂಭಾಗದ ಮುಖ್ಯ ರಸ್ತೆಯ ಬದಿಗಳನ್ನು ಸ್ವಚ್ಛಗೊಳಿಸಿದರು. ಮಡಿಕೇರಿ: ಸ್ವಚ್ಛ ಕೊಡಗು-ಸುಂದರ ಕೊಡಗು ಅಂಗವಾಗಿ ನಾಪೋಕ್ಲು ಸಮೀಪದ ಹೊದವಾಡದ ರಾಫೆಲ್ಸ್ ಇಂಟರ್‌ನ್ಯಾಷನಲ್ ಶಾಲಾ ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳು ಕೊಟ್ಟಮುಡಿ ಜಂಕ್ಷನ್‌ನಿAದ ಬೊಳಿಬಾಣೆವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು.
ಮಡಿಕೇರಿ: ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನ ಹಿನ್ನೆಲೆ ನಗರದ ತನಲ್ ಸಂಸ್ಥೆಯ ಕಾರ್ಯಕರ್ತರು ತ್ಯಾಗರಾಜ ಕಾಲೋನಿಯಲ್ಲಿ ಸ್ವಚ್ಛತೆ ನಡೆಸಿದರು.
ಮಡಿಕೇರಿ: ಸ್ವಚ್ಛ ಕೊಡಗು ಸುಂದರ ಕೊಡಗು ಸ್ವಚ್ಛತಾ ಅಭಿಯಾನದ ಹಿನ್ನೆಲೆ ಅದರ ಸೈಡ್ ಫಾರ್ಮ್ ಸ್ಟೇ ಕರಡ ವತಿಯಿಂದ ಕಡಂಗದಿAದ ಕರಡದವರೆಗೆ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಪೊನ್ನಂಪೇಟೆ: ಇಲ್ಲಿನ ಸಂತ ಅಂತೋಣಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ೮೦ ಜನರ ತಂಡವು ಸ್ವಚ್ಚ ಕೊಡಗು ಸುಂದರ ಕೊಡಗು ಅಭಿಯಾನದಲ್ಲಿ ಭಾಗವಹಿಸಿ ಪೂನ್ನಂಪೇಟೆಯ ಕಾನೂರು ರಸ್ತೆಯ ಸುಮಾರು ೧೦ ಕಿ.ಮೀ. ತನಕ ಸ್ವಚ್ಛಗೊಳಿಸಿದರು.