ಮಡಿಕೇರಿ, ಅ. ೧೬: ಅಕ್ಕಸಾಲಿಗರ ಮೇಲೆ ಹಲ್ಲೆಗೈದು ರೂ. ೧೦ ಲಕ್ಷ ದರೋಡೆ ನಡೆಸಿ, ಇಬ್ಬರನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ಕೊಡಗು-ಕೇರಳ ಗಡಿ ಭಾಗವಾದ ಪೆರುಂಬಾಡಿಯಲ್ಲಿ ನಡೆದಿದೆ.

ಈ ಕುರಿತು ಕೇರಳದ ಕಣ್ಣೂರು ಜಿಲ್ಲೆಯ ಕೂತುಪರಂಬು ನಿವಾಸಿ ರದೀಶ್ (೩೬) ನೀಡಿದ ದೂರಿನಡಿ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಕಸಾಲಿಗರಾದ ರದೀಶ್, ಸಂತೋಷ್ ಹಾಗೂ ಸುರೇಶ್ ಅವರುಗಳು ಚಾಲಕ ನಿಜಾದ್ ಅವರೊಂದಿಗೆ ಕೂತುಪರಂಬುವಿನಿAದ ಬೆಳಿಗ್ಗೆ ೪ ಗಂಟೆಗೆ ಮೈಸೂರಿಗೆ ಹೋಗಿ ಚಿನ್ನ ಮಾರಾಟ ಮಾಡಿ ರೂ. ೧೦ ಲಕ್ಷ ರೂಪಾಯಿ ಅನ್ನು ಕೇರಳಕ್ಕೆ ತೆಗೆದುಕೊಂಡು ಹೋಗುವ ಸಂದರ್ಭ ಕೇರಳ ನೋಂದಣಿಯ ಇನೋವಾ ಹಾಗೂ ಎರ್ಟಿಗ ಕಾರಿನಲ್ಲಿ ಬಂದ ೭-೮ ಮಂದಿ ದುಷ್ಕರ್ಮಿಗಳ ತಂಡ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಕಾರಿನಲ್ಲಿದ್ದವರನ್ನು ಕೆಳಗಿಳಿಸಿ ಗಣೇಶ್ ಹಾಗೂ ಸುರೇಶ್ ಅವರನ್ನು ಕಾರಿನಲ್ಲಿ ರೂ. ೧೦ ಲಕ್ಷ ಹಣ ಸಮೇತ ಅಪಹರಿಸಿಕೊಂಡು ಹೋಗಿರುವುದಾಗಿ ದೂರು ದಾಖಲಾಗಿದೆ. ಕಲಂ ೩೧೦(೪), ೩೧೧, ೧೪೦ (೧) ಬಿ.ಎನ್.ಎಸ್. ಅಡಿ ಪ್ರಕರಣ ದಾಖಲಾಗಿದೆ. ೪ಮೂರನೇ ಪುಟಕ್ಕೆ ಕೋಟ್ಯಂತರ ರೂಪಾಯಿಗಾಗಿ ದರೋಡೆ ನಡೆದ ಬಗ್ಗೆ ಅನುಮಾನವಿದೆ. ಈ ಕುರಿತು ಕೆಲವರನ್ನು ವಿಚಾರಣೆಗೊಳಪಡಿಸಲಾಗಿದೆ. ೨ ದಿನಗಳಲ್ಲಿ ಅಧಿಕೃತ ಮಾಹಿತಿ ಮಾಧ್ಯಮ ಮೂಲಕ ಪ್ರಕಟಿಸುತ್ತೇನೆ. ತನಿಖೆ ಪ್ರಗತಿಯಲ್ಲಿದ್ದು, ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆ.

-ಕೆ. ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ