ಮಡಿಕೇರಿ, ಅ. ೧೬: ಕಾರಿನಲ್ಲಿ ಬಂದ ದರೋಡೆಕೋರರು ಚಿನ್ನದ ವ್ಯಾಪಾರಿ ಮೇಲೆ ಹಲ್ಲೆಗೈದು ಕೋಟ್ಯಂತರ ರೂಪಾಯಿ ಹಣ ದರೋಡೆ ನಡೆಸಿದ್ದು, ಪ್ರಕರಣಕ್ಕೆ ಸಂಬAಧಿಸಿದ ಐವರನ್ನು ಪೊಲೀಸರು ವಶಕ್ಕೆ ಪಡೆದ ಬಗ್ಗೆ ಮೂಲಗಳಿಂದ ‘ಶಕ್ತಿ’ಗೆ ಖಾತ್ರಿಯಾಗಿದ್ದು, ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳಿಗಾಗಿ ಶೋಧ ತೀವ್ರಗೊಂಡಿದೆ.
ಕೇರಳ ಮೂಲದ ಕ್ಯಾಲಿಕಟ್ ಜಿಲ್ಲೆಯ ಅರಿಕ್ಕುಲಾಡ್ ಗ್ರಾಮದ ನಿವಾಸಿ, ವಡಗರ ಎಂಬಲ್ಲಿರುವ ಶ್ರೇಯಾ ಜ್ಯುವೆಲ್ಲರಿ ಮಾಲೀಕ ಅಪ್ಪಾಸೋ (೩೯) ಎಂಬವರಿAದ ಹಣ ದರೋಡೆ ನಡೆದ ಬಗ್ಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರು ಮಹಾರಾಷ್ಟç ಮೂಲದ ಥಾಣೆ ಜಿಲ್ಲೆಯ ಸಚಿನ್ ಯಾಮಾಜಿ ಧೂಧಲ್ (೨೪), ಮಹಾರಾಷ್ಟç ಪೊಲೀಸ್ ಇಲಾಖೆಯಲ್ಲಿ ಥಾಣೆ ಸಿಟಿಯ ಕಲ್ವ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹೆಡ್ ಕಾನ್ಸೆ÷್ಟÃಬಲ್ ಆಗಿದ್ದ ಬಾಬಾ ಸಾಹೇಬ್ ಚೌಗಲ್ (೩೨), ಸಾಂಗ್ಲಿ ಜಿಲ್ಲೆಯ ಅಬಾ ಸಾಹೇಬ್ ಶೆಂಡಗೆ (೩೦) ಯುವರಾಜ್ ಸಿಂಧೆ (೨೫) ಬಂದು ಹಕ್ಕೆ (೨೦) ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಮತ್ತಿಬ್ಬರು ೪ಮೂರನೇ ಪುಟಕ್ಕೆ (ಮೊದಲ ಪುಟದಿಂದ)
ಆರೋಪಿಗಳಾದ ರಾಬರ್ಟ್ ಹಾಗೂ ಕಮಲೇಶ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ಏನಿದು ಪ್ರಕರಣ?
ದೂರುದಾರ ಅಪ್ಪಾಸೋ ತನ್ನ ಸ್ನೇಹಿತ ಲಹು ಅವರ ಕೆ.ಎಲ್ ೧೧-ಬಿಕೆ-೯೭೦೩ ನೋಂದಣಿಯ ಬ್ರೀಜಾ ಕಾರಿನಲ್ಲಿ ಲಹು ಅವರ ಕುಟುಂಬಸ್ಥರ ಮನೆಯಿರುವ ಬಾಳುಗೋಡಿಗೆ ಬಂದು ಲಹು ಅವರಿಗೆ ಸೇರಿದ ಹಣವನ್ನು ಕಾರಿನ ಸೀಕ್ರೆಟ್ ಲಾಕರ್‌ನಲ್ಲಿಟ್ಟು ತೆಗೆದುಕೊಂಡು ಹೋಗುವ ಸಂದರ್ಭ ವ್ಯಾಗನರ್ ಕಾರಿನಲ್ಲಿ ಬಂದ ೫ ಮಂದಿ ದುಷ್ಕರ್ಮಿಗಳು ಅಡ್ಡಗಟ್ಟಿ ದೊಣ್ಣೆಯಿಂದ ಹಲ್ಲೆ ಮಾಡಿ ರೂ. ೧೦,೪೦೦ ಹಾಗೂ ಮೊಬೈಲ್ ಪೋನ್ ಅನ್ನು ದರೋಡೆಗೈದು ಅಪ್ಪಾಸೋ ಅವರನ್ನು ವ್ಯಾಗನರ್ ಕಾರಿನಲ್ಲಿ ಕರೆದೊಯ್ದು, ಅಪ್ಪಾಸೋ ಚಲಾಯಿಸಿಕೊಂಡು ಬಂದ ಕಾರನ್ನು ಕದ್ದೊಯ್ದು ಮಾರ್ಗ ಮಧ್ಯೆ ತಳ್ಳಿ ಬೀಳಿಸಿ ಪರಾರಿಯಾಗಿರುವುದಾಗಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ ೩೧೦(೪), ೩೧೧ ಬಿ.ಎನ್.ಎಸ್. ಅಡಿ ಪ್ರಕರಣ ದಾಖಲು ಮಾಡಲಾಗಿದೆ.
ರೂ. ೪ ಕೋಟಿಗಾಗಿ ದರೋಡೆ?
ಪ್ರಕರಣದ ಹಿಂದೆ ರೂ. ೪ ಕೋಟಿಯ ಗುಮಾನಿ ಕಂಡು ಬರುತ್ತಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಅಧಿಕೃತ ಮಾಹಿತಿ ಇನ್ನಷ್ಟೆ ದೊರಕಬೇಕಾಗಿದೆ.
ದೂರುದಾರ ಅಪ್ಪಾಸೋ ವಡಗರ ನಗರದಲ್ಲಿ ಶ್ರೇಯಾ ಜ್ಯುವೆಲ್ಲರಿ ಅಂಗಡಿಯನ್ನು ಇಟ್ಟುಕೊಂಡು ಚಿನ್ನದ ವ್ಯಾಪಾರ ಮಾಡುತ್ತಿದ್ದು, ಶಿವಶಕ್ತಿ ಜ್ಯುವೆಲ್ಲರಿ ನಡೆಸುತ್ತಿದ್ದ ಕೆ.ಪಿ. ಲಹು ಪರಿಚತರಾಗಿದ್ದರು. ಅಪ್ಪಾಸೋ ಅವರು ಖರೀದಿಸಿದÀ ಚಿನ್ನವನ್ನು ಲಹು ಅವರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಳಿಕ ಆ ಚಿನ್ನವನ್ನು ಅಹÀÄಮದಾಬಾದ್‌ನಲ್ಲಿರುವ ಕಮಲೇಶ್ ಅವರ ಮ್ಯಾನೇಜರ್ ರಾಬರ್ಟ್ ಎಂಬವರ ಮೂಲಕ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಚಿನ್ನಾಭರಣವನ್ನು ರಾಬರ್ಟ್ಗೆ ನೀಡಲು ಲಹು ಅವರು ಅಪ್ಪಾಸೋ ಅವರಿಗೆ ಹೇಳುತ್ತಿದ್ದರು. ಈ ಕಾರಣದಿಂದ ಬಾಳುಗೋಡಿನಲ್ಲಿ ಲಹು ಅವರ ಸಂಬAಧಿ ಮನೆಗೆ ಕಳುಹಿಸುತ್ತಿದ್ದರು. ೫-೬ ಬಾರಿ ಅಪ್ಪಾಸೋ ಇದಕ್ಕಾಗಿಯೇ ಬಂದಿದ್ದರು ಎನ್ನಲಾಗಿದೆ. ಅದರಂತೆ ತಾ. ೧೫ ರಂದು ಬಾಳುಗೋಡಿಗೆ ಅಪ್ಪಾಸೋ ಬಂದಾಗ ಅಲ್ಲಿ ರಾಬರ್ಟ್ ಕಡೆಯವರಿದ್ದರು. ಸ್ವಲ್ಪ ಸಮಯದ ನಂತರ ‘ಲಹು ಅವರಿಗೆ ಕೊಡಬೇಕಾದ ಹಣ ಸಿಕ್ರೇಟ್ ಲಾಕರ್‌ನಲ್ಲಿ ಇಟ್ಟಿದ್ದೇನೆ’ ಎಂದು ತಿಳಿಸಿದ ಮೇರೆಗೆ ಅಲ್ಲಿಂದ ಅಪ್ಪಾಸೋ ಕಾರ್ ಚಲಾಯಿಸಿಕೊಂಡು ತೆರಳುತ್ತಿದ್ದ ಸಂದರ್ಭ ವ್ಯಾಗನರ್ ಕಾರ್‌ನಲ್ಲಿ (ಎಂ.ಹೆಚ್-೦೫-ಇಎಲ್-೯೬೧೭) ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ಮಾಡಿ ಕಾರು ಸಹಿತ ಅಪ್ಪಾಸೋ ಅವರನ್ನು ಕರೆದೊಯ್ದು ಮಾರ್ಗ ಮಧ್ಯೆ ತಳ್ಳಿ ಬೀಳಿಸಿದ್ದು, ಅನಂತರ ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೀರಾಜಪೇಟೆ ಗ್ರಾಮಾಂತರ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಸಿಕ್ರೇಟ್ ಲಾಕರ್‌ನಲ್ಲಿ ಬರೋಬ್ಬರಿ ರೂ. ೪ ಕೋಟಿ ಇತ್ತು ಎನ್ನಲಾಗಿದ್ದು, ಇದನ್ನು ತಿಳಿದು ಕಳ್ಳತನಕ್ಕೆ ಮುಂದಾಗಿರುವ ಬಗ್ಗೆ ಅನುಮಾನ ಮೂಡಿದೆ. ಕೋಟ್ಯಂತರ ರೂಪಾಯಿ ನಗದು ದಾಖಲಾತಿಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ತನಿಖೆಯಿಂದ ಸತ್ಯಾಂಶ ತಿಳಿಯಬೇಕಾಗಿದೆ.