ನಾಪೋಕ್ಲು, ಅ. ೧೬: ನಾಪೋಕ್ಲು ಸಹಕಾರ ಮಹಿಳಾ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಶಾರದಾಪೂಜೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.

ಸಮಾಜದ ಅಧ್ಯಕ್ಷೆ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಶಾರದಾದೇವಿಯ ಭಾವಚಿತ್ರವನ್ನು ಅಲಂಕರಿಸಿದ ಮಂಟಪದಲ್ಲಿರಿಸಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ತೀರ್ಥಪ್ರಸಾದವನ್ನು ವಿತರಿಸಲಾಯಿತು. ಪೂಜಾ ವಿಧಿ ವಿಧಾನಗಳನ್ನು ಶ್ರೀ ಮಕ್ಕಿ ಶಾಸ್ತಾವು ದೇವಾಲಯದ ಅರ್ಚಕ ದಿವಾಕರ ಭಟ್ ನೆರವೇರಿಸಿದರು.

ಈ ಸಂದರ್ಭ ಸಹಕಾರ ಮಹಿಳಾ ಸಮಾಜದ ಉಪಾಧ್ಯಕ್ಷೆ ಬೊಪ್ಪಂಡ ಶೈಲಾ ಬೋಪಯ್ಯ, ನಿರ್ದೇಶಕರಾದ ಬಿದ್ದಾಟಂಡ ಗಿರಿಜಾ ಬೋಪಣ್ಣ, ಕೇಟೋಳಿರ ಶಾರದಾ ಪಳಂಗಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕುಂಡ್ಯೋಳAಡ ಕವಿತಾ ಮುತ್ತಣ್ಣ, ಅಪ್ಪಾರಂಡ ಡೇಸಿ ತಿಮ್ಮಯ್ಯ, ಪುಲ್ಲೆರ ಪದ್ಮಿನಿ ಭೀಮಯ್ಯ, ಕಾರ್ಯದರ್ಶಿ ಕೆ.ಹೆಚ್. ರಾಜೇಶ್ವರಿ ಲೋಕೇಶ್ ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.