ಭಾಗಮಂಡಲ, ಅ. ೧೫: ಕಾವೇರಿ ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ಭಾಗಮಂಡಲ ತಲಕಾವೇರಿ ಕ್ಷೇತ್ರಗಳಲ್ಲಿ ಅಂತಿಮ ಹಂತದ ಸಿದ್ಧತೆಗಳು ಬಿರುಸಿನಿಂದ ನಡೆಯುತ್ತಿವೆ. ಇಂದು ಹೆಚ್ಚುವರಿ ಡಿವೈಎಸ್ಪಿ ಬಾರಿಕೆ ದಿನೇಶ್ ಭದ್ರತಾ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು ಅಗತ್ಯ ಕ್ರಮ ಕೈಗೊಂಡಿರುವ ಬಗ್ಗೆ ಸಿಬ್ಬಂದಿ ವರ್ಗಕ್ಕೆ ಮಾಹಿತಿ ನೀಡಿದರು.

ತಲಕಾವೇರಿ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆಗಳು ನಡೆದಿದ್ದು, ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡಿವೆ. ಪೆಂಡಾಲ್‌ಗಳನ್ನು ಬಳಸಲಾಗಿದೆ. ಪತ್ರಕರ್ತರಿಗೆ ಹಾಗೂ ವಿಐಪಿಗಳಿಗೆ ಪ್ರತ್ಯೇಕ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಕಾವೇರಿ ತೀರ್ಥ ಪಡೆಯಲು ೬ ಡ್ರಮ್‌ಗಳನ್ನು ಬಳಸಿಕೊಳ್ಳಲಾಗುವುದು ತೀರ್ಥೋದ್ಭವಕ್ಕೆ ಮುನ್ನ ಕೊಳಕ್ಕೆ ಈ ವರ್ಷ ಬಿಂದಿಗೆ ಬಾಟಲಿಗಳನ್ನು ಕೊಂಡೊಯ್ಯುವAತಿಲ್ಲ. ತೀರ್ಥೋದ್ಭವದ ಬಳಿಕ ಇದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಪ್ಲಾಸ್ಟಿಕ್ ಬಳಸುವಂತಿಲ್ಲ. ಹಣ್ಣು ಕಾಯಿಸೇವೆ ಎಂದಿನAತೆ ದೇವಾಲಯದ ಮೇಲ್ಭಾಗದಲ್ಲಿ ನಡೆಯುತ್ತದೆ .ಪ್ರಶಾಂತ್ ಆಚಾರ್ಯ ತೀರ್ಥೋದ್ಭವದ ಸಂಕಲ್ಪ ಮಾಡಲಿದ್ದು ೧೧:೩೦ ರ ನಂತರ ಪೂಜಾ ಕೈಂಕರ್ಯಗಳು ನಡೆಯಲಿದೆ. ಕುಂಡಿಕೆ ಬಳಿ ೮ ರಿಂದ ೧೦ ಅರ್ಚಕರ ತಂಡ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವಚ್ಛತೆಯೊಂದಿಗೆ ಹಾಗೂ ಕ್ಷೇತ್ರಗಳಲ್ಲಿ ದೀಪಾಲಂಕಾರ ದೊಂದಿಗೆ ತೀರ್ಥೋದ್ಭವದ ಸಂಭ್ರಮಕ್ಕೆ ಕ್ಷೇತ್ರಗಳು ಅಣಿಯಾಗಿವೆ.

ಪರಿಶೀಲನೆ ವೇಳೆ ಡಿವೈಎಸ್‌ಪಿ ಸೂರಜ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಇತರರಿದ್ದರು.

- ಸುನಿಲ್ ಕುಯ್ಯಮುಡಿ