ಗೋಣಿಕೊಪ್ಪ ವರದಿ, ಅ. ೧೫: ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಬೊಡಿ ನಮ್ಮೆಯಲ್ಲಿ ಬಡುವಂಡ ಶ್ಲೋಕ್ ಸುಬ್ಬಯ್ಯ ಮೂರು ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಸಾಧನೆ ಮಾಡಿದರು.
.೨೨ ರೈಫಲ್, ೧೨ ಬೋರ್ ಹಾಗೂ ಏರ್ ಗನ್ ವಿಭಾಗ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿಕೊಂಡರು.
ಫಲಿತಾAಶ: .೨೨ ರೈಫಲ್ ವಿಭಾಗದಲ್ಲಿ ಪುತ್ತರಿರ ನಂಜಪ್ಪ ಪ್ರಥಮ, ಬಡುವಂಡ ಶ್ಲೋಕ್ ಸುಬ್ಬಯ್ಯ ದ್ವಿತೀಯ, ಕುಟ್ಟಂಡ ಅದಿತಿ ತೃತೀಯ, ೧೨ ಬೋರ್ ವಿಭಾಗದಲ್ಲಿ ಚೆಪ್ಪುಡಿರ ಉತ್ತಯ್ಯ, ದೇಯಂಡ ಅಯ್ಯಪ್ಪ ದ್ವಿತೀಯ, ಬಡುವಂಡ ಶ್ಲೋಕ್ ಸುಬ್ಬಯ್ಯ ತೃತೀಯ, ಏರ್ ರೈಫಲ್ ವಿಭಾಗದಲ್ಲಿ ಬಡುವಂಡ ಶ್ಲೋಕ್ ಸುಬ್ಬಯ್ಯ ಪ್ರಥಮ, ರಮೇಶ್ ಬಾಬು ದ್ವಿತೀಯ, ರಿಸ್ತಾ ತೃತೀಯ ಸ್ಥಾನ ಪಡೆದರು.
೧೨ ವರ್ಷ ವಯೋಮಿತಿಯವರಿಗೆ ನೀಡಿದ್ದ ವಿಶೇಷ ಅವಕಾಶದ ಸ್ಪರ್ಧೆಯಲ್ಲಿ ೨೪ ಕಿರಿಯರು ಪಾಲ್ಗೊಂಡು ಪ್ರೋತ್ಸಾಹಕರ ಬಹುಮಾನಕ್ಕೆ ಭಾಜನರಾದರು. ದೃತಿ ದೇಚಮ್ಮ, ಕಡೇಮಾಡ ಸ್ವರೂಪ್, ಹರ್ಷ ದೇವಯ್ಯ, ಆಯುಷ್ ಪೂವಣ್ಣ, ಕಾಳೇಂಗಡ ರಕ್ಷಿತ್, ಮಂಡೇಪAಡ ಕಾರ್ಯಪ್ಪ, ಮಳವಂಡ ಬೆಳ್ಯಪ್ಪ, ಶರಣ್ ಸೋಮಣ್ಣ, ಕುಟ್ಟಂಡ ಲಿಕಿತ್ ಕುಟ್ಟಪ್ಪ, ಕಬ್ಬಚ್ಚಿರ ಸಾತ್ವಿಕ್, ಅಚ್ಚಪಂಡ ಅಭಯ್ ಬಿದ್ದಪ್ಪ, ಸಣ್ಣುವಂಡ ಅರ್ಜಿನ್ ವಿಶ್ವನಾಥ್, ದೈನಿಕ್ ಬೆಳ್ಯಪ್ಪ, ಕವನ್ ಕಾರ್ಯಪ್ಪ, ಶ್ಲೀಕ್ ಸೀಮಯ್ಯ, ರಿಶನ್ ಪೊನ್ನಪ್ಪ, ಶರಣ್ ಸೋಮಣ್ಣ, ಚಿತನ್, ಚೆಪ್ಪುಡಿರ ನಕ್ಷಾ ಪೊನ್ನಮ್ಮ, ಆಪಟ್ಟಿರ ಶಿಹಾಯಿ ಅಪ್ಪಯ್ಯ, ಚೆಪ್ಪುಡಿರ ಶಿನಾನ್ ಸೋಮಣ್ಣ ಎದೆಗಾರಿಕೆ ತೋರಿದರು.
ಕಾಫಿ ಬೆಳೆಗಾರ ಸಣ್ಣುವಂಡ ಎಂ. ಸುರೇಶ್, ಹಿರಿಯ ರ್ಯಾಲಿ ಪಟು ಮಾಳೇಟಿರ ಜಗತ್ ನಂಜಪ್ಪ, ಮಾಯಮುಡಿ ಪ್ಯಾಕ್ಸ್ ಅಧ್ಯಕ್ಷ ಆಪಟ್ಟಿರ ಎ. ಬೋಪಣ್ಣ, ನಿರ್ದೇಶಕಿ ಮಲ್ಲೇಂಗಡ ಎಂ. ಮಮತ, ಮಾಯಮುಡಿ ಗ್ರಾಮ ಪಂಚಾಯಿತಿ ಸದಸ್ಯ ಆಪಟ್ಟಿರ ವಿಠಲ ನಾಚಯ್ಯ, ಚಿಂಡಮಾಡ ನಾಚಪ್ಪ, ಮುಕ್ಕಾಟಿರ ಬೋಪಣ್ಣ, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಗೌರವ ಅಧ್ಯಕ್ಷ ಸಣ್ಣುವಂಡ ಬಿ. ರಮೇಶ್, ಅಧ್ಯಕ್ಷ ಸಣ್ಣುವಂಡ ವಿನು ವಿಶ್ವನಾಥ್, ಉಪಾಧ್ಯಕ್ಷ ಆಪಟ್ಟಿರ ಸಿ. ಪ್ರದೀಪ್, ಬೊಡಿನಮ್ಮೆ ಸಂಚಾಲಕ ಚೆಪ್ಪುಡಿರ ಪ್ರದೀಪ್ ಪೂವಯ್ಯ ಇದ್ದರು.