ಕೂಡಿಗೆ, ಅ. ೧೪: ಹನುಮ ಜಯಂತಿ ಅಂಗವಾಗಿ ಹಾರಂಗಿ ಭಾಗದ ಟೀಮ್ ವೀರಹನುಮ ಸೇವಾ ಸಮಿತಿ ವತಿಯಿಂದ ಎರಡನೇ ವರ್ಷದ ಹನುಮ ಜಯಂತೋತ್ಸವ ಪೂರ್ವಭಾವಿ ಸಭೆಯು ಚಿಕ್ಕತ್ತೂರು ಗ್ರಾಮದ ಸಮುದಾಯ ಭವನದಲ್ಲಿ ಸಮಿತಿಯ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅತ್ತೂರು, ಯಡವನಾಡು, ಹುದುಗೂರು, ಹಾರಂಗಿ, ದೊಡ್ಡತ್ತೂರು, ಚಿಕ್ಕತ್ತೂರು, ಸುಂದರನಗರ ಒಳಗೊಂಡAತೆ ಏಳು ಗ್ರಾಮಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗಿಯಾಗಿದ್ದರು.ಈ ಸಂದರ್ಭ ಡಿ.೨ರಂದು ಹನುಮ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು.

ಈ ಸಂದರ್ಭ ಸಂಘಟನಾ ಕಾರ್ಯದರ್ಶಿ ಸ್ವಾಮಿ, ಕಾರ್ಯದರ್ಶಿ ಚೇತನ್, ಉಪಾಧ್ಯಕ್ಷರುಗಳಾದ, ಮಲ್ಲಪ್ಪ, ಸಜನ್ ಕಿಶೋರ್, ರಾಮೇಗೌಡ, ರಂಗಸ್ವಾಮಿ, ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.